MIRROR FOCUS

ಗ್ರಾಮೀಣ ಭಾಗದ ವಿದ್ಯಾರ್ಥಿ ಸಾಧನೆ | ಜೆಇಇ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದ ಸಾತ್ವಿಕ್‌ | ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ |

Share

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡಾ ಸಾಧನೆ ಮಾಡಬಲ್ಲರು. ಅಂತಹ ಹತ್ತಾರು ಉದಾಹರಣೆಗಳು ಇವೆ. ಇದೀಗ ಇನ್ನೊಂದು ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬರಬು ಮಾಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಪದವಿಪೂರ್ವ ವಿಭಾಗದ ವಿದ್ಯಾರ್ಥಿ ಸಾತ್ವಿಕ್‌ ಜೆಇಇ ಪರೀಕ್ಷೆಯಲ್ಲಿ ಶೇ.97.91 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

Advertisement
Advertisement

ಕುಮಾರಸ್ವಾಮಿ ವಿದ್ಯಾಲಯದ ಪಿಯುಸಿ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಸಾತ್ವಿಕ್‌ ಜೆಇಇ(ಮೈನ್)‌ ಪರೀಕ್ಷೆಗೆ ಬರೆದಿದ್ದರು. ಈಗ ಅವರು ಶೇ.97.91 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೂ ಇದೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಸಾತ್ವಿಕ್‌, ಜೆಇಇ ಪರೀಕ್ಷೆಯನ್ನು ಹೆಚ್ಚಿನ ತರಬೇತಿ ಇಲ್ಲದೆ ಬರೆದಿದ್ದಾರೆ. ಆರಂಭದಲ್ಲಿ ಆನ್‌ ಲೈನ್‌ ಮೂಲಕ ತರಬೇತಿ ಪಡೆಯುತ್ತಿದ್ದರು. ನಂತರ ಕಾಲೇಜು ಪ್ರಾಂಶುಪಾಲ ಡಾ.ಸಂಕೀರ್ತ್‌ ಹೆಬ್ಬಾರ್‌ ಅವರಿಂದ ತರಬೇತಿ ಪಡೆಯುತ್ತಿದ್ದರು.

ಸಾತ್ವಿಕ್

ಗ್ರಾಮೀಣ ಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಜೆಇಇ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿರುವ ಸಾತ್ವಿಕ್‌ ಹೀಗೆ ಹೇಳುತ್ತಾರೆ, ಪ್ರಕೃತಿ ಸೌಂದರ್ಯದ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಒತ್ತಡ ರಹಿತವಾಗಿ ಓದಲು ಅನುಕೂಲವಾಗಿದೆ.ಇಂತಹ ಅವಕಾಶ ನೀಡಿರುವ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಆಭಾರಿಯಾಗಿದ್ದೇನೆ. ಶಿಕ್ಷಣಕ್ಕೆ ಆದ್ಯತೆ ಹಾಗೂ ಸಕಾರಾತ್ಮಕ ಅಂಶಗಳನ್ನ ಒಳಗೊಂಡ ಒಳ್ಳೆಯ ವಾತಾವರಣ ಇಲ್ಲಿ ಸೃಷ್ಟಿಯಾಗಿರುವುದು ಕಲಿಯುವುದಕ್ಕೆ ಹೆಚ್ಚು ಸಾಧ್ಯವಾಯಿತು ಎನ್ನುತ್ತಾರೆ.

ಎಸ್‌ಎಸ್‌ಎಲ್‌ಸಿ ಯಲ್ಲೂ ಉತ್ತಮ ಸಾಧನೆ ಮಾಡಿರುವ ಸಾತ್ವಿಕ್‌ ಈ ಬಾರಿ ಕೂಡಾ ವಿಶೇಷವಾದ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೂಡಾ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದು ಸಾಧಿಸಿದ್ದಾರೆ ಹಾಗೂ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ.‌ ಸಾತ್ವಿಕ್‌ ಅವರು ಡಾ.ಶಶಿಧರ್‌ ಹಾಗೂ ಡಾ.ಅನುಪಮ ಅವರ ಪುತ್ರ.

Satvik, student of Kumaraswamy Vidyalaya in KukkeSubrahmanya, scored the best in the JEE exam

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…

1 hour ago

ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ

ಲಡಾಖ್‌ನ ದ್ರಾಸುದಲ್ಲಿಂದು  26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ   ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…

2 hours ago

ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ

ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…

3 hours ago

ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…

6 hours ago

ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ

ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…

9 hours ago

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…

10 hours ago