ಕೊಡಗು ಸಂಪಾಜೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ವಹಣೆ ಅಂಗವಾಗಿ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಗಪ್ಪಿ ಮತ್ತು ಗಾಂಬುಸಿಯಾ ಮೀನು ಸಾಕಾಣಿಕೆ ತೊಟ್ಟಿಗೆ ಮೀನನ್ನು ಬಿಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿರ್ಮಲ ಭರತ್, ಉಪಾಧ್ಯಕ್ಷರಾದ ಜಗದೀಶ್ ಪರಮಲೆ, ಸದಸ್ಯರಾದ ರಮಾದೇವಿ ಬಾಲಚಂದ್ರ ಕಳಗಿ, ಕುಮಾರ್ ಚೆದ್ಕಾರು, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಾದ ಡಾ. ರಿಷಬ್ ರೈ,
ಉದ್ಭವ್ ಸಂಸ್ಥೆ(ರಿ) ಆಡಳಿತಾಧಿಕಾರಿ ಮಲ್ಲಿಕಾರ್ಜುನ್ , ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪ ವಲಯ ಅರಣ್ಯಾಧಿಕಾರಿಗಳಾದ ವಿಜೇಂದ್ರ ಕುಮಾರ್ ಎಂ ಮತ್ತು ವಿನಯಕೃಷ್ಣ, ಅರಣ್ಯ ರಕ್ಷಕರಾದ, ಜನಾರ್ದನ, ಪುನೀತ್, ನಾಗರಾಜ್ ಹಾಗೂ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅರಣ್ಯ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel