ಸುದ್ದಿಗಳು

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಸಕ್ತ ಗೇರು ಕೃಷಿಕರು ಮತ್ತು ಈಗಾಗಲೇ ಗೇರು ಬೆಳೆಯುತ್ತಿರುವ ಕೃಷಿಕರಿಗೆ ಅದರ ಮೌಲ್ಯ ವರ್ಧನೆ ಮಾಡುವ ಕುರಿತು ಮಾಹಿತಿ  ಕಾರ್ಯಕ್ರಮ ಸಂಪಾಜೆ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.

Advertisement

ಗೇರು ಕೃಷಿಯಲ್ಲಿ ಎರಡರಿಂದ ಮೂರು ವರ್ಷಗಳ ತನಕ ಗಿಡಗಳ ಆರೈಕೆಯನ್ನು ಮಾಡುವುದರ ಕುರಿತು ಪೂರ್ಣ ಮಾಹಿತಿ ಕೃಷಿ ವಿಜ್ಞಾನ ಕೇಂದ್ರದಿಂದ ಮಣ್ಣಿನ ಪರೀಕ್ಷೆ ಹಾಗೂ ತರಕಾರಿ ಬೀಜಗಳ ವಿತರಣೆ ಹಾಗೂ ಕೃಷಿಗೆ ಸಂಬಂಧಿಸಿದ  ವಿಚಾರಗಳ  ಬಗ್ಗೆ ಮಾಹಿತಿ ನೀಡಲಾಯಿತು.  ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಕಡೆಯಿಂದ ಕೃಷಿಕರಿಗೆ ಉದ್ಯಮಿದಾರರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಮುಂದಿನ ದಿನಗಳಲ್ಲಿ ಸಿಗಲಿರುವ ಸಾಲ ಸೌಲಭ್ಯ, ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆಯೂ ಮಾಹಿತಿ ನೀಡಲಾಯಿತು.

ಕಾರ್ಯಗಾರವು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.  ಕಾರ್ಯಕ್ರಮವನ್ನು ಗೇರು ಸಂಶೋಧನಾಲಯ ನಿರ್ದೇಶಕ  ಡಾ. ದಿನಕರ ಅಡಿಗ  ನೀರು ಹಾಕುವ ಮೂಲಕ ಉದ್ಘಾಟಿಸಿದರು.  ಕೃಷಿಕರಿಗೆ ಪೂರಕ ವಾತಾವರಣ ಹಾಗೂ ಗೇರು ಕೃಷಿಯ ಮಹತ್ವದ ಬಗ್ಗೆ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಕೃಷಿಕರಿಗೆ ಗೇರು ಕೃಷಿ ಬಗ್ಗೆ ಮಾಹಿತಿ ನೀಡಿದರು. ಗೇರು ಕೃಷಿ ಮಾಹಿತಿಯನ್ನು ಕೃಷಿಕರಿಗೆ ತಲುಪಿಸಲು  ಕೃಷಿ ಸಖಿ ಮೋಹಿನಿ ಹಾಗೂ ಗ್ರಾಮ ಪಂಚಾಯತ್ ಸಹಕಾರ ನೀಡುತ್ತಿದೆ ಎಂದರು.

Advertisement

ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಕೆ.ಇ.ಜಯರಾಂ ಮಾತನಾಡಿ ಸಂಪಾಜೆ ಗ್ರಾಮ ಜಿಲ್ಲೆಯ ಕೊನೆಯ ಪಂಚಾಯತ್ ಮಾದರಿ ಗ್ರಾಮ ಕೃಷಿಕರು ಹೆಚ್ಚಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ತರಲು ಪ್ರಯತ್ನಿಸಿ ಎಂದರು.

Advertisement

ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಡಿಕಾರಿ ರಾಜಣ್ಣ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಾರೆ. ಹಾಗೂ ಎಲ್ಲಾ ಮೂಲಗಳಿಂದ ಅನುದಾನ ತರಿಸಿ ಕೆಲಸ ಮಾಡಿ ಮಾದರಿ ಗ್ರಾಮವನ್ನಾಗಿ ಮಾಡಿದ್ದಾರೆ ಎಂದರು.   ಡಾ ರಮೇಶ್ ಕೆ. ವಿ. ಕೆ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು . ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಂಜೀವಿನಿ ಎನ್ ಆರ್ ಎಲ್ ಎಂ ಶ್ವೇತ ಅವರ ಸಹಕಾರ ಇದೆ ಎಂದು ತಿಳಿಸಿದರು.

ಡಾ ಮಲ್ಲಿಕಾರ್ಜುನ , ಡಾ.ಜ್ಯೋತಿ ನಿಶಾದ್, ಡಾ, ಶಿವಕುಮಾರ್ , ಡಾ. ರವೀಂದ್ರ ಪಾಟೀಲ್,ಡಾ. ಅಶ್ವತಿ ಚಂದ್ರಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದರು.
ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿoಗಾಜೆ, ಕೃಷಿಕರು  ಕಾರ್ಯಾಗಾರದಲ್ಲಿ ಪಾಲ್ಗೊಂಡು ಸರಕಾರದಿಂದಿಂದ ಸವಲತ್ತು ಪಡಕೊಂಡು ಉತ್ರಮ ಕೃಷಿಕರಾಗಿ ಎಂದರು.  ಮಡಪ್ಪಾಡಿ ಕೃಷಿ ಸಖಿ ಪುಷ್ಪಲತಾ, ಆಲೆಟ್ಟಿ ಕೃಷಿ ಸಖಿ ಲೋಚನ, ಅಜ್ಜಾವರ ಕೃಷಿ ಸಖಿ ಪೂರ್ಣಿಮಾ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಸಾದ ಶೆಟ್ಟಿ, ಹರಿಪ್ರಸಾದ್ ,ಶ್ವೇತಾ, ಜೀವನ್ ಪ್ರಕಾಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ,ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಅನುಪಮ, ರಜನಿ ಶರತ್ ,ಸುಶೀಲಾ. ಮಾಜಿ ಅಧ್ಯಕ್ಷರಾದ ಜಗದೀಶ್ ಕೆ ಪಿ. ಯಮುನಾ, ಮಾಜಿ ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ, ಸೊಸೈಟಿ ನಿರ್ದೇಶರಾದ ಗಣಪತಿ ಭಟ್,ನಾಗೇಶ್ ಪಿ ಆರ್, ಚಿದಾನಂದ ಮಾಸ್ತರ್, ಆರೋಗ್ಯ ಇಲಾಖೆಯ ಚಿತ್ರಾ, ಪಂಚಾಯತ್ ಸಿಬ್ಬಂದಿ ವರ್ಗ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸದಸ್ಯರು, ಪಶು ಸಖಿ ಮಾಲತಿ ,ಎಲ್ ಸಿ.ಆರ್ ಪಿ. ಉಪಸ್ತಿತರಿದ್ದರು.

ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸ್ವಾಗತಿಸಿ. ಸದಸ್ಯರಾದ ಜಿ ಕೆ.ಹಮೀದ್ ಗೂನಡ್ಕ ವಂದಿಸಿದರು ಕೃಷಿ ಸಖಿ ಮೊಹಿನಿ ವಿಶ್ವನಾಥ್ ( ನಿಶಾ ) ಹಾಗೂ ಎಂ, ಬಿ. ಕೆ. ಕಾಂತಿ ಬಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ, ಒಡಿಶಾ ಕರಾವಳಿಯಲ್ಲಿ ಇದ್ದು, ಆಗಸ್ಟ್ 20,21ರಂದು ಗುಜರಾತ್…

8 hours ago

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ

ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

12 hours ago

ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ

ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…

12 hours ago

ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…

12 hours ago

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ

ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…

1 day ago

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

2 days ago