ಉಪ್ಪು ಮತ್ತು ಆರೋಗ್ಯ | ಸೈಂದವ ಉಪ್ಪು ಉಳಿದ ಉಪ್ಪಿಗಿಂತ ಆರೋಗ್ಯಕ್ಕೆ ಯಾಕೆ ಒಳ್ಳೆಯದು..?

March 11, 2024
1:36 PM

“ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ದೇವರಿಲ್ಲ” ಎಂಬ ಮಾತು ಕನ್ನಡದಲ್ಲಿ ತುಂಬಾ ಹಳೆಯದು. ಊಟ ತಿಂಡಿ ಇರಲಿ.. ಉಪ್ಪು(Salt) ಇಲ್ಲದೆ ಒಂದೇ ಒಂದು ದಿನವನ್ನು ನಾವು ಊಹಿಸಲು ಸಾಧ್ಯವಿಲ್ಲ. ಉಪ್ಪು ನಮ್ಮ ಆಹಾರದಲ್ಲಿ(Food) ಅಷ್ಟೊಂದು ಮಹತ್ವದ ಘಟಕವಾಗಿದೆ. ಉಪ್ಪು ರುಚಿಗೆ ಮಾತ್ರವಲ್ಲ ದೇಹದ(Body)ಒಳಗಿನ ಕೆಲವರ ರಾಸಾಯನಿಕ ಕ್ರಿಯೆಗಳಿಗೂ(Chemical Process) ಅಗತ್ಯ ದೇಹದಲ್ಲಿ ಉಪ್ಪಿನ ಅಂಶ ಇಲ್ಲದೆ ನಾವು ಬದುಕಿರಲು ಸಾಧ್ಯವೇ ಇಲ್ಲ.

Advertisement
Advertisement
Advertisement
Advertisement

ರಾಸಾಯನಿಕವಾಗಿ ಹೇಳಬೇಕೆಂದರೆ ಒಂದು ಸೋಡಿಯಂ(Na) ನ ಪರಮಾಣು ಮತ್ತು ಒಂದು ಕ್ಲೋರಿನ್(Cl) ನ ಪರಮಾಣು ಒಟ್ಟಿಗೆ ಬೆಸೆದು ಸೋಡಿಯಂ ಕ್ಲೋರೈಡ್ (NaCl) ಎಂಬ ಸಂಯುಕ್ತ ತಯಾರಾಗುತ್ತದೆ. ಇದೇ ನಮ್ಮ ಅಡುಗೆಯ ಸಾಮಾನ್ಯ ಉಪ್ಪು. ಆರು ರುಚಿಗಳ ಪೈಕಿ ಉಪ್ಪು ರುಚಿ ಒಂದು ವಿಶಿಷ್ಟ ರುಚಿ. ಸಾಮಾನ್ಯವಾಗಿ ಎಲ್ಲ ಬಗೆಯ ಲವಣಗಳು ಉಪ್ಪುರುಚಿಯನ್ನು ಹೊಂದಿರುತ್ತವೆ. ನಮ್ಮ ದೇಹದಲ್ಲಿ ನರಗಳ ಪ್ರಚೋದನೆಗಳನ್ನು ನಡೆಸಲು, ಸ್ನಾಯುಗಳನ್ನು ಆಕುಂಚನ ಮತ್ತು ಪ್ರಸರಣಗೊಳಿಸಲು ಮತ್ತು ನೀರು ಮತ್ತು ಖನಿಜಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಮಾನವ ದೇಹಕ್ಕೆ ಸಣ್ಣ ಪ್ರಮಾಣದ ಸೋಡಿಯಂ ಅಗತ್ಯವಿರುತ್ತದೆ.  ಈ ಸೋಡಿಯಂ ನಮಗೆ ನೇರವಾಗಿ ಉಪ್ಪು ಹಾಗೂ ಅನೇಕ ಆಹಾರ ಪದಾರ್ಥಗಳಾದ ತರಕಾರಿಗಳು ಹಣ್ಣುಗಳು ಮತ್ತು ಧಾನ್ಯಗಳ ಮೂಲಕ ದೊರೆಯುತ್ತದೆ.

Advertisement

ಆದರೆ ದೇಹದಲ್ಲಿ ಹೆಚ್ಚಿನ ಉಪ್ಪಿನ ಪ್ರಮಾಣವೋ ಅಧಿಕಾರಕ್ತ್ತದ ಒತ್ತಡ ಜಲಸಂಗ್ರಹಣೆ ಉಂಟು ಮಾಡುವ ಮೂಲಕ ಪಾರ್ಶ್ವ ವಾಯು ಹೃದಯಘಾತ ದಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯ ಉಪ್ಪಿನಲ್ಲಿ ಸೋಡಿಯಂ ಮತ್ತು ಕ್ಲೋರಿನ್ ಬಿಟ್ಟರೆ ಇನ್ನೂ ಪೋಷಕಾಂಶಗಳು ಇಲ್ಲದಿರುವುದರಿಂದ ಇದು ನಮ್ಮ ಆಹಾರದಲ್ಲಿ ಅಗತ್ಯದ ಪದಾರ್ಥವಲ್ಲ. ನಮ್ಮ ಆಹಾರದಲ್ಲಿನ 5 ಬಿಳಿ ಪದಾರ್ಥ ಗಳನ್ನು ಆಯುರ್ವೇದ ಪ್ರಕಾರ ಮಂದ ವಿಷ ಗಳೆಂದು ಪರಿಗಣಿಸಲಾಗಿದೆ – ಅಕ್ಕಿ, ಮೈದಾ, ಹಾಲು, ಉಪ್ಪು, ಸಕ್ಕರೆ. ಆದ್ದರಿಂದ ಸಾಮಾನ್ಯ ಒಪ್ಪನ್ನು ಬಳಸುವುದು ಆರೋಗ್ಯಕ್ಕೆ ಸೂಕ್ತವಲ್ಲ.

ಹಾಗಾದರೆ ಇದಕ್ಕೆ ವಿಕಲ್ಪವೇನು? : ಆಯುರ್ವೇದವು ಸಮುದ್ರದ ಸಾಮಾನ್ಯ ಉಪ್ಪಿನ ಬದಲು ಸಿಂಧು(ಸೈಂಧವ) ಲವಣ ಅಥವಾ ಕಲ್ಲು ಉಪ್ಪನ್ನು ಬಳಸಲು ಅನುಮೋದಿಸುತ್ತದೆ. ಈ ಉಪ್ಪಿನಲ್ಲಿ ಸುಮಾರು 84 ಪ್ರಕಾರದ ಖನಿಜಗಳು ಮತ್ತು ಉಪಯುಕ್ತ ಪೋಷಕಾಂಶಗಳು ಇರುವುದರಿಂದ ಇದನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ನಿತ್ಯದ ಬಳಕೆಯಲ್ಲಿ ಸಮುದ್ರದ ಸಾಮಾನ್ಯ ಉಪ್ಪಿನ ಬದಲು ಈ ಗುಲಾಬಿ ಉಪ್ಪನ್ನು ಬಳಸುವುದು ಹೆಚ್ಚು ಆರೋಗ್ಯಕರ. ಸೈಂಧವ ಉಪ್ಪನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸಿಂಧೂ ಉಪ್ಪಿನ ಪ್ರಯೋಜನಗಳನ್ನು ತಿಳಿಯೋಣ…

Advertisement

ಸೈಂದವ ಉಪ್ಪು: ಸಮುದ್ರ ಅಥವಾ ಸರೋವರದಿಂದ ಉಪ್ಪುನೀರು ಆವಿಯಾದಾಗ, ಅದು ವರ್ಣರಂಜಿತ ಹರಳುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಸೈಂಧವ ಲವಣವನ್ನು ತಯಾರಿಸಲಾಗುತ್ತದೆ. ಇದು ಒಂದು ರೀತಿಯ ಖನಿಜವಾಗಿದೆ, ಇದು ಆಹಾರಕ್ಕೆ ಸೂಕ್ತವಾಗಲು ಯಾವುದೇ ರಾಸಾಯನಿಕ ಸಂಸ್ಕರಣೆಯ ಅಗತ್ಯವಿರುವುದಿಲ್ಲ. ಇದನ್ನು ಹಿಮಾಲಯನ್ ಉಪ್ಪು, ಕಲ್ಲು ಉಪ್ಪು, ಲಾಹೋರಿ ಉಪ್ಪು ಎಂದೂ ಕರೆಯುತ್ತಾರೆ. ಸೈಂಧವ ಉಪ್ಪಿನಲ್ಲಿ 84 ಬಗೆಯ ಖನಿಜಗಳಿವೆ. ಇದು ಮೆಗ್ನೀಸಿಯಮ್ ಮತ್ತು ಸಲ್ಫರ್‌ನಿಂದ ಕೂಡಿದೆ.

ಸೈಂದವ ಉಪ್ಪು ಏಕೆ ತುಂಬಾ ಪ್ರಯೋಜನಕಾರಿ? :ಸಾಮಾನ್ಯ ಉಪ್ಪಿಗೆ ಹೋಲಿಸಿದರೆ ಸೈಂಧವ ಉಪ್ಪಿನಲ್ಲಿ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು ಮುಂತಾದ ಅಂಶಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಕೋಬಾಲ್ಟ್ ಸಹ ಸೈಂಧವ ಉಪ್ಪಿನಲ್ಲಿ ಕಂಡುಬರುತ್ತದೆ, ಇದು ಸಾದಾ ಉಪ್ಪಿಗಿಂತ ಹೆಚ್ಚು ಪೌಷ್ಟಿಕವಾಗಿದೆ.

Advertisement

ಸೈಂದವ ಉಪ್ಪನ್ನು ಸೇವಿಸಿ, ಈ ರೋಗಗಳಿಂದ ಮುಕ್ತಿ: ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಸೈಂಧವ ಉಪ್ಪು ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿದೆ. ಕೀಲು ನೋವು ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ಸೈಂಧವ ಉಪ್ಪು ಪರಿಹಾರ ನೀಡಬಹುದು. ಕಲ್ಲು ಉಪ್ಪನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಸಂಕಲನ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ
ಅಡಿಕೆ ಆಮದು ಮೇಲೆ ನಿಗಾ ವಹಿಸಲು ಸಚಿವರಿಗೆ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ 
February 6, 2025
11:33 PM
by: ದ ರೂರಲ್ ಮಿರರ್.ಕಾಂ
ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror