ಕೃಷಿ ಯಂತ್ರಗಳ ಸುಧಾರಕ ಕೋಡಿಬೈಲು ಸತ್ಯನಾರಾಯಣ ಇನ್ನಿಲ್ಲ | ಪುತ್ತೂರಿನಲ್ಲಿ ಸ್ಕೂಟರ್-ಲಾರಿ ನಡುವೆ ಭೀಕರ ಅಪಘಾತ |

May 17, 2021
10:43 AM

ಕೃಷಿ ಯಂತ್ರಗಳ ಸುಧಾರಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಬೆಳ್ಳಾರೆ ಸತ್ಯನಾರಾಯಣ ಕೋಡಿಬೈಲು ಪುತ್ತೂರಿನಲ್ಲಿ  ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement
Advertisement

ಸೋಮವಾರ ಬೆಳಗ್ಗೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್‌ ತೆಂಕಿಲದಲ್ಲಿ ಸ್ಕೂಟರ್‌ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸತ್ಯನಾರಾಯಣ ಕೋಡಿಬೈಲು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸತ್ಯನಾರಾಯಣ ಕೋಡಿಬೈಲು ಅವರು ಸ್ಕೂಟರ್‌ ನಲ್ಲಿ  ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಲಾರಿ ಸ್ಕೂಟರ್‌ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಕೋಡಿಬೈಲು ಎಗ್ರೋ ಏಜೆನ್ಸಿಯ ಮೂಲಕ ದ ಕ ಜಿಲ್ಲೆ ಮಾತ್ರವಲ್ಲ ವಿವಿದೆಡೆ ಹೆಸರುವಾಸಿಯಾಗಿದ್ದ ಸತ್ಯನಾರಾಯಣ ಅವರು ಸ್ವತಃ ಕೃಷಿಕರಾಗಿ ಕೃಷಿ ಉಪಕರಣಗಳ ಆವಿಷ್ಕಾರಗಳಲ್ಲಿ  ಮುಂಚೂಣಿಯಲ್ಲಿದ್ದರು. ಅಡಿಕೆ ಔಷಧಿ ಸಿಂಪಡಣೆಗೆ ಯಂತ್ರ, ಮರ ಏರುವ ಯಂತ್ರ ಸೇರಿದಂತೆ ವಿವಿಧ ಯಂತ್ರಗಳ ಸುಧಾರಣೆಯಲ್ಲಿ ಕೃಷಿಕೃಾಗಿಯೂ ಆಸಕ್ತಿಯಿಂದ ಮುನ್ನಡೆಸುತ್ತಿದ್ದರು.  ವಿವಿಧ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸತ್ಯನಾರಾಯಣ ಕೋಡಿಬೈಲು ಮುಂಚೂಣಿಯಲ್ಲಿದ್ದರು.

55 ವರ್ಷಗಳ ಸತ್ಯನಾರಾಯಣ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?
May 20, 2025
9:44 PM
by: The Rural Mirror ಸುದ್ದಿಜಾಲ
ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ
ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |
May 20, 2025
4:17 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ
May 20, 2025
3:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group