ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ 1 ಕಪ್
ಬಿಸಿ ನೀರಿನಲ್ಲಿ ಹಾಕಿ ಇಡಿ, ನಂತರ ಚೆನ್ನಾಗಿ ತೊಳೆದು ತೆಳ್ಳಗೆ ಕಟ್ ಮಾಡಿ. ನೀರಿನಲ್ಲಿ ಹಾಕಿ ತೆಗೆಯಿರಿ.
ಮಾಡುವ ವಿಧಾನ : ಫ್ರೈ ಮಾಡಲು ಕೊತ್ತಂಬರಿ ಬೀಜ 1 ಚಮಚ, ಜೀರಿಗೆ 1 ಚಮಚ, ಕೆಂಪು ಮೆಣಸು 2, ಹಾಕಿ ಫ್ರೈ ಮಾಡಿ ನಂತರ ತರಿ ತರಿಯಾಗಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವಿನ ಸೊಪ್ಪು, ಕೆಂಪು ಮೆಣಸು ಹಾಕಿ ಒಗ್ಗರಣೆ ಚಟಪಟಾಯಿಸಿ ಇದಕ್ಕೆ ಹಲಸಿನ ಕಾಯಿ , ನೀರು, ಮೆಣಸಿನ ಪುಡಿ 1/2 ಚಮಚ, ಅರಿಸಿನ ಪುಡಿ 1/2 ಚಮಚ , ಬೆಲ್ಲ ಚಿಕ್ಕ ತುಂಡು,, ಹಾಕಿ ಬೇಯಿಸಿಕೊಳ್ಳಿ. ನಂತರ ರುಬ್ಬಿದ ಪುಡಿ, ಕಾಯಿತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟವ್ ಆಫ್ ಮಾಡಿ. ಇದಕ್ಕೆ ಉಪ್ಪು ಹಾಕುವ ಅಗತ್ಯವಿಲ್ಲ.ಬಿಸಿ ಬಿಸಿಯಾದ ಅನ್ನದ ಜೊತೆ ತುಪ್ಪ ಹಾಕಿ ತಿನ್ನಲು ತುಂಬಾ ರುಚಿಯಾಗಿರುತ್ತದೆ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

