Exclusive - Mirror Hunt

ಬರಗಾಲದಲ್ಲೂ ಬಂಗಾರದ ಬೆಳೆ ಹೇಗೆ ಸಾಧ್ಯವಾಯಿತು ಸಂಧ್ಯಕ್ಕನಿಗೆ….? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರಾಜ್ಯದಲ್ಲಿ ಈಗ ಬರಗಾಲ(drought) ಸದ್ದು ಮಾಡುತ್ತಿದೆ. ಅನೇಕ ಕಡೆ ಕೃಷಿ ನಾಶವಾಗಿದೆ. ಇಂತಹದ್ದರಲ್ಲಿ ನಾಡಿನಲ್ಲಿ ಅತೀ ಹೆಚ್ಚು ಬರಗಾಲ ಎಂದು ಕರೆಯಲ್ಪಡುವ ಮಧುಗಿರಿ ತಾಲೂಕಿನ ಲಕ್ಷ್ಮೀದೇವಿ ಪುರದ ಸಂಧ್ಯ ಅವರು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಇಂದಿಗೂ ಹಸಿರು ಹಸಿರಾದ ಕೃಷಿ ಕಾಣುತ್ತಿದೆ. ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ಸಂಧ್ಯ ಕೃಷಿಯಲ್ಲೂ ಯಶಸ್ಸು ಕಂಡಿದ್ದಾರೆ. ಬರದ ನಡುವೆಯೂ ಬಂಗಾರದ ಬೆಳೆ ಪಡೆಯಲು ಸಾಧ್ಯವಾಗಿದೆ.

Advertisement
Advertisement

ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶ ಎನ್ನಬಹುದಾದ ತುಮಕೂರಿನ ಮಧುಗಿರಿ ಸಮೀಪದ ಹಳ್ಳಿಯಲ್ಲಿ ಸಂಧ್ಯಕ್ಕ ಅವರ ಕೃಷಿ ಭೂಮಿ ಇದೆ. ಅತಿ ಸಣ್ಣ ಪ್ರಾಯದಲ್ಲಿ ಪತಿ ತೀರಿಕೊಂಡ ಬಳಿಕ ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಅಂಗನವಾಡಿ ಶಿಕ್ಷಕಿಯಾಗಿ ರೈತ ಮಹಿಳೆಯಾಗಿ ಬದುಕು ಕಟ್ಟಲು ತೊಡಗಿದರು. ಇವರ ಜಮೀನು ಕೆರೆಯ ಪಕ್ಕದಲ್ಲಿರುವ ಕಾರಣ ಬಾವಿಯಲ್ಲಿ ಸದಾ ನೀರಿರುತ್ತದೆ. ಆರಂಭದಲ್ಲಿ ಮಳೆಯಾಶ್ರಯದಲ್ಲಿ ತಮ್ಮ ಜಮೀನಿನಲ್ಲಿ ಭತ್ತ ಮತ್ತು ಹತ್ತಿ ಬೆಳೆಯುತ್ತಿದ್ದರು. ಸಂಧ್ಯ ಸ್ವಲ್ಪ ಜಾಗದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದರು.

Advertisement

ಪತಿ ತೀರಿಕೊಂಡ ನಂತರ ಕೃಷಿಯನ್ನೂ ಸವಾಲಾಗಿ ಸ್ವೀಕರಿಸಿ ಕೃಷಿ ತಪಸ್ಸು ಆರಂಭಿಸಿದರು. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೃಷಿ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಯನ್ನೂ ಮಾಡಿಕೊಂಡರು. ಭತ್ತದ, ಹತ್ತಿ ಜೊತೆಗೆ ಮಳೆಬಾರದೆ ಬರ ಎದುರಾದರೂ ಬಯಲು ಸೀಮೆಯ ಕಲ್ಪವೃಕ್ಷ ಎನ್ನಬಹುದಾದ ಹುಣಸೇ ಹಣ್ಣು ಬೆಳೆಯಲು ತೊಡಗಿದರು. ಈಗ ತಮ್ಮಕೃಷಿಯನ್ನು ಸಮೃದ್ಧವಾಗಿಸಿಕೊಂಡಿದ್ದಾರೆ. ಭತ್ತ, ಅಡಿಕೆ, ರಾಗಿ, ತೊಗರಿ,ಟೊಮೊಟೋ, ಬದನೆ ಹೀಗೇ ಹಲವು ಕೃಷಿಯನ್ನು ಮಾಡಿಕೊಂಡಿದ್ದಾರೆ. ತರಕಾರಿಗಳನ್ನು ತಮ್ಮ ಮನೆಗೆ ಬೇಕಾಗುವಷ್ಟು ತಾವೇ ಬೆಳೆಯುತ್ತಾರೆ.ನೀರಿನ ನಿರ್ವಹಣೆಯನ್ನೂ ಬಹಳ ಚೆನ್ನಾಗಿ ಮಾಡುತ್ತಾರೆ. ಡ್ರಿಪ್‌ ಇರಿಗೇಶನ್‌ ಮೂಲಕ ಮಿತ ನೀರಾವರಿಗೆ ವ್ಯವಸ್ಥೆ ಮಾಡುತ್ತಾರೆ.

Advertisement

ಬೇಸಿಗೆಯಲ್ಲಿ ಸಂಧ್ಯಕ್ಕೆ ತಮ್ಮ ಎರಡು ಹುಣಸೆ ಮರಗಳ ಜೊತೆಗೆ ಅಕ್ಕಪಕ್ಕದ ಹುಣಸೆ ಮರಗಳನ್ನು ಗುತ್ತಿಗೆ ಪಡೆದು ಹುಣಸೆ ಹಣ್ಣು ಕೊಡವಿಸುತ್ತಾರೆ. ನಂತರ ಬಿಡಿಸಿ ಹಣ್ಣನ್ನು ಮಾರುತ್ತಾರೆ. ಅಂತರಬೆಳೆಯಾಗಿ ಬೆಳೆದ ಹರಳಿನಿಂದ ಹರಳೆಣ್ಣೆ ತಯಾರಿಸುತ್ತಾರೆ. ಹರಳೆಣ್ಣೆ ಬೇಯಿಸುವುದೇ ಒಂದು ವಿಶೇಷ. ಊರಿನ ನಾಲ್ಕಾರು ಹೆಂಗಸರು ಒಟ್ಟಾಗಿ ತಾವು ಕೂಡಿಟ್ಟ ಹರಳು ಬೀಜಗಳನ್ನು ಒಂದೆಡೆ ಬಾಣಲೆಯಲ್ಲಿ ಹುರಿಯುತ್ತಾರೆ. ನಂತರ ಎಲ್ಲರೂ ಸರತಿಯಲ್ಲಿ ದೊಡ್ಡ ಗುಂಡುಕಲ್ಲಿನ ಸಹಾಯದಿಂದ ರುಬ್ಬುತ್ತಾರೆ. ಈ ರುಬ್ಬಿದ ಮುದ್ದೆಯನ್ನು ದೊಡ್ಡ ಹಂಡೆಗೆ ಹಾಕುತ್ತಾರೆ. ರಾತ್ರಿಯಲ್ಲಾ ಸೌದೆ ಹಾಕಿ ಹಂಡೆಯಲ್ಲಿ ನೀರಿನ ಜೊತೆ ಹರಳಿನ ಮುದ್ದೆಯನ್ನು ಐದಾರು ಗಂಟೆ ಕುದಿಸುತ್ತಾರೆ. ಅನುಭವಸ್ಥರಿಗೆ ಹದ ಗೊತ್ತಾಗುತ್ತದೆ. ತಕ್ಷಣ ಒಲೆ ಆರಿಸಿ ಎಣ್ಣೆಯನ್ನು ಬಗ್ಗಿಸಿಕೊಳ್ಳಬೇಕು. ಇಷ್ಟು ಮಾಡುವುದರಲ್ಲಿ ಬೆಳಗಾಗಿರುತ್ತದೆ. ಇಷ್ಟೆಲ್ಲಾ ಆದಮೇಲೆ ದೇಹಕ್ಕೆ ತಂಪು ನೀಡುವ ಘಮಘಮ ಹರಳೆಣ್ಣೆ ಸಿದ್ಧವಾಗುತ್ತದೆ.

ಮೊದಲಿಂದಲೂ  ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿರಲಿಲ್ಲವಾದರೂ ಹತ್ತಿ ಬೆಳೆಗೆ ಸ್ವಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದರು. ಕೃಷಿ ತರಬೇತಿ, ಪಾಳೇಕರ್‌ ಕೃಷಿ ಪದ್ಧತಿಯ ತರಬೇತಿ ಪಡೆದ ಬಳಿಕ ಹಲವು ಬಗೆಯ ಸಿರಿಧಾನ್ಯಗಳನ್ನು ಮಿಶ್ರ ಬೆಳೆಪದ್ಧತಿಯಲ್ಲಿ ಬೆಳೆದರು. ಸಿದ್ದಸಣ್ಣ ಭತ್ತ ಬೆಳೆದರು.

Advertisement

ಮೊದಲ ಮಳೆಗೆ ಭೂಮಿ ಹದ ಮಾಡಿ ನೆಲಗಡಲೆ, ಅದರ ಮಧ್ಯೆ ಅಲಸಂಡೆ, ಹೆಸರು, ಉದ್ದು, ತೊಗರಿ, ಹರಳು, ಜೋಳ, ಬೆಂಡೆ, ಬದನೆ, ಮೆಣಸಿನಕಾಯಿ ಮತ್ತಿತ್ತರ ಸೊಪ್ಪು, ತರಕಾರಿಗಳನ್ನು ಅಕ್ಕಡಿಸಾಲಿನಲ್ಲಿ ಬಿತ್ತನೆ ಮಾಡುತ್ತಾರೆ.ಹಟ್ಟಿ ಗೊಬ್ಬರ ಬಳಕೆ ಮಾಡುತ್ತಾರೆ.  ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಬಹುತೇಕ ತರಕಾರಿಗಳು ಕಟಾವಿಗೆ ಸಿದ್ಧವಾಗುತ್ತದೆ, ಉಪ್ಪು, ಸೋಪುಗಳಂತಹ ವಸ್ತುಗಳು ಬಿಟ್ಟರೆ ಸಂಧ್ಯಕ್ಕೆ ಯಾವುದನ್ನೂ ಅಂಗಡಿಯಲ್ಲಿ ಕೊಂಡುಕೊಳ್ಳುವುದಿಲ್ಲ.

ತೋಟದ ಬದುಗಳಲ್ಲಿ ಅರಣ್ಯ ಪ್ರಭೇದಗಳಾದ ತೇಗ, ಸಿಲ್ವರ್, ನುಗ್ಗೆ, ಕರಿಬೇವು ಮತ್ತಿತರ ಮರಗಳಾಗುವ ಗಿಡಗಳನ್ನು ನೆಟ್ಟಿದ್ದಾರೆ. ಕನಕಾಂಬರ ಬೆಳೆದಿದ್ದಾರೆ. ಅಗಸೆ ಸೊಪ್ಪನ್ನು ಕುರಿ-ಮೇಕೆ ಸಾಕುವವರಿಗೆ ಮಾರುತ್ತಾರೆ. ಅವರು ಕುರಿ ಗೊಬ್ಬರವನ್ನು ಸಂಧ್ಯಕ್ಕನಿಗೆ ನೀಡುತ್ತಾರೆ.

Advertisement

ಯಾವುದೇ ರಾಸಾಯನಿಕ ಬಳಸದೇ ನೆಲಗಡಲೆ ಬೆಳೆಯುವ ಕಾರಣದಿಂದ ಅಂದಿನ ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣಕೊಟ್ಟು ನೆಲಗಡಲೆ ಖರೀದಿಸುವ ಪ್ರಮುಖರು ಇದ್ದಾರೆ. ಸಂಧ್ಯಕ್ಕನ ಈ ರಾಸಾಯನಿಕ ಮುಕ್ತ ಯಶಸ್ಸು, ಮಿಶ್ರ ಬೆಳೆಯ ಯಶಸ್ಸು ಕೆಲವು ರೈತರ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಬಹಳಷ್ಟು ಮಂದಿ ರಾಸಾಯನಿಕ ಗೊಬ್ಬರ ಬಳಸುವುದನ್ನು ಕಡಿತಗೊಳಿಸಿದ್ದಾರೆಂದರೆ ಸಂಧ್ಯಕ್ಕನ ಯಶಸ್ಸಿನ ಸರ್ಟಿಫಿಕೇಟ್‌ ಇದು.

ರೈತರು ಯಾವತ್ತೂ ಕುಸಿಯಬಾರದು, ಬರ ಎಂದು ರೈತರು ಕುಸಿದರೆ ಕೃಷಿ ಮಾಡುವುದು ಹೇಗೆ ಎಂದು ಸಂಧ್ಯಕ್ಕ ಪ್ರಶ್ನೆ ಮಾಡುತ್ತಾರೆ.ಪ್ರಯತ್ನವೇ ಇಲ್ಲದೆ ಸಾಧನೆ ಹೇಗೆ. ಇದಕ್ಕಾಗಿ ಮಿಶ್ರ ಕೃಷಿ ಅಗತ್ಯ ಇದೆ. ಬರದ ನಾಡಿನಲ್ಲೂ ಯಶಸ್ಸು ಕಾಣಲು ಮಿಶ್ರ ಕೃಷಿ ಅಗತ್ಯ ಇದೆ. ಒಂದಲ್ಲ ಒಂದು ರೈತನಿಗೆ ನೆರವಾಗುತ್ತದೆ. ರೈತನಿಗೆ ತಾಳ್ಮೆ ಒಂದು ಇದ್ದರೆ ಸಾಕು ಎನ್ನುತ್ತಾ ಸಂಧ್ಯ ಅವರು.

Advertisement

ಅನೇಕ ರೈತರು ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯ ಮೊರೆಹೋಗುವ ಈ ದಿನಗಳಲ್ಲಿ ಸಂಧ್ಯಕ್ಕನ ಸಾಧನೆ, ಯಶಸ್ಸು ಮಾದರಿಯಲ್ಲವೇ..?.

(ಮಾಹಿತಿ :ಸುಧಾ ಸಂದೀಪ್‌ )

Advertisement
Karnataka state is now experiencing drought. Agriculture has been destroyed in many places. Among these, Sandhya of Lakshmidevipura in Madhugiri taluk, which is known as the worst drought in the country, has seen success in agriculture.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?

ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…

8 hours ago

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

22 hours ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

1 day ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

2 days ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

2 days ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

2 days ago