ಕನ್ನಡ ಭಾಷೆಯ ಅನೇಕ ಪದಗಳು ಸಂಸ್ಕೃತ ಮೂಲದ್ದಾಗಿವೆ. ಕನ್ನಡ ನಾಡಿನ ಊರಿನ ಹೆಸರುಗಳೂ ಸಂಸ್ಕೃತ ಭಾಷೆ ಆಧಾರಿತವಾಗಿವೆ. ಸಂಸ್ಕೃತವನ್ನು ಕೈಬಿಟ್ಟರೆ ಕನ್ನಡಕ್ಕೇ ನಷ್ಟ ಎಂದು ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಲಿಟ್ ಫೆಸ್ಟ್‌ನಲ್ಲಿಂದು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ತಮ್ಮ ಕಾದಂಬರಿಗಳಲ್ಲಿ ಎದುರಾಗುವ ಸಂಕಟದ ಚಿತ್ರಣ ಹಾಗೂ ಪಾತ್ರಗಳು ತಮ್ಮ ಅನುಭವದಿಂದಲೇ ಬಂದವುಗಳಾಗಿವೆ ಎಂದರು. ಪರ್ವ ಕಾದಂಬರಿ ಬರೆಯುವ ಮುನ್ನ ಹಿಮಾಲಯ ಸಹಿತ ದೇಶಾದ್ಯಂತ ಸಂಚರಿಸಿದ್ದೇನೆ. ಹೀಗೆ ಅನುಭವಗಳೇ ಕಾದಂಬರಿಯಲ್ಲಿ ಪ್ರತಿಫಲನಗೊಂಡಿವೆ ಎಂದು ಅವರು ತಿಳಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel