ಮಾವಿನ ಮರಗಳು ಫಲ ಬಿಟ್ಟಿವೆ, ಕೆಲವು ಮರಗಳು ಚಿಗುರಿನಿಂದ ಕಂಗೊಳಿಸುತ್ತಿವೆ. ಚಳಿಯೂ ತನ್ನ ಇರುವಿಕೆಯನ್ನು ಪ್ರಚುರ ಪಡಿಸುತ್ತದೆ. ಹಕ್ಕಿಗಳ ಕಿಲಕಿಲ ಕಲರವ ಕಿವಿ ತುಂಬುತ್ತಿದೆ. ಪ್ರಕೃತಿಯ ಬದಲಾವಣೆ ಸಂಕ್ರಾಂತಿಯ ಸಂಭ್ರಮಕ್ಕೆ ಇಂಬು ಕೊಡುವಂತೆ ಕಾಣುತ್ತಿದೆ.
ಕ್ಯಾಲೆಂಡರ್ ನ ಆರಂಭದ ತಿಂಗಳಲ್ಲಿ ಬರುವ ಮೊದಲ ಹಬ್ಬವೇ ಸಂಕ್ರಾಂತಿಯಾಗಿದೆ. ಬೆಳೆ ಕೈಸೇರುವ ಸಂಧರ್ಭದಲ್ಲಿ ಯೇ ಈ ಹಬ್ಬ ಬರುವುದರಿಂದ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ಅವಕಾಶವೂ ಇದಾಗಿದೆ. ಕೃಷಿ ಕೈಂಕರ್ಯದಲ್ಲಿ ಜೊತೆಯಾದ ಜಾನುವಾರುಗಳನ್ನು ಸ್ನಾನ ಮಾಡಿಸಿ , ಸಿಂಗರಿಸಿ ಪೂಜಿಸುವ ಸಂಪ್ರದಾಯವಿದೆ.
ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಿಂದ ಆಚರಿಸ್ಪಡುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಆಚರಿಸಲ್ಪಡುತ್ತವೆ. ಆಯಾ ಪ್ರಾದೇಶಿಕ ಸಂಪ್ರದಾಯಕ್ಕೆ ಹೆಚ್ಚು ಒತ್ತು ಈ ಹಬ್ಬದಲ್ಲಿ ಕಾಣಬಹುದು. ಆದರೆ ಪ್ರಕೃತಿಯ ಆರಾಧನೆಯೇ ಇಲ್ಲಿ ಎದ್ದು ಕಾಣುವುದು. ಮನೆಯವರು ಊರವರು ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿ ಸಂಭ್ರಮಿಸುವುದೇ ಸಂಕ್ರಾಂತಿ ಹಬ್ಬದ ವಿಶೇಷತೆಯಾಗಿದೆ. ಸೂರ್ಯದೇವನ ಪಥ ಬದಲಾವಣೆ ಪ್ರಕೃತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಅದೇ ರೀತಿ ಮನು ಕುಲದ ಆರೋಗ್ಯ ವೃದ್ಧಿಗೂ ಕಾರಣವಾಗಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…