ದೇಶಕಟ್ಟಿದ ಸರದಾರನಿಗೆ ನಮೋ ನಮಃ…. |

November 1, 2021
2:35 PM

ಸರದಾರ ವಲ್ಲಭಭಾಯಿ ಪಟೇಲರ ಜನುಮದಿನ ಅಕ್ಟೋಬರ್‌ 31

Advertisement

1857 ರಲ್ಲಿ ಝಾನ್ಸಿ ಯಲ್ಲಿ ರಾಣಿ ಲಕ್ಷ್ಮೀ ಬಾಯಿ ಆಂಗ್ಲರ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಾವೇಷದಿಂದ ಹೋರಾಡಿ ಪ್ರಾಣತೆತ್ತಳು. ಆಗ ಹೊಲದಲ್ಲಿ ಊಳುತ್ತಿದ್ದ ಝವೇರಾಬಾಯಿ ,ಈ ಸುದ್ದಿಯನ್ನು ಕೇಳಿ ನೇಗಿಲನ್ನು ಅಲ್ಲೇ ಕೆಳ ಹಾಕಿ ಕತ್ತಿಯನ್ನು ಹಿಡಿದು ಸೈನ್ಯ ಸೇರಿ ಯುದ್ಧಕ್ಕೆ ಹೊರಟ. ಇಂಗ್ಲೀಷರ ಸೈನ್ಯ ದೊಂದಿಗೆ ಶೌರ್ಯ ಸಾಹಸಗಳೊಂದಿಗೆ ಹೋರಾಡಿದ. ಈ ಝವೇರಾಬಾಯಿಯ ಮಗನೇ ವಲ್ಲಭಭಾಯಿ ಪಟೇಲರು.

ತನ್ನ ತಂದೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ತಾಯಿ ಲಾಡಬಾಯಿ ವಿವರಿಸುತ್ತಿದ್ದರೆ ಬಾಲಕ ವಲ್ಲಭಭಾಯಿಯ ಮೈ ಜುಂ ಎನ್ನುವಂತಾಗುತ್ತಿತ್ತು. ರಕ್ತ ಕುದಿಯುತ್ತಿತ್ತು…… ಗುಜರಾತಿನ ಪುಟ್ಟ ಹಳ್ಳಿ ಕರಮಸದ. ಅಲ್ಲಿನ ರೈತ ದಂಪತಿ ಝವೇರಾ ಭಾಯಿ ಹಾಗೂ ಲಾಡಬಾಯಿ ದಂಪತಿಗಳ ಐವರು ಮಕ್ಕಳಲ್ಲಿ ನಾಲ್ಕನೇಯವರು ವಲ್ಲಭಭಾಯಿ ಪಟೇಲರು. 1875  ಅಕ್ಟೋಬರ್  31  ರಂದು ಜನಿಸಿದರು.

ಬಾಲ್ಯದಿಂದಲೇ ಬ್ರಿಟಿಷ್ ರ ದಬ್ಬಾಳಿಕೆಗಳನ್ನು ನೋಡುತ್ತಾ ಬೆಳೆದುದರಿಂದ ಸಹಜವಾಗಿ ಸ್ವಾತಂತ್ರ್ಯ ಹೋರಾಟದತ್ತ ಮುಖ ಮಾಡಿದರು.ದೇಶಪ್ರೇಮ ಉಕ್ಕಿ ಹರಿಯುತ್ತಿತ್ತು. ಗಾಂಧಿಯವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ವಲ್ಲಭಭಾಯಿ ಪಟೇಲ್ ರವರೂ ಜತೆಯಾದರು. ಗಾಂಧೀಜಿಯವರು ಹಾಗೂ ವಲ್ಲಭಭಾಯಿ ಪಟೇಲರವರಿಬ್ಬರೂ ವಕೀಲಿ ವೃತ್ತಿಯಿಂದ ರಾಜಕೀಯ ಪ್ರವೇಶ ಮಾಡಿದವರು. ಅಂದಿನ ಸನ್ನಿವೇಶಗಳು ಹಾಗಿತ್ತು. ವ್ಯಾಪಾರಕ್ಕೆ ತಕ್ಕಡಿ ಹಿಡಿದು ಕೊಂಡು ಬಂದವರು ದೇಶದ ಆಡಳಿತವನ್ನು ಕೈಗೆತ್ತಿಕೊಂಡರೆ ಭಾರತಾಂಬೆಯಕ್ಕಳು ಸುಮ್ಮನಿರುವುದು ಸಾಧ್ಯವೇ. ನಮ್ಮ ಸಂಪತ್ತುಗಳನ್ನು ಕೊಳ್ಳೆ ಹೊಡೆಯುವುದನ್ನು ನೋಡುತ್ತಾ ಕುಳಿತು ಕೊಳ್ಳುವುದು ಹೇಡಿಗಳಿಂದ ಮಾತ್ರ ಸಾಧ್ಯ ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋರಾಟಕ್ಕೆ ಧುಮುಕಿದವರು ಪಟೇಲರು.

1982 ರಲ್ಲಿ ಬ್ರಿಟಿಷ್ ಸರ್ಕಾರವು ರೈತಾಪಿ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿತು. ಏನು ಮಾಡುವುದೆಂದರಿಯದೆ ಕಂಗಾಲಾದ ರೈತರು ಪಟೇಲರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಪಟೇಲರು ” ಭೂಮಿ ನಮ್ಮದು , ದೇಶ ನಮ್ಮದು, ಎಲ್ಲಿಂದಲೋ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವಷ್ಟು ಪೊಗರೇ” ಎಂದು ತೀವ್ರ ಸ್ವರೂಪದ ಹೋರಾಟಕ್ಕಿಳಿದು ಸಫಲರಾದರು. ಈ ಚಳುವಳಿಯಲ್ಲಿ ‌‌ಯಶಸ್ವಿಯಾದುದನ್ನು ಕಂಡು ಗಾಂಧೀಜಿಯವರು ‘ ಸರದಾರ’ ಎಂಬ ಬಿರುದನ್ನು ಕೊಟ್ಟರು. ಅಂದಿನಿಂದ ‘ಸರದಾರ್ ವಲ್ಲಭಭಾಯಿ ಪಟೇಲ್ ‘ ಎಂಬ ಹೆಸರಿನಿಂದ ಪ್ರಸಿದ್ಧರಾದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಾತ್ರವಲ್ಲದೆ ಸ್ವತಂತ್ರ ಭಾರತ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಯಶಸ್ವಿಯಾದವರು ಪಟೇಲರು. ಸ್ವತಂತ್ರವಾದ ಭಾರತದ ಪ್ರಥಮ ಪ್ರಧಾನಿ ಯಾಗುವ ಜನರ ನಿರೀಕ್ಷೆ ಹುಸಿಯಾಯಿತು. ಒಂದು ವೇಳೆ ಪಟೇಲರು ಪ್ರಧಮ ಪ್ರಧಾನ ಮಂತ್ರಿಯಾಗಿರುತ್ತಿದ್ದರೆ……….. ಎಂಬ ಮನದ ಮಾತು ಇಂದಿಗೂ ಮತ್ತೆ ಮತ್ತೆ ಕಾಡುತಿರುವುದು ಸುಳ್ಳಲ್ಲ.
ಉಕ್ಕಿನ ಮನುಷ್ಯನ ಜನುಮದಿನದ ನೆನಪುಗಳು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು
May 11, 2025
7:15 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಬೀಜದ ಚಟ್ನಿ ಪುಡಿ
May 10, 2025
8:00 AM
by: ದಿವ್ಯ ಮಹೇಶ್
ಭಗವದ್ಗೀತೆ ಬಿಡಿ, ಬೇರೆ ಏನಾದ್ರೂ ಸ್ತೋತ್ರ ಬರ್ತದಾ..?
May 9, 2025
10:01 AM
by: ಡಾ.ಚಂದ್ರಶೇಖರ ದಾಮ್ಲೆ
ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group