ಸುಳ್ಯ ತಾಲೂಕಿನ ಎಲಿಮಲೆಯ ಹೊನ್ನಡಿ ಕಾಂಪ್ಲೆಕ್ಸ್‌ನಲ್ಲಿ ಡಾ.ಮಹೇಶ್ ಕೆ ಎಸ್ ಅವರ ಆಯುರ್ವೇದ ಕ್ಲಿನಿಕ್ ಸತ್ವಂ ಚಿಕಿತ್ಸಾಲಯ ಬುಧವಾರ ಆರಂಭಗೊಂಡಿತು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ, ನೆಲ್ಲೂರು ಕೆಮ್ರಾಜೆ ಗ್ರಾಪಂ ಅಧ್ಯಕ್ಷೆ ಶೀಲಾವತಿ, ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷ ವಿಷ್ಣು ಭಟ್ ಮೂಲೆತೋಟ ಶುಭ ಹಾರೈಸಿದರು. ಹೊನ್ನಡಿ ಕಾಂಪ್ಲೆಕ್ಸ್ ನ ಕೃಷ್ಣ ಭಟ್ ಹೊನ್ನಡಿ ಉಪಸ್ಥಿತರಿದ್ದರು.
ಸತ್ವಂ ಚಿಕಿತ್ಸಾಲಯದ ವೈದ್ಯ ಡಾ.ಮಹೇಶ್ ಕೆ ಎಸ್ ಮಾತನಾಡಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಮಹೇಶ್ ಕೆ ಎಸ್ ಅವರು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಇಒ ಶಂಕರನಾರಾಯಣ ಶರ್ಮ ಹಾಗೂ ನಿವೃತ್ತ ಶಿಕ್ಷಕಿ ರಾಜೇಶ್ವರಿ ಅವರ ಪುತ್ರ. ವ್ಯಾಸಂಗದ ಬಳಿಕ ಹಲವು ಸಮಯಗಳಿಂದ ಮಣಿಪಾಲ, ಉಡುಪಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.ಎಪ್ರಿಲ್ 4ರಿಂದ ವ್ಯಾಪ್ತಿ ಹಾಗೂ ಪ್ರಮಾಣ…
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ.…
ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು…
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2024-25ನೇ ಹಣಕಾಸು ವರ್ಷದಲ್ಲಿ 5150 ಕಿ.ಮೀ.…
ದೇಶದ 81 ಕೋಟಿಗೂ ಹೆಚ್ಚು ಜನರಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯವನ್ನು…
ಜ್ಯೋತಿಷ್ಯ ಸಂಬಂಧಿತ ಮಾಹಿತಿಯನ್ನು ಬಯಸಿದರೆ, ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490