ರಾಜ್ಯದಲ್ಲಿ ಸ್ವಂತ ಸೂರಿಲ್ಲದೆ ಬದುಕುತ್ತಿರುವ ಜನ ಅದೆಷ್ಟೋ. ಸರ್ಕಾರ ಬದ ಜನರಿಗೆ ತನ್ನದೇ ಮನೆ ಹೋಂದ ಬೇಕು ಅನ್ನೋ ಕಾಳಜಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಇಂದಿಗೂ ಅನೇಕ ಜನರು ಸ್ವಂತ ಸೂರಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈಗ ಮುಖ್ಯಮಂತ್ರಿಯವರು ಎಲ್ಲಾ ರಾಜ್ಯದ ಜನತೆಗೆ ಸೂರು ಒದಗಿಸಲು ವಿಶೇಷ ಆದ್ಯತೆ ನೀಡಿದ್ದಾರೆ. ಬಡವರ ಹಿತಾಸಕ್ತಿ ದೃಷ್ಠಿಯಿಂದ ಸರ್ಕಾರವು ಮನೆ ಇಲ್ಲದಂತಹ ಎಲ್ಲಾ ಕುಟುಂಬಗಳಿಗೆ ವಸತಿ ಸೌಲಭ್ಯ ನೀಡಲು ಗ್ರಾಮ ಪಂಚಾಯ್ತ್ ಮುಖಾಂತರ ನೀಡಲು ಸರ್ಕಾರವು ನಿರ್ಧರಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಮನೆಗಳಿಗೆ 2 ವರ್ಷಗಳ ಕೋವಿಡ್ ಸಂಕಷ್ಟದ ನಡುವೆಯೂ 10,173 ಕೋಟಿ ರೂ ಅನುದಾನ ಹಂಚಿಕೆ ಮಾಡಿ ಈಗಾಗಲೇ ಸುಮಾರು 5 ಲಕ್ಷ ಮನೆಗಳನ್ನು ಪೂರ್ಣ ಗೊಳಿಸಲಾಗಿದೆ. ಹಾಗೆಯೇ 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಲಾಗಿದೆ.
ಪ್ರಸಕ್ತ ವರ್ಷ 20 ಸಾವಿರ ಮನೆಗಳನ್ನು ಪೂರ್ಣಗೊಳಿಸಿದ್ದಲ್ಲದೇ 5 ಲಕ್ಷ ಹೊಸ ಮನೆಗಳನ್ನು ಪೂರ್ಣಗೊಳಿಸಿ ಅನುಮೋದನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಪ್ರಸಕ್ತ ವರ್ಷ 20 ಸಾವಿರ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಈ ಯೋಜನೆಯಡಿ ಇಚ್ಚೆ ಪಡುವ ಮನೆಯನ್ನು ಆನ್ಲೈನ್ ನಲ್ಲಿ ಫಲಾನುಭವಿಗಳೇ ಆಯ್ಕೆ ಮಾಡುವ ಪಾರದರ್ಶಕತೆ ರೂಪಿಸಲಾಗಿದೆ.
ಈ ಉದ್ದೇಶಕ್ಕೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5 ಸಾವಿರ ಕೋಟಿ ರೂ ಒದಗಿಸುತ್ತಿಗಿದ್ದು, ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗೋದು ಎಂದಿದ್ದಾರೆ. ಅತಿ ವೃಷ್ಠಿಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಮನೆಯಿಂದ ಪುನರ್ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು ಸರ್ಕಾರ 5 ಲಕ್ಷ ರೂಗಳಿಗೆ ಹೆಚ್ಚಿಸಿದೆ.
ವಿವಿಧ ವರ್ಗಗಳ ಅಡಿಯಲ್ಲಿ ಕಳೆದ 4 ವರ್ಷಗಳಲ್ಲಿ 3 ಲಕ್ಷದ 1 ಸಾವಿರದ 884 ಮನೆಗಳ ಪುನರ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಇಲ್ಲಿಯವರೆಗೆ 2 ಸಾವಿರದ 627 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಂದಾಜು 2 ಸಾವಿರ ಎಕರೆ ಜಮೀನನ್ನು ವಸತಿ ಯೋಜನೆಗಾಗಿ ಸಂಗ್ರಹಿಸಿ ಅಂದಾಜು 30 ಸಾವಿರ ಸ್ವತ್ತುಗಳನ್ನು ಅಭಿವೃದ್ದಿಪಡಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.