ಸುಳ್ಯ ತಾಲೂಕಿನ ಸಂಪಾಜೆ ಗ್ರಾಮವನ್ನು ಗೇರು ಕೃಷಿಯಲ್ಲಿ ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಿದ ವಿಚಾರವಾಗಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಹಾಗೂ ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರು ಚರ್ಚೆ ನಡೆಸಿದರು.
ಭಾ. ಕೃ. ಸಂ. ಪ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಡಾ. ದಿನಕರ ಅಡಿಗ ಅವರನ್ನು ವಿಜ್ಞಾನಿ ಡಾ. ಅಶ್ವತಿ ಚಂದ್ರಕುಮಾರ್ ಅವರ ಉಪಸ್ಥಿತಿಯಲ್ಲಿ ಭಾ. ಕೃ. ಅ. ಸಂಸ್ಥೆಯ ನಿರ್ದೇಶಕರು, ಸಂಪಾಜೆ ಗ್ರಾಮದ ಎನ್‌ಆರ್‌ಎಲ್‌ಎಂ ಸಂಜೀವಿನಿ ಕೃಷಿ ಸಖಿ ಭೇಟಿ ಮಾಡಿದರು. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಿದ ವಿಚಾರವಾಗಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಸೆಪ್ಟೆಂಬರ್ ತಿಂಗಳಲ್ಲಿ 5 ತಳಿಯ ಗೇರು ಗಿಡಗಳ ವಿತರಣೆ, ಕೃಷಿಕರಿಂದ ಗೇರು ಹಣ್ಣು ಮತ್ತು ಗೇರು ಬೀಜಗಳ ಖರೀದಿ, ಅವುಗಳಿಂದ ವಿವಿಧ ತಿಂಡಿಗಳ ತಯಾರಿಕೆ, ಪಾನೀಯ, ಮೌಲ್ಯವರ್ಧನೆ, ಯಂತ್ರೋಪಕರಣಗಳ ಬಳಕೆ, ತರಬೇತಿ, ಬೆಳೆ ವಿಮೆ, ಕ್ಷೇತ್ರ ವಿಸ್ತರಣೆ ಹೀಗೆ ಹಲವಾರು ವಿಚಾರಗಳ ಕುರಿತು ನಿರ್ದೇಶಕರು ಹಾಗೂ ವಿಜ್ಞಾನಿಗಳ ಜೊತೆ ಮಾಹಿತಿ ಪಡೆಯಲಾಯಿತು. ವಿಜ್ಞಾನಿಗಳಾದ ಡಾ. ಅಶ್ವತಿ ಚಂದ್ರಕುಮಾರ್, ಡಾ. ಜ್ಯೋತಿ ನಿಶಾದ್, ಡಾ. ಮಂಜುನಾಥ್, ಡಾ.ವೀಣಾ ಮಾಹಿತಿ ನೀಡಿದರು.