ರೂರಲ್ ಚಾಟ್ ಶಾಪ್ ಓನರ್‌.. ಕಮ್ಯುನಿಟಿ ಹೀರೋ….! | ಜನಪ್ರಿಯ ಚಾಟ್ ಅಂಗಡಿಯ ಹಿಂದಿನ ವ್ಯಕ್ತಿ ಸತ್ಯನಾರಾಯಣ ತಳೂರು |

June 10, 2024
10:17 AM
ಸತ್ಯನಾರಾಯಣ ತಳೂರು ಅವರ ಶಿಲ್ಪಂ ಡೆಸಾರ್ಟ್‌ ಗ್ರಾಮೀಣ ಭಾಗದ ಮಾದರಿ ಉದ್ಯಮವಾಗಿದೆ. ಪರಿಸರ ಸ್ನೇಹಿ ವ್ಯವಸ್ಥೆಗಳೊಂದಿಗೆ ತನ್ನ ಚಾಟ್ಸ್ ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ. ಸಣ್ಣ ಬದಲಾವಣೆಗಳ ಮೂಲಕ ಗ್ರಾಮೀಣ ಭಾಗದಲ್ಲೂ ಹೇಗೆ ಗಮನಾರ್ಹ ಪರಿಣಾಮಗಳನ್ನು , ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಸತ್ಯನಾರಾಯಣ ಅವರು ಉದಾಹರಣೆ.

ಗ್ರಾಮೀಣ ಭಾಗದಲ್ಲಿ ಒಂದು ಪುಟ್ಟ ಉದ್ಯಮ ಹೇಗೆ ಬೆಳೆಯಬಹುದು..? ಬೆಳೆಸಬಹುದು..?. ಇದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತಳೂರಿನ ಸತ್ಯನಾರಾಯಣ. ಸುಳ್ಯ-ಸುಬ್ರಹ್ಮಣ್ಯ ರಸ್ತೆ ನಡುವೆ ತಳೂರಿನಲ್ಲಿ ಇರುವ ಶಿಲ್ಪಂ ಡೆಸಾರ್ಟ್‌ ಎಲ್ಲರ ಆಕರ್ಷಣೆಯ ಕೇಂದ್ರ. ಗ್ರಾಮೀಣ ಭಾಗದ ಜನಪ್ರಿಯ ಚಾಟ್‌ ಶಾಪ್‌ ಕೂಡಾ ಹೌದು. ಇಲ್ಲಿಗೆ ಬಾರದವರು ಯಾರು..? ಯಾಕಿಷ್ಟು ಆಕರ್ಷಣೆ..?. ಇವರದು ಬರಿಯ ಚಾಟ್‌ ಶಾಪ್‌ ಅಲ್ಲ, ಪರಿಸರ ಪ್ರೇಮಿಯೂ ಹೌದು.  ಹೀಗಾಗಿ ಅವರೊಬ್ಬ ಕಮ್ಯನಿಟಿ ಹೀರೋ ಕೂಡಾ..! …….ಮುಂದೆ ಓದಿ…..

Advertisement
Advertisement

Advertisement

ಸುಳ್ಯ-ಸುಬ್ರಹ್ಮಣ್ಯ ರಸ್ತೆ ನಡುವೆ ತಳೂರಿನಲ್ಲಿ ಇರುವ ಶಿಲ್ಪಂ ಡೆಸಾರ್ಟ್‌ ಎಲ್ಲರನ್ನು ಆಕರ್ಷಿಸುತ್ತದೆ. ಸುತ್ತಲೂ ಪರಿಸರ, ಅದರ ನಡುವಿನ ಚಾಟ್‌ ಅಂಗಡಿ. ಅದರ ಹೆಸರು ಶಿಲ್ಪಂ ಡೆಸಾರ್ಟ್.‌ ಮರದ ಕೆಳಗೆ ಪ್ಲಾಸ್ಟಿಕ್‌, ಅಡಿಕೆ ಸೋಗೆಯ ಛಾವಣಿಯಿಂದ ಕೂಡಿದ ಅಂಗಡಿ ಅದು. ಅತ್ಯಂತ ಸರಳವಾದ ವ್ಯವಸ್ಥೆ. ಸಂಜೆಯ ವೇಳೆ ಈ ಅಂಗಡಿಯಲ್ಲಿ ಪಾನಿಪೂರಿ, ಚಾಟ್ಸ್‌ , ಜ್ಯೂಸ್‌ ಕುಡಿಯುಲು ಸಾಕಷ್ಟು ಮಂದಿ..!. ಹೆದ್ದಾರಿಯಲ್ಲಿ ಸಾಗುವವರಿಗೂ ಇಲ್ಲಿ ಒಂಚೂರು ವಿರಾಮ.

Advertisement

ಇದು ಸತ್ಯನಾರಾಯಣ ತಳೂರು ಅವರ ಉದ್ಯಮ ಹೌದು. ಹೊಟ್ಟೆಪಾಡು ನಿಜ. ಆದರೆ ಗ್ರಾಮೀಣ ಭಾಗದಲ್ಲಿ ಇಂತಹದ್ದೊಂದು ಪುಟ್ಟ ವ್ಯವಹಾರ ನಡೆಸಬಹುದು, ಆದಾಯ ಗಳಿಸಬಹುದು, ಗ್ರಾಮೀಣ ಆರ್ಥಿಕ ವ್ಯವಹಾರ, ಚಟುವಟಿಕೆ ನಡೆಸಬಹುದು ಮಾತ್ರವಲ್ಲ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚು ಮಾಡಿ ಸ್ವಾವಲಂಬಿಯಾಗಿ ಬದುಕಬಹುದು ಎನ್ನುವದಕ್ಕೆ ಶಿಲ್ಪಂ ಡೆಸಾರ್ಟ್‌ ಉದಾಹರಣೆ. ಆತ್ಮನಿರ್ಭರದ ಬಗ್ಗೆ ಕೊರೋನಾ ನಂತರ ಹೆಚ್ಚು ಚರ್ಚೆಯಾಯಿತು, ಆದರೆ ಕಳೆದ 12 ವರ್ಷಗಳಿಂದ ಆತ್ಮನಿರ್ಭರದ ಬಗ್ಗೆಯೇ ಸತ್ಯನಾರಾಯಣ ತಳೂರು ಮಾತನಾಡುತ್ತಾ, ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರದು ಮಾದರಿ ಉದ್ಯಮ.

ಸತ್ಯನಾರಾಯಣ ತಳೂರು ಅವರು ಪರಿಸರ ಸ್ನೇಹಿ ವ್ಯವಸ್ಥೆ ಬಳಸಿಕೊಂಡು ತಮ್ಮ ಚಾಟ್ ಅಂಗಡಿಯನ್ನು ನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಸಮುದಾಯದಲ್ಲಿ ನಿಜವಾದ ಸ್ಫೂರ್ತಿಯಾಗಿದ್ದಾರೆ. ಸುಸ್ಥಿರ ವಸ್ತುಗಳನ್ನು ಬಳಸಿ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ, ಅವರು ತಮ್ಮ ಗ್ರಾಹಕರಿಗೆ ರುಚಿಕರವಾದ ತಿಂಡಿಗಳನ್ನು ನೀಡುವುದಲ್ಲದೆ ಪರಿಸರವನ್ನು ರಕ್ಷಿಸುತ್ತಿದ್ದಾರೆ. ಲಾಭದಾಯಕ ಮತ್ತು ಪರಿಸರವನ್ನು ಜವಾಬ್ದಾರಿಯುತವಾಗಿ ರಕ್ಷಣೆ ಮಾಡುತ್ತಾ ವ್ಯವಹಾರವನ್ನು ನಡೆಸುವ ಅವರ ಕೆಲಸ ಇತರರು ಅನುಸರಿಸಲು ಸಕಾರಾತ್ಮಕ ಉದಾಹರಣೆಯಾಗಿದೆ. ಭವಿಷ್ಯದ ಗ್ರಾಮೀಣ ಉದ್ಯಮಶೀಲತೆಗೆ ಉತ್ತಮ ನಿದರ್ಶನವನ್ನು ಶಿಲ್ಪಂ ಡೆಸಾರ್ಟ್‌ ಹೊಂದಿದೆ.…….ಮುಂದೆ ಓದಿ…..

Advertisement

ಹೊಸಹೊಸ ಯೋಚನೆಗೆ ಕಾರಣವಾದ್ದು ಹಸಿವು ಎನ್ನುವ ಸತ್ಯನಾರಾಯಣ ತಳೂರು ಅವರು ಪಾನಿಪೂರಿ, ಮಸಾಲಪೂರಿ ಸಹಿತ ಹಲವು ಚಾರ್ಟ್‌ ಐಟಂ ತಯಾರು ಮಾಡುತ್ತಾರೆ. ಸಂಜೆಯ ವೇಳೆ ಗ್ರಾಹಕರು ದೂರದ ಊರುಗಳಿಂದಲೂ ಚಾಟ್ಸ್‌ ಸವಿಯಲು ಬರುತ್ತಾರೆ. ಅದರ ಜೊತೆಗೆ ವಿವಿಧ ಬಗೆಯ ಜ್ಯೂಸ್‌ ಕೂಡಾ ಇಲ್ಲಿ ಲಭ್ಯವಿದೆ. ಅವಿಲ್‌, ಮೊಜಿಟೋ, ಕಬ್ಬಿನ ಹಾಲು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ ಸತ್ಯನಾರಾಯಣ.  ವಿಶೇಷ ಎಂದರೆ ಎಲ್ಲಾ ಖರೀದಿಗಳಿಗೂ ಒಂದೇ ದರ ನಿಗದಿ ಮಾಡಿದ್ದಾರೆ. ಸಲೀಸಲಾಗಿ ಉದ್ಯಮ ನಡೆಯುತ್ತದೆ. ರಜೆ ಎನ್ನುವುದು ಉದ್ಯಮಕ್ಕಿಲ್ಲ. ರಜೆ ಇದ್ದರೆ ಆಧುನಿಕ ತಂತ್ರಜ್ಞಾನದ ಬಳಕೆ ಇಲ್ಲಿ ಮಾಡುತ್ತಾರೆ. ರಜೆಯ ಒಂದು ದಿನದ ಮುಂದೆ ವ್ಯಾಟ್ಸಪ್‌ ಸ್ಟೇಟಸ್‌ ಹಾಕುತ್ತಾರೆ, ಗ್ರಾಹಕರಿಗೆ ಈ ವಿಷಯ ತಿಳಿಯುತ್ತದೆ..!,ಗ್ರಾಮೀಣ ಭಾಗದಲ್ಲೂ ತಂತ್ರಜ್ಞಾನಗಳ ಸರಿಯಾದ ಬಳಕೆಗೂ ಇದೊಂದು ಉದಾಹರಣೆ..!.

Advertisement

ಈಗ ವ್ಯವಹಾರ, ವ್ಯಾಪಾರ ಮಾಡಲು ಸಾಕಷ್ಟು ಹೊಸ ಹೊಸ ಯೋಚನೆ, ಯೋಜನೆ ಇರುವಾಗ ಅತ್ಯಂತ ಸರಳವಾಗಿ ಗ್ರಾಮೀಣ ಭಾಗದಲ್ಲಿ ನಡೆಸಬಹುದಾದ ಆತ್ಮನಿರ್ಭರದ ಒಂದು ಹೆಜ್ಜೆ, ಅಧ್ಯಯನ ಮಾಡಬಹುದಾದ ಒಂದು  ಮಾದರಿ ಸತ್ಯನಾರಾಯಣ ತಳೂರು ಅವರದು.

Advertisement

Satyanarayan Talooru is a true inspiration in his rural community as he operates his chat shop using eco-friendly practices. By using sustainable materials and reducing waste, he is not only providing delicious snacks to his customers but also protecting the environment. His dedication to running a business that is both profitable and environmentally responsible sets a positive example for others to follow. Satyanarayan’s commitment to sustainability shows that small changes can make a big impact, and that we all have a responsibility to care for our planet. Let’s all take a page from Satyanarayan’s book and strive to make a difference in our own communities.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 04-07-2024 | ಕರಾವಳಿ ಜಿಲ್ಲೆಗಳಾದ್ಯಂತ ಮಳೆ | ಜು.9 ರಿಂದ ರಾಜ್ಯದಲ್ಲೂ ಮಳೆ ಕ್ಷೀಣಿಸುವ ಸಾಧ್ಯತೆ |
July 4, 2024
2:08 PM
by: ಸಾಯಿಶೇಖರ್ ಕರಿಕಳ
ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೇಂದ್ರ ಸರ್ಕಾರದ ಭಾರತ್‌ ರೈಸ್‌ ಮಾರಾಟ | ಭತ್ತದ ಉತ್ಪಾದನೆ ಕುಂಠಿತ | ಹೊಸ ನೀತಿ ಜಾರಿಗೆ ತರಲು ಚಿಂತನೆ
July 4, 2024
1:18 PM
by: The Rural Mirror ಸುದ್ದಿಜಾಲ
ಮಂಗಳೂರಿಗೆ ಬೇಕು ಪ್ರತ್ಯೇಕ ರೈಲ್ವೆ ವಿಭಾಗ | ಸಂಪರ್ಕ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಉದ್ದೇಶ | ರೈಲ್ವೆ ಬಳಕೆದಾರರ ಸಮಿತಿಯಿಂದ ಸಹಿ ಅಭಿಯಾನ!
July 4, 2024
1:05 PM
by: The Rural Mirror ಸುದ್ದಿಜಾಲ
ಹಲವು ವಿಶೇಷ ದಿನಗಳ ಆಷಾಡ ಮಾಸ | ದೇವರ ಕೃಪೆಗೆ ಪಾತ್ರರಾಗಲು ಹೆಚ್ಚು ಮಹತ್ವ ಇರುವ ಮಾಸ
July 4, 2024
12:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror