ಸಂಪಾಜೆ ದರೋಡೆ ಪ್ರಕರಣ | 4 ಆರೋಪಿಗಳ ಬಂಧನ | ಮುಂದುವರಿದ ತನಿಖೆ |

March 30, 2022
11:52 PM
Advertisement

ಗ್ರಾಮೀಣ ಭಾಗವಾದ ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ  ಅಂಬರೀಶ್‌ ಭಟ್‌ ಎಂಬವರ ಮನೆಗೆ  ನುಗ್ಗಿದ ದರೋಡೆಕೋರರು  ಮಚ್ಚು ಹಿಡಿದು ಬೆದರಿಸಿ ಚಿನ್ನ ಹಾಗೂ ಸುಮಾರು 1.8 ಲಕ್ಷ ರೂಪಾಯಿ ದರೋಡೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

Advertisement
Advertisement
Advertisement

ಸಂಪಾಜೆಯಲ್ಲಿ  ಪೌರೋಹಿತ್ಯ ಹಾಗೂ ಜ್ಯೋತಿಷ್ಯ ಹೇಳುತ್ತಿದ್ದ ಅಂಬರೀಶ್‌ ಅವರ  ಮನೆಗೆ ಮಾ.20  ಭಾನುವಾರ ರಾತ್ರಿ ಸುಮಾರು 8.30  ರ ಹೊತ್ತಿಗೆ ನುಗ್ಗಿದ ದರೋಡೆಕೋರರು  ಅಂಬರೀಶ್‌ ಅವರ ಸೊಸೆ ಹಾಗೂ ಪತ್ನಿಯನ್ನು ಬೆದರಿಸಿ ದರೋಡೆ ಮಾಡಿದ್ದರು. ಈ ಸಮಯದಲ್ಲಿ ಅಂಬರೀಶ್‌ ಭಟ್‌ ಹಾಗೂ ಅವರ ಪುತ್ರ ಮನೆಯಲ್ಲಿ  ಇರಲಿಲ್ಲ.ಈ ಪ್ರಕರಣದ ಬಗ್ಗೆ ಅಂಬರೀಶ್‌ ಅವರ ಸೊಸೆ ಆಶಾ  ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು 4 ಆರೋಪಿಗಳನ್ನು  ಬಂಧಿಸಿದ್ದಾರೆ.

Advertisement

ಪ್ರಕರಣದ ಪತ್ತೆ ಬಗ್ಗೆ ಪೊಲೀಸ್‌ ಅಧೀಕ್ಷಕರಾದ ಸೋನಾವಣೆ ಋಷಿಕೇಶ್‌ ಭಗವಾನ್‌ ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ್‌ ಚಂದ್ರ ನಿರ್ದೇಶನದಂತೆ ಪೊಲೀಸ್‌ ಉಪಾಧೀಕ್ಷಕ ಗಾನಾ ಪಿ ಕುಮಾರ್‌ ಅವರು ಸುಳ್ಯ ಪೊಲೀಸ್‌ ವೃತ್ತನಿರೀಕ್ಷಕ ನವೀನ್‌ ಚಂದ್ರ ಜೋಗಿ  ನೇತೃತ್ವದಲ್ಲಿ ವಿವಿಧ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ತಮಿಳುನಾಡು ಮೂಲದ ಕಾರ್ತಿಕ್‌(38) ಹಾಗೂ ನರಸಿಂಹನ್‌(40) , ಹಾಸನ ಮೂಲದ ಯದುಕುಮಾರ್‌(33)  ಹಾಗೂ  ದೀಕ್ಷಿತ್‌ (26) ಅವರನ್ನು ಬಂಧಿಸಿ  ನಗದು ಹಾಗೂ ಕೆಲವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಾಹನ ಹಾಗೂ ಮೊಬೈಲ್‌ ವಶ ಪಡೆದು ತನಿಖೆ ಮುಂದುವರಿದಿದೆ, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಸುಳ್ಯ ಪೊಲೀಸ್‌ ನಿರೀಕ್ಷಕರಾದ ದಿಲೀಪ್‌ ಆರ್‌ , ರತ್ನಕುಮಾರ್‌, ಬಂಟ್ವಾಳ ಠಾಣಾ ಪಿಎಸ್‌ಐ ಹರೀಶ್‌ ಎಂ ಆರ್‌, ಬೆಳ್ಳಾರೆ ಠಾಣಾ ಎಎಸ್‌ಐ ಭಾಸ್ಕರ್‌,   ಪೊಲೀಸ್‌ ಇಲಾಖಾ ಸಿಬಂದಿಗಳಾದ ಜಯರಾಮ್‌, ಉದಯ್‌ ಗೌಡ  , ಅನಿಲ್‌, , ಮಹದೇವ ಪ್ರಸಾದ್‌ , ದೇವರಾಜ್‌, ವಿಜಯಕುಮಾರ್‌  ಭಾಗವಹಿಸಿದ್ದರು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂಕುರಿತ ಕಾಳುಗಳನ್ನು ಹೇಗೆ ಬಳಸುವುದು? : ಅತಿಯಾದ ಮೊಳಕೆ ಅಪಾಯಕಾರಿಯೆ?
April 20, 2024
5:19 PM
by: The Rural Mirror ಸುದ್ದಿಜಾಲ
ಪರಿಸರ ಸ್ನೇಹಿ ಕೈಚೀಲಗಳ ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ : ನಮ್ಮ ದೇಶದ ಡಿಫೆನ್ಸ್ ರೀಸರ್ಚ ಡೆವಲಪ್ಮೆಂಟ್ ಸೆಂಟರ್‌ನಿಂದ ತಯಾರಿ
April 20, 2024
5:07 PM
by: The Rural Mirror ಸುದ್ದಿಜಾಲ
ಭೂ ಅಂತರ್ಗತ ನೀರಿನ ಒರತೆಗಳು.. ಮೇಲ್ಮೈ ಒರತೆ ಮತ್ತುಶಿಲಾಸ್ತರದ ನಡುವಣ… : ಸಮುದ್ರ ಸೇರುವ ನೀರು ವ್ಯರ್ಥವೇ ? ಖಂಡಿತ ಅಲ್ಲ.
April 20, 2024
4:46 PM
by: The Rural Mirror ಸುದ್ದಿಜಾಲ
ರಕ್ಷಣಾ ವಲಯದಲ್ಲಿ ಭಾರದ ಸಾಧನೆ : ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು : ಬೇರೆ ರಾಷ್ಟ್ರಗಳಿಂದ ಹೆಚ್ಚಿದ ಬೇಡಿಕೆ
April 20, 2024
3:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror