ಮಕ್ಕಳಿಗೆ ಅಗತ್ಯವಾಗಿ ಕಲಿಸಬೇಕಾದ , ನಾವೂ ಕಲಿಯಬೇಕಾದ ಪಾಠಗಳು… | ಮಕ್ಕಳಿಗೆ ತಿಳಿ ಹೇಳಿ ಪೋಷಕರೇ…. ತಾವೂ ತಿಳಿದುಕೊಳ್ಳಿ….|

December 27, 2023
12:03 PM

ಮಕ್ಕಳು(Children) ಎಂದರೆ ಅವರು ಖಾಲಿ ಬಿಳಿ ಹಾಳೆ(White Paper) ಇದ್ದಹಾಗೆ. ಅದರ ಮೇಲೆ ನಾವು ಏನು ಬರೆಯುತ್ತೆವೆಯೋ ಹಾಗೆ ನಮ್ಮ ಮಕ್ಕಳು ಮುಂದೆ ಬೆಳೆಯುತ್ತಾರೆ. ಬಿಳಿ ಹಾಳೆಯನ್ನು ನಾವು ಹೇಗೆ ಉಪಯೋಗಿಸುತ್ತೇವೆ ಅನ್ನುವುದರ ಮೇಲೆ ಮಕ್ಕಳ ಭವಿಷ್ಯ(Future of child) ನಿಂತಿರುತ್ತದೆ. ಮಕ್ಕಳಿಗೆ ಪೋಷಕರು(Parents) ನೀಡಲೇ ಬೇಕೇದ ಒಂದಷ್ಟು ಸಂಸ್ಕಾರಗಳು ಇಲ್ಲಿವೆ..

Advertisement
Advertisement
  • ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ. ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು.
  • ಸಂಧ್ಯಾಕಾಲದಲ್ಲಿ ಯಾರೊಂದಿಗೂ ವೈಮನಸ್ಸು, ಕೆಟ್ಟ ವಿಚಾರ, ಮಾತುಕಥೆ ಬೇಡ. ವಾತಾವರಣದಲ್ಲಿ ವಾಸ್ತು ಅಂದರೆ ಅಸ್ತು ದೇವತೆಗಳು ಹಾಗೆಯೇ ಆಗಲಿ ಎಂದು ಅನುಗ್ರಹಿಸುತ್ತವೆ.
  • ಸಾಧ್ಯವಾದಷ್ಟು ದೇವರ ಮನೆಯಲ್ಲಿ ಶುಚಿತ್ವವಿರಲಿ. ಅಗತ್ಯಕ್ಕಿಂತ ಇತರೆ ಯಾವುದೇ ವಸ್ತುಗಳನ್ನು ಇಡಬೇಡಿ.
  • ದೇವರ ಉತ್ಸವ ಮತ್ತು ಆರತಿಗಳು ಇದ್ದಲ್ಲಿ ಎದ್ದು ನಿಂತು ಗೌರವವನ್ನು ತೋರಿಸಿ. ಧಾರ್ಮಿಕ ಆಚರಣೆಗಳಲ್ಲಿ ಭಾವನೆಗೆ ಅತ್ಯಂತ ದೊಡ್ಡ ಮಹತ್ವ.
  • ಯಾವುದೇ ಜಾತಿ. ಪಂಗಡದವರಾಗಿದ್ದರೂ ಎಲ್ಲಾ ಧರ್ಮಗಳ ದೈವಿಕ ವಿಚಾರಗಳನ್ನು ಗೌರವಿಸಬೇಕು.
  • ಕಿರಿಯರು ಅಥವಾ ಮಕ್ಕಳು ಕೇಳುವ ಯಾವುದೇ ದೈವಿಕ ವಿಚಾರಗಳಿಗೆ ಹಾರಿಕೆಯ ಉತ್ತರವನ್ನ ನೀಡಬೇಡಿ. ಸಂಸ್ಕಾರಗಳನ್ನು ನಮ್ಮಿಂದ ನೋಡಿ ತಿಳಿದು ಕಲಿಯುತ್ತವೆ ಮಕ್ಕಳು.
  • ಸುಮ್ಮಸುಮ್ಮನೆ ಯಾವುದೇ ಗಿಡ-ಮರ, ಕ್ರಿಮಿ-ಕೀಟ, ಪಶು- ಪಕ್ಷಿಗಳಿಗೆ ಹಿಂಸಿಸಬೇಡಿ. ಮನುಷ್ಯನಿಗಿಂತ ಮೊದಲೇ ಅವುಗಳು ಭೂಮಿಯಲ್ಲಿ ಇವೆ.
  • ದೀಪ ಆರಿ ಹೊಗಿದೆ, ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ. ಅಕ್ಕಿ ತರಬೇಕು ಈ ರೀತಿ ಮಾತುಗಳನ್ನು ಮಕ್ಕಳಲ್ಲಿ ಹೇಳುವಂತೆ ತಿಳಿಸಿ
  • ರಾತ್ರಿ ಊಟವಾದ ಮೇಲೆ ಊಟದ ಪಾತ್ರೆಗಳನ್ನು ಎಲ್ಲಾ ಖಾಲಿ ಮಾಡಿ ಸಾರಿಸಿ ಇಡುವುದು ಶುಭವಲ್ಲ. ಕೊನೆಯ ಪಕ್ಷ ಬೇಲ್ಲ – ಅವಲಕ್ಕಿಯನ್ನಾದರು ಪಾತ್ರೆಯಲ್ಲಿ ಇರಿಸಿ.
  • ದೇವರ ಬಗೆಗೆ ವಿಶೇಷ ಭಯ – ಭೀತಿಯನ್ನು ಮಕ್ಕಳಲ್ಲಿ ಉಂಟು ಮಾಡಬೇಡಿ. ದೇವರಷ್ಟು ಹತ್ತಿರದವರು ನಮಗೆ ಯಾರು ಇಲ್ಲ.
  • ಪ್ರತಿ ತಿಂಗಳು ಬರುವ ಹಬ್ಬ ಹರಿದಿನಗಳ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮಕ್ಕಳಲ್ಲಿ ಬೆಳಸಿ.
  • ಸಾಧ್ಯವಾದಷ್ಟು ಮುಂಜಾನೆ ಅಥವಾ ಊಟಕ್ಕೆ ಮೊದಲು ಕಾಗೆಗಳಿಗೆ ಪಕ್ಷಿಗಳಿಗೆ ಆಹಾರ ನೀಡುವ ಕ್ರಮವನ್ನು ಬೆಳೆಸಿಕೊಳ್ಳಿ.
  • ಮನೆಯಲ್ಲಿ ಕುಡಿಯುವ ನೀರನ್ನು ಪ್ರತಿನಿತ್ಯ ಬದಲಾವಣೆ ಮಾಡಿ(ಸ್ಟೀಲ್ ಪಾತ್ರೆಯಲ್ಲಿ ಇದ್ದರೆ).ಇಲ್ಲವಾದಲ್ಲಿ ಮಣ್ಣಿನ ತಾಮ್ರದ ಪಾತ್ರೆಯಲ್ಲಿ ಇರಿಸಿ.
  • ಬೆಳಗ್ಗೆ ಸ್ನಾನ ಮಾಡಿದ ಮೇಲೆ ಮಕ್ಕಳಿಗೆ ದೇವರ ಕೋಣೆಯಲ್ಲಿ ನಿಂತು ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಿ.ಮಕ್ಕಳ ಪ್ರಾರ್ಥನೆಗಳು ಬಹುಬೇಗ ಫಲ ಕೊಡುತ್ತವೆ.
  • ಪೂಜೆ ಪುನಸ್ಕಾರಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿ.ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಇದು ನಮ್ಮ ಸನಾತನ ಧರ್ಮ.
  • ಕುಟುಂಬದ ಶುಭ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗವಹಿಸಲು ಪ್ರಯತ್ನ ಮಾಡಿ. (ಭಿನ್ನಾಭಿಪ್ರಾಯಗಳು ಯಾವಾಗಲೂ ಇರಬಹುದು)
  • ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿಕೊಡಿ.ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ.
  • ದೇವರ ಪ್ರಾರ್ಥನೆಗೆ ಮತ್ತು ಬೇರೆಯವರಿಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ.ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದೆಲೆಯ ತುದಿಭಾಗವು ಕೂಡ.
  • ಪೂರ್ಣ ಕತ್ತಲೆ ಇರುವ ಕೋಣೆಯಲ್ಲಿ ಮಲಗಬಾರದು. ಸಣ್ಣ ಬೆಳಗಾದರೂ ಉರಿಯುತ್ತಿರಬೇಕು.
  • ತಟ್ಟೆಯಲ್ಲಿ ಮೊದಲು ಅನ್ನವನ್ನು ಹಾಕಬಾರದು. ಯಾವುದಾದರೂ ಪಲ್ಯ,ಉಪ್ಪು ಇತರೆ ಖ್ಯಾಧ್ಯಾವನ್ನ ದರು ಬಳಸಿಕೊಂಡು ನಂತರ ಅನ್ನವನ್ನು ಹಾಕಿಕೊಳ್ಳಬೇಕು.
  • ದೇವರ ಕೋಣೆ ಎದುರು ಕಾಲು ಬಿಡಿಸಿ ಮಲಗುವುದು ಅಥವಾ ಕಾಲು ಬಿಡಿಸಿ ಕುಳಿತುಕೊಳ್ಳುವುದು ಅಥವಾ ದೇವರಿಗೆ ನೇರವಾಗಿ ಬೆನ್ನು ಹಾಕಿ ಕುಳಿತುಕೊಳ್ಳುವುದು ಮಾಡಬೇಡಿ.
  • ಮುತ್ತೈದೆಯರು ಶುಕ್ರವಾರ. ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನದಂದು, (ನದಿ ಸ್ನಾನ, ಸಮುದ್ರ ಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಟಪರ್ಯಂತರ ಸ್ನಾನ ಮಾತ್ರ.
  • ಊಟ ಮಾಡಲು ಕುಳಿತುಕೊಂಡ ಮೇಲೆ ಊಟದ ಮಧ್ಯದಲ್ಲಿ ಎದ್ದು ಹೋಗಬೇಡಿ. ಊಟವೊಂದು ಯಜ್ಞಕ್ಕೆ ಸಮಾನ.
  •  ಮನೆಯಿಂದ ಹೊರಗೆ ಹೊರಟಾಗ ಮನೆಯವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ, ಹೋಗುತ್ತೇನೆ ಎಂದು ಹೇಳಬೇಡಿ. ಹಿರಿಯರಿಂದ ಬಂದಿರುವ ಒಳ್ಳೆಯ ಸಂಪ್ರದಾಯಗಳನ್ನು ಕಲಿಯೋಣ ಮತ್ತು ಕಲಿಸೋಣ.

ಮೂಲ : ಡಿಜಿಟಲ್‌ ಸಂಗ್ರಹ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror