ಸಂಕ್ರಾಂತಿ ಶುಭಾಶಯ | ಸೂರ್ಯನ ಪಥ ಬದಲಾವಣೆ | ಕೃಷಿಯಲ್ಲೂ ಬದಲಾವಣೆ ಆರಂಭ |

January 14, 2022
10:54 AM

ಮಾವಿನ ಮರಗಳು ಫಲ ಬಿಟ್ಟಿವೆ, ಕೆಲವು ಮರಗಳು ಚಿಗುರಿನಿಂದ ಕಂಗೊಳಿಸುತ್ತಿವೆ. ಚಳಿಯೂ ತನ್ನ ಇರುವಿಕೆಯನ್ನು ಪ್ರಚುರ ಪಡಿಸುತ್ತದೆ. ಹಕ್ಕಿಗಳ ಕಿಲಕಿಲ ಕಲರವ ಕಿವಿ ತುಂಬುತ್ತಿದೆ. ಪ್ರಕೃತಿಯ ಬದಲಾವಣೆ ಸಂಕ್ರಾಂತಿಯ ಸಂಭ್ರಮಕ್ಕೆ ಇಂಬು ಕೊಡುವಂತೆ ಕಾಣುತ್ತಿದೆ.

Advertisement
ಹಬ್ಬಗಳು ಟಾನಿಕ್ ನಂತೆ.! ಒಪ್ಪುತ್ತೀರಲ್ವಾ? ದಿನನಿತ್ಯದ ಜಂಜಡಗಳಿಂದ ಒಂದು ಪುಟ್ಟ ಬದಲಾವಣೆ ಈ ಹಬ್ಬಗಳು. ಪೂಜೆಯ ನೆಪದಲ್ಲಿ ಒಂದಷ್ಟು‌ ಸಿಹಿ. ಸಂಪ್ರದಾಯದ ಹೆಸರಲ್ಲಿ ಎಣ್ಣೆ ಸ್ನಾನ ದೇಹಕ್ಕೂ ಉಲ್ಲಾಸ ಮನಸಿಗೂ ಖುಷಿ. ಸದ್ಯ ಯಾವ ಹಬ್ಬಗಳೂ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶ ,ಭಾಷೆ , ಪ್ರಾಂತ್ಯ ಮೀರಿ ಆಚರಿಸಲ್ಪಡುತ್ತವೆ. ಬದುಕಿನ ಏಕತಾನತೆಗೆ ಹಬ್ಬಗಳು ಒಂದು ಬದಲಾವಣೆ. ಇಂದು ಸಂಭ್ರಮಕ್ಕೊಂದು ಕಾರಣ ಹಬ್ಬಗಳು.

ಕ್ಯಾಲೆಂಡರ್ ನ ಆರಂಭದ ತಿಂಗಳಲ್ಲಿ ಬರುವ ಮೊದಲ ಹಬ್ಬವೇ ಸಂಕ್ರಾಂತಿಯಾಗಿದೆ. ಬೆಳೆ ಕೈಸೇರುವ ಸಂಧರ್ಭದಲ್ಲಿ ಯೇ ಈ ಹಬ್ಬ ಬರುವುದರಿಂದ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ಅವಕಾಶವೂ ಇದಾಗಿದೆ. ಕೃಷಿ ಕೈಂಕರ್ಯದಲ್ಲಿ ಜೊತೆಯಾದ ಜಾನುವಾರುಗಳನ್ನು ಸ್ನಾನ ಮಾಡಿಸಿ , ಸಿಂಗರಿಸಿ ಪೂಜಿಸುವ ಸಂಪ್ರದಾಯವಿದೆ.

ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಿಂದ ಆಚರಿಸ್ಪಡುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಆಚರಿಸಲ್ಪಡುತ್ತವೆ. ಆಯಾ ಪ್ರಾದೇಶಿಕ ಸಂಪ್ರದಾಯಕ್ಕೆ ಹೆಚ್ಚು ಒತ್ತು ಈ ಹಬ್ಬದಲ್ಲಿ ಕಾಣಬಹುದು. ಆದರೆ ಪ್ರಕೃತಿಯ ಆರಾಧನೆಯೇ ಇಲ್ಲಿ ಎದ್ದು ಕಾಣುವುದು. ಮನೆಯವರು ಊರವರು ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿ ಸಂಭ್ರಮಿಸುವುದೇ ಸಂಕ್ರಾಂತಿ ಹಬ್ಬದ ವಿಶೇಷತೆಯಾಗಿದೆ. ಸೂರ್ಯದೇವನ ಪಥ ಬದಲಾವಣೆ ಪ್ರಕೃತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಅದೇ ರೀತಿ ಮನು ಕುಲದ ಆರೋಗ್ಯ ವೃದ್ಧಿಗೂ ಕಾರಣವಾಗಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ
ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು
May 11, 2025
7:15 AM
by: ನಾ.ಕಾರಂತ ಪೆರಾಜೆ
ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group