ಸಂಪೂರ್ಣ ಡಿಜಿಟಲೀಕರಣದಂತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ,ಸದಸ್ಯರಿಗೆ ಗುಣಮಟ್ಟದ ಸೇವೆ ,ಸಾಮಾಜಿಕ ಸ್ಪಂದನೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು ,ಇದು ನಮ್ಮ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಮಾಜಿ ವಿಧಾನಸಭಾದ್ಯಕ್ಷ ,ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಅವರು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ 1.76 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗೋದಾಮು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಅದ್ಯಕ್ಷ ಅನಂತ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ,ಸಂಸ್ಥೆಯ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ನೆಲಮಹಡಿಯಲ್ಲಿ 5 ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸುತ್ತಿದ್ದು ,ಮೇಲಿನ ಮಹಡಿಗಳಲ್ಲಿ ಸುಸಜ್ಜಿತ ಕಚೇರಿಯನ್ನು ನಿರ್ಮಿಸುವ ಉದ್ದೇಶವಿದ್ದು ,ಈ ಯೋಜನೆಗೆ ನಬಾರ್ಡ್ ನಿಂದ ಹಣಕಾಸು ನೆರವು ಪಡೆಯುತ್ತಿರುವುದಾಗಿ ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ರಾಜಾರಾಂ ಕಳಗಿ ,ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಬ್ರಹ್ಮಣ್ಯ ಉಪಾಧ್ಯಾಯ, ಸಂಸ್ಥೆಯ ಮಾಜಿ ಅದ್ಯಕ್ಷರುಗಳಾದ ಬಲ್ಯಮನೆ ಗಣಪತಿ , ಆದಂಕುಂಞ ,ನಿರ್ದೇಶಕರು ,ಸಂಪಾಜೆ ಮತ್ತು ಚೆಂಬು ಗ್ರಾಮದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ,ಸಿಬ್ಬಂದಿ ವರ್ಗದವರು ,ಸದಸ್ಯರು ಉಪಸ್ಥಿತರಿದ್ದರು. ಪುರೋಹಿತರಾದ ಅಂಬರೀಶ್ ಭಟ್ ವೈದಿಕ ಕಾರ್ಯ ನೆರವೇರಿಸಿದರು.Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel