ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಬೋಳು ಹುಳಿಗೆ ಬೇಕಾಗುವ ಸಾಮಗ್ರಿಗಳು : ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ 1 ಗಂಟೆ ಕಾಲ ನೀರಿನಲ್ಲಿ ಹಾಕಿ ಇಡಿ. ನಂತರ ಸೋಸಿ, ಮೆಣಸಿನ ಪುಡಿ 1 ಚಮಚ, ಅರಿಸಿನ ಪುಡಿ ಸ್ವಲ್ಪ, ಜೀರಿಗೆ 3/4 ಚಮಚ, ಹಿಂಗು ಸ್ವಲ್ಪ, ಬೆಲ್ಲ ರುಚಿಗೆ ತಕ್ಕಷ್ಟು,ಕರಿಬೇವಿನ ಸೊಪ್ಪು,ಹುಣಸೆ ರಸ 1/4 ಕಪ್.
ಮಾಡುವ ವಿಧಾನ : ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಕುಕ್ಕರ್ ಗೆ ಹಾಕಿ ನೀರು ಸೇರಿಸಿ ಬೇಯಿಸಿಕೊಳ್ಳಿ.ನಂತರ ಮೆಣಸಿನ ಪುಡಿ, ಅರಿಸಿನ ಪುಡಿ , ಬೆಲ್ಲ , ಹುಣಸೆ ರಸ , ಹಾಕಿ ಕುದಿಸಿ ಸ್ಟವ್ ಆಫ್ ಮಾಡಿ.ಇದಕ್ಕೆ , ಸಾಸಿವೆ, ಎಣ್ಣೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಜೀರಿಗೆ, ಹಿಂಗು ಸ್ವಲ್ಪ ಹಾಕಿ ಒಗ್ಗರಣೆ ಚಟಪಟಾಯಿಸಿ. ಬಿಸಿ ಬಿಸಿಯಾದ ಅನ್ನದ ಜೊತೆ ಸೂಪರ್.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

