ಸಂಪಾಜೆ | ದಿವಂಗತ ಬಾಲಚಂದ್ರ ಕಳಗಿ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ |

ಗ್ರಾಮಕಲ್ಯಾಣದ ಬಗ್ಗೆ ಯೋಚಿಸುತ್ತಾ, ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಸತತವಾಗಿ 3 ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿ, ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯ ಅಭಿವೃದ್ಧಿಯ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ  ಬಾಲಚಂದ್ರ ಕಳಗಿ ಇವರ ಸ್ಮರಣಾರ್ಥ ಸಂಪಾಜೆಯ ಆದರ್ಶ ಫ್ರೆಂಡ್ಸ್ ಚೆಡಾವು ಇವರ ಆಶ್ರಯದಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

Advertisement
Advertisement

ಶನಿವಾರ ಬೆಳಗ್ಗೆ  ಸಂಪಾಜೆ ಪಯಶ್ವಿನಿ ಸಹಕಾರಿ ಸಂಘದ ಬಾಲಚಂದ್ರ ಕಳಗಿ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವೆಂಕಪ್ಪ ಕಳಗಿ ಇವರು  ಉದ್ಘಾಟಿಸಿದರು. ಆದರ್ಶ ಪ್ರೆಂಡ್ಸ್ ಚೆಡಾವು ಇದರ ಅಧ್ಯಕ್ಷರಾದ  ಉದಯ ಹನಿಯಡ್ಕ ಸಭಾಧ್ಯಕ್ಷತೆ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ,  ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೊಡಗು ಜಿಲ್ಲಾ ಬಿಜೆಪಿ ವಕ್ತಾರ  ಮಹೇಶ್ ಜೈನಿ, ಬಿಜೆಪಿ ಮಡಿಕೇರಿ ಮಂಡಲ ಪ್ರಧಾನ ಕಾರ್ಯದರ್ಶಿ  ಉಮೇಶ್ ಸುಬ್ರಮಣಿ, ಗ್ರಾಮ ಪಂಚಾಯತ್ ಸಂಪಾಜೆ ಕೊಡಗು ಅಧ್ಯಕ್ಷೆ ನಿರ್ಮಲಾ ಭರತ್, ಪಯಶ್ವಿನಿ ಸಹಕಾರಿ ಸಂಘ ಸಂಪಾಜೆ  ಅಧ್ಯಕ್ಷ ಅನಂತ ಎನ್.ಸಿ  ಉಪಸ್ಥಿತರಿದ್ದರು.

Advertisement

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀ ಜಯಾನಂದ ಸಂಪಾಜೆ ಮತ್ತು ಕೊರೊನಾ ವಾರಿಯರ್ಸ್ ಆಗಿ ಶ್ರಮಿಸಿದ ಲೀಲಾಧರ ನೂಜೆಲು ಇವರನ್ನು ಸನ್ಮಾನಿಸಲಾಯಿತು.

Advertisement

ಲೀಲಾವತಿ ಕಲಾಯಿ ಇವರ ಪ್ರಾರ್ಥನೆ ಹಾಡಿದರು. ಯಶೋಧರ ಬಿ ಜೆ  ಸ್ವಾಗತಿಸಿದರು, ನಿರಂತ್ ದೇವಸ್ಯ ನಿರೂಪಿಸಿ, ಹರೀಶ್ ನೂಜೇಲು ವಂದಿಸಿದರು. ಸಂಪಾಜೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ಶುಭಾರಂಭಗೊಂಡಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸಂಪಾಜೆ | ದಿವಂಗತ ಬಾಲಚಂದ್ರ ಕಳಗಿ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ |"

Leave a comment

Your email address will not be published.


*