ಸುಳ್ಯದ ಸಾಂದಿಪ್ ಶಾಲೆ ಕಳೆದೆರಡು ದಶಕಗಳಿಂದ ದಿವ್ಯಾಂಗ ಮಕ್ಕಳನ್ನು ಮುಖ್ಯವಾಹಿನಿಗೆ ತರುವ
ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ. ಮಕ್ಕಳ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ವಿಕಲಚೇತನ ಕ್ರೀಡಾಕೂಟದಲ್ಲಿ ಸುಳ್ಯದ ಸಾಂದಿಪ್ ಶಾಲೆ ಮಕ್ಕಳು ಬಹುಮಾನಗಳನ್ನು ಬಾಚಿಕೊಂಡಿದ್ದು, ಆ ಬಹುಮಾನವನ್ನು ಅವರ ಹೆತ್ತವರ ಸಮ್ಮುಖದಲ್ಲಿ ವಿತರಿಸಿ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ಚಾಂದಿನಿ ಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ತೊಡಿಕಾನದ ಪ್ರಗತಿಪರ ಕೃಷಿಕ ಕೇಶವಪ್ರಸಾದ್ ಹಾಗೂ ನಳಿನಿ ದಂಪತಿಗಳು ವಿವಾಹ ವಾರ್ಷಿಕೋತ್ಸವ ಸಲುವಾಗಿ ಪ್ರಾಯೋಜಿಸಿದ್ದರು.
ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ಎಂ. ಬಿ ಸದಾಶಿವರು ಪ್ರಾಸ್ತಾವಿಕ ಮಾತನಾಡಿದರು. ಹರಿಣಿ ಸದಾಶಿವ ವಂದಿಸಿದರು. ಕೇಶವ ಪ್ರಸಾದ್, ಲೋಕೇಶ್ ಕೆರೆಮೂಲೆ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಆಂದ್ರಾ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಮುಂದಿನ ಪರಿಣಾಮ…
ಕಬ್ಬಿನ ದರ ನಿಗದಿ ಮಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ …
ಕೇಂದ್ರ ಸರ್ಕಾರ ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚು…
ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಲಕ್ ಪತಿ …
ಆರೋಗ್ಯವು ಜೀವನದ ಮೂಲಾಧಾರವಾಗಿದ್ದು, ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಆರೋಗ್ಯ ಮತ್ತು…
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕರಾವಳಿ ಹಾಗೂ…