ಶ್ರೀ ಅದಮಾರು ಶ್ರೀ(Adamaaru Matta)ಗಳ ಮುಖೇನ ನೆಡೆಯಲ್ಪಟ್ಟ “ಸರ್ವ”ಮಲೆನಾಡು ಗಿಡ್ಡ ಗೋ ಸಂವರ್ಧನಾಕಾಂಕ್ಷಿ ಗೋಪಾಲಕರ( Malenadu cow Breed) ಪ್ರಥಮ ಬೌತಿಕ ಸಮಾವೇಶದ(Conference) ಬಗ್ಗೆ ಒಂದು “ಮೆಲುಕು”…
ನಾವೊಂದಷ್ಟು ಗೋವು ಉಳಿಸುವ ಮನಸಿನವರು ಅಳಿದು ಹೋಗುತ್ತಿರುವ ಮಲೆನಾಡು ಗಿಡ್ಡ ತಳಿ ಉಳಿಸುವ ಬಗ್ಗೆ ಬಹಳ ಚಿಂತಿತರಾಗಿದ್ವಿ…. ಈಗ್ಗೆ ಕೇವಲ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎಲ್ಲ ಮಲೆನಾಡು ಕರಾವಳಿಯ(Coaastal) ರೈತಾಪಿಗಳ(Farmer) ಮನೆಯಲ್ಲಿ ರೈತಾಪಿ ಜೀವನದೊಂದಿಗೆ ಹಾಸುಹೊಕ್ಕಾಗಿದ್ದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಈ ಹೊತ್ತಿಗೆ ಊರೂರಿನಲ್ಲಿ ಕೈ ಬೆರಳಲ್ಲಿ ಎಣಿಸುವಷ್ಟು ಉಳಿದು ಇನ್ನೊಂದು ಹತ್ತು ಇಪ್ಪತ್ತು ವರ್ಷಗಳ ತದನಂತರ ” ಮಲೆನಾಡು ಗಿಡ್ಡ ತಳಿ ” ಎಂಬುದೊಂದು ದೇಸಿ ತಳಿ ಹಸು ಈ ಮಲೆನಾಡು ಕರಾವಳಿಯ ಏಳು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು ಎಂಬುದಕ್ಕೆ ಕುರುಹೇ ಇಲ್ಲದಂತಾಗುವ ಪರಿಸ್ಥಿತಿಯಲ್ಲಿದೆ.
ಈ ಸಂಬಂಧಿಸಿದಂತೆ ನಾವು ಮಲೆನಾಡು ಕರಾವಳಿಯ ಒಂದಷ್ಟು ಸಮಾನ “ಗೋ ಮನಸ್ಕರು ” ಇಂದಿನ ಸಾಮಾಜಿಕ ಜಾಲ ತಾಣಗಳ ಮೂಲಕ ಒಂದಾಗಿ, ಈ ಸಂಬಂಧಿಸಿದ “ವಾಟ್ಸಾಪ್ ವೇದಿಕೆ” ಸಿದ್ದವಾಗಿ ಅಲ್ಲಿ ಕೆಲವು ತಿಂಗಳಿನಿಂದ ಚರ್ಚಿಸುತ್ತಾ ಹಲವಾರು ಬಗೆಯಲ್ಲಿ ಚಿಂತನ ಮಂಥನ ನೆಡೆಸುತ್ತಾ “ಏನಾದರೂ ಈ ಗೋ ಉಳಿಸೋ ವಿಚಾರದಲ್ಲಿ ಒಂದು “ವ್ಯವಸ್ಥೆ” ಮಾಡ ಬೇಕು “.. ಎಂದುಕೊಳ್ಳುತ್ತಿದ್ದೆವು.
ಅಕ್ಷಯ್ ಆಳ್ವರು ಪುತ್ತೂರು , ಮರಿಕೆ ಸದಾಶಿವ ಭಟ್ಟರು, ಮುರಳಿ ಕೃಷ್ಣ ಭಟ್ಟರು, ಪದ್ಯಾಣ ಮಹೇಶ್ ರವರು, ಪ್ರಸನ್ನ ಭಟ್ಟರು, ಉದಯಶಂಕರ್ ರವರು, ಉಮಾಶಂಕರ ಶೆಟ್ಟಿಯವರು ಬ್ರಹ್ಮಾವರ, ಸತ್ಯನಾರಾಯಣ ರವರು, ಜಗದೀಶ ಪ್ರಸಾದ್ ಉಜಿರೆ , ಡಾ ಸುಂದರೇಶ್ ಮತ್ತು ಡಾ ಜಾನಕಿ ಸುಂದರೇಶ್ ಕಳಸ, ಡಿ ಆರ್ ಗೌಡರು, ವಿನಯ ತಿಪಟೂರು, ಸಂದೇಶ್ ರವರು, ಮಂಜುನಾಥ ರವರು, ಪ್ರವೀಣ್ ಬೆಳ್ಳಾರೆ, ಸತೀಶ್ ಭಟ್ಟರು, ಕೃಷ್ಣ ಪ್ರಸಾದ್, ಸುಧೀಶ್ ನಾಯಕ್, ಪುರುಷೋತ್ತಮ ರವರು, ಶ್ರೀನಿವಾಸ್, ದಿನೇಶ್ ಕಟೀಲ್ ರು, ಮಹೇಶ ಪುಚ್ಚಪಾಡಿಯವರು, ಪ್ರವೀಣ ಸರಳಾಯರು, ಇನ್ನೂ ಹಲವಾರು ಜನ ಗೋಪಾಲಕರು ಈ ಬಗ್ಗೆ ಸದಾ ಚಿಂತನೆ ಮಾಡತೊಡಗಿದೆವು.
ಈ ಚಿಂತನೆ ಮತ್ತು ಪ್ರಯತ್ನಕ್ಕೊಂದು ಚೌಕಟ್ಟು ಕಟ್ಟಲೇ ಬೇಕೆಂದು ಜಗದೀಶ್ ಪ್ರಸಾದ್ ರವರು ಅಬೂಬಕ್ಕರ್ ಕಾರ್ಕಳ (ಅಮೂಲ್ಯ 840 ಬತ್ತ ತಳಿ ಸಂಗ್ರಹಾಕರು) ರವರ ಮೂಲಕ ಶ್ರೀ ಮಠದ ಆಪ್ತರಾಗಿರುವ ಪುರುಷೋತ್ತಮ ಅಡ್ವೆಯವರ ಸಂದಾನ ದಲ್ಲಿ ಅದಮಾರು ಶ್ರೀ ಗಳ ಸಂಪರ್ಕಿಸಿ ಶ್ರೀ ಗಳೊಂದಿಗೆ ದೂರವಾಣಿಯ ಮೂಲಕ ಸಂವಹಿಸಿ ಈ ಗುರುವಾರದ ಭೇಟಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ನಮ್ಮ ವೇದ ಪುರಾಣದ ಯಾವುದೇ ಕಾರ್ಯವನ್ನು ಆರಂಭಿಸಲು ಗುರು ಹಿರಿಯರ ಆಶಿರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಸೂಚಿಸುತ್ತಾರೆ. ಅದಕ್ಕೆ ” ಗುರು ಬ್ರಹ್ಮ , ಗುರು ವಿಷ್ಣು ,ಗುರು ಸಾಕ್ಷಾತ್ ಮಹೇಶ್ವರ ” ಎನ್ನುವ ಅಮೃತ ವಾಖ್ಯೆ ಇರುವುದು. ಅಂತೆಯೇ…ಅದಮಾರು ಶ್ರೀಗಳ ಮಾರ್ಗದರ್ಶನದಲ್ಲಿ, ನಾಯಕತ್ವದಲ್ಲಿ ನಾವುಗಳು ಮುಂದುವರೆಯುವುದೆಂದು ತೀರ್ಮಾನಕ್ಕೆ ಬಂದೆವು…
ಗುರುವಾರ ಅದಮಾರು ಮಠದ ಪ್ರಾಣ ದೇವರಿನ ಎದುರಿನಲ್ಲಿ ನಾವು ಶ್ರೀ ಗಳ ಮಾರ್ಗದರ್ಶನಕ್ಕೆ ಕುಳಿತೆವು…. ಸುಮಾರು ಹನ್ನೆರಡುವರೆಯ ಹೊತ್ತಿಗೆ ಶ್ರೀ ಗಳು ಬಂದು ನಮ್ಮೆದುರು “ಬರೀ ನೆಲದ ಮೇಲೇ ಕುಳಿತರು .. ನನಗಂತೂ ಶ್ರೀ ಗಳ ಈ ಸರಳತೆ , ಅವರ “ಭೂಮಿಗೆ ಅಂಟಿದ ನಡೆ” ಅದ್ಭುತವಾದ “ನಡುವಳಿಕೆ” ಎನಿಸಿತು. ಅವರು ” ದೊಡ್ಡ ಪೀಠಾಧ್ಯಕ್ಷರು”. ಆದರೂ ಅವರ ಈ ” ಅಹಮಿಲ್ಲದ” ನಿಮ್ಮೊಳಗೆ ನಾನೂ ಒಬ್ಬ ಎಂಬ ಸರಳವಾಗಿ ಎಲ್ಲರೊಳಗೊಬ್ಬರಾಗುವ ನಡುವಳಿಕೆ ಅವರ ” ಮೇರು ವ್ಯಕ್ತಿತ್ವವನ್ನು ” ನಮಗೆ ತೋರಿಸಿಕೊಟ್ಟಿತು. ನಾವೆಲ್ಲರೂ ಶ್ರೀ ಗಳಿಗೆ ನಮಸ್ಕರಿಸಿದೆವು.
ಸಭೆಯಲ್ಲಿ ಸೇರಿದ ಹತ್ತು ಜನರುಗಳು ಶ್ರೀಗಳಿಗೆ ಪರಿಚಯ ಮಾಡಿಕೊಂಡೆವು. ಶ್ರೀ ಶ್ರೀ ನಿವಾಸ್, ಡಾ ಸುಂದರೇಶ್, ಪುರುಷೋತ್ತಮ, ಜಗದೀಶ್ ಪ್ರಸಾದ್, ಸುದೀಶ್ ನಾಯಕ್ , ಪ್ರವೀಣ್ ಸರಳಾಯರು, ಅಬೂಬಕ್ಕರ್ ಕಾರ್ಕಳ, ಪ್ರಬಂಧ ಅಂಬುತೀರ್ಥ, ಪ್ರತೀಕ್, ನರೇಂದ್ರ ದಂಪತಿಗಳು (ಪೆರ್ಡೂರಿನಲ್ಲಿ ಗೋಶಾಲೆ ನಿರ್ವಹಣೆ ಮಾಡುತ್ತಿರುವ ಇಂಜಿನಿಯರ್ ದಂಪತಿಗಳಿವರು ) , ತಿರುಮಲೇಶ್ವರ ಪ್ರಸನ್ನ, ಸತೀಶ್ ಭಟ್ ರವರು, ಎಲ್ಲರ ಪರಿಚಯ ವಿನಿಮಯ ಆದ ನಂತರ ಶ್ರೀ ಗಳು ಈ ಬಗ್ಗೆ ಮಾತನಾಡುತ್ತ ಮೊದಲು ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಸಮಿತಿಯನ್ನು ರಿಜಿಸ್ಟರ್ ಮಾಡುವುದು.
ನಂತರ … ಮಲೆನಾಡು ಗಿಡ್ಡ ತಳಿ ಹಸುಗಳ ಹಾಲು-ಉಪ ಉತ್ಪನ್ನಗಳು ಗೋಮೂತ್ರ -ಉಪ ಉತ್ಪನ್ನಗಳು ಸಗಣಿ – ಉಪ ಉತ್ಪನ್ನಗಳು… ಹೀಗೆ ಉಪ ಉತ್ಪನ್ನ ಗಳ ಮೌಲ್ಯವರ್ಧನೆ ಮಾಡುವ ಕೆಲಸ ಮಾಡೋಣ ಎಂದು ಮಾರ್ಗದರ್ಶನ ಮಾಡಿದರು.. ಸಭೆಯಲ್ಲಿ…. ಗೋ ಕೃಪಾಮೃತ, ಸಗಣಿ ಗೊಬ್ಬರದ ಅನಿವಾರ್ಯತೆ, ಗೋಪಾಲಕರ ತುರ್ತು ತಿರುಗಾಟದಲ್ಲಿ ಅವರ ಗೋವುಗಳನ್ನ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ, ಮಲೆನಾಡು ಗಿಡ್ಡ ತಳಿ ಹಸುವಿನ ಹಾಲನ್ನೇ ದೇಸಿ ತಳಿ ಹಸುಗಳ ಸಾಕುವ ಗವ್ಯೋತ್ಪಾದಕರಿಂದ ದೇವಸ್ಥಾನ ಗಳು ಖರೀದಿಸುವ ಬಗ್ಗೆ, ಗೋವುಗಳ ಮೇವಿನ ಬಗ್ಗೆ, ಗವ್ಯೋತ್ಪನ್ನ ಮಾರಾಟ ಮಾಡುವ ಮಳಿಗೆ ವ್ಯವಸ್ಥೆ ಯ ಬಗ್ಗೆ …
ಹೀಗೆ ಅನೇಕಾನೇಕ ವಿಚಾರ ಗಳು ಸುದೀರ್ಘ ಎರಡು ಗಂಟೆಗಳ ಕಾಲ ಮೀಟಿಂಗ್ ನಲ್ಲಿ ಚರ್ಚಿತವಾಯಿತು.
ಶ್ರೀ ಗಳು ಯಾವುದೇ ಬೇಸರವಿಲ್ಲದೇ ಬಹಳ ಸಮಾಧಾನದಿಂದ ನಮ್ಮ ಅಹವಾಲು ಗೋಸವಾಲುಗಳನ್ನ ಆಲಿಸಿದರು. ಸ್ವಸ್ಥಿ ಮಂತ್ರ ಪಠಣದ ನಂತರ ನಮ್ಮೆಲ್ಲರಿಗೂ ಶ್ರೀ ಗಳು ಫಲ ಮಂತ್ರಾಕ್ಷತೆಯನ್ನ ನೀಡಿ ಆಶಿರ್ವಾದಿಸಿದರು. ಶ್ರೀ ಗಳು ಎಲ್ಲಾ ಗೋಪಾಲಕರಿಗೂ ತಮ್ಮ ಮಠದ ಪ್ರಾಂಗಣದ ಒಳಗೆ ಅದ್ಭುತವಾದ “ಸುಗ್ರಾಸ ” ಭೋಜನವನ್ನು ವ್ಯವಸ್ಥೆ ಮಾಡಿದ್ದರು.. ಅದಮಾರು ಶ್ರೀ ಗಳು ನಮಗೆ ಮಾರ್ಗದರ್ಶನವನ್ನೂ ಮಾಡಿ ಅನ್ನ ಪ್ರಸಾದವನ್ನೂ ನೀಡಿ ಆಶಿರ್ವಾದ ಮಾಡಿದ್ದು ನಮಗೆಲ್ಲರಿಗೂ ಹೃದಯ ತುಂಬಿ ಬಂದಿತು…
ಅದಮಾರು ಮಠದ ಸಭಾ ಮಂಟಪದ ಗೋಡೆಯಲ್ಲಿ ಒಂದು ರೇಖಾಚಿತ್ರವಿದೆ. ಆ ಚಿತ್ರದಲ್ಲಿ “ಗೋದೂಳಿ ಸಮಯದಲ್ಲಿ ಮಥುರೆಯ ಹುಲ್ಲು ಗಾವಲಿನಲ್ಲಿ ಗೋವುಗಳ ಮೇಯಿಸಿಕೊಂಡು ಗೋಕುಲದತ್ತ ಶ್ರೀ ಕೃಷ್ಣ ಪರಮಾತ್ಮರು ಕುಣಿಯುತ್ತ ಕೊಳಲನೂದಿ ಸಂಭ್ರಮಿಸುತ್ತಾ ಬರುವಾಗ ಶ್ರೀ ಕೃಷ್ಣ ಪರಮಾತ್ಮರ ಹಿಂದೆ ನಲಿಯುತ್ತ ಗೋವುಗಳೂ ಸಂತಸದಿಂದ ಬರುವ ” ಚಿತ್ರವದು…
ಅಂತೆಯೇ … ಈ ಸಂಧರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಸ್ವರೂಪಿಯಾದ ಪೂಜ್ಯ ಅದಮಾರು ಶ್ರೀಗಳ ಮುಂದೆ ಮಾರ್ಗದರ್ಶಿಗಳಾಗಿ ಹಿಂದೆ ಗೋವುಗಳೂ ಗೋಪಾಲಕರು ಸಾಗುವ ಕಾಲ್ಪನಿಕ ಚಿತ್ರವನ್ನು ವಾಸ್ತವವಾಗಲಿ ಎಂದು “ನಾವೆಲ್ಲರೂ” ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಶ್ರೀಗಳಿಗೆ ಮತ್ತು ಮಠದ ಸಿಬ್ಬಂದಿ ವರ್ಗ , ಊಟೋಪಚಾರ ಮಾಡಿದ ಪರಿಶಂಚನ ಅನ್ನಬ್ರಹ್ಮರಿಗೆ ಕೃತಜ್ಞತೆ ಸಲ್ಲಿಸುತ್ತಾ ಹೊರಬಂದೆವು.