ಕ್ಯಾಂಪ್ಕೋದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕ|

May 1, 2024
10:52 AM
ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ಅವರನ್ನು ನೇಮಕಗೊಂಡಿದ್ದಾರೆ.

ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಮ್.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಕೊನೆಗೊಳ್ಳುವುದರಿಂದ,ಮೇ 1 ರಿಂದ ಅನ್ವಯವಾಗುವಂತೆ ಡಾ.ಬಿ.ವಿ.ಸತ್ಯನಾರಾಯಣ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

Advertisement
Advertisement

ಕಳೆದ 50 ವರ್ಷಗಳಿಂದ ರೈತರ ಹಿತರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ಕೊದ ಆಡಳಿತ  ಮಂಡಳಿಯು ಎ.23 ರಂದು ತನ್ನ ಮಂಡಳಿ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ.ಬಿ.ವಿ.ಸತ್ಯನಾರಾಯಣ ಅವರಿಗೆ ವಹಿಸುವ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಂಡಿದೆ.

ಡಾ.ಸತ್ಯನಾರಾಯಣ ಅವರು ಈ ಮೊದಲು ಕೆ.ಎಮ್.ಎಫ್ ನ ಘಟಕವಾದ ಬೆಂಗಳೂರಿನ ಮದರ್ ಡೈರಿಯ ನಿರ್ದೇಶಕರಾಗಿ, ಕೆ.ಎಮ್.ಎಫ್ ನ ಜಂಟಿ ನಿರ್ದೇಶಕರಾಗಿ,ದ.ಕ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಐಡಿಯಲ್ ಐಸ್ ಕ್ರೀಮ್ ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿ ಉದ್ಯಮ ಕ್ಷೇತ್ರದಲ್ಲಿ ಅಗಾಧ ಜ್ಞಾನವನ್ನು ಹೊಂದಿರುತ್ತಾರೆ.ಅವರನ್ನು ಜನವರಿ 2024 ರಿಂದ ಕ್ಯಾಂಪ್ಕೊದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿಕೊಂಡಿತ್ತು.

ಸಂಸ್ಥೆಯ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ಆಡಳಿತ ಮಂಡಳಿ,ನೂತನವಾಗಿ ಆಯ್ಕೆಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ. ಕ್ಯಾಂಪ್ಕೊಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಡಾ. ಸತ್ಯನಾರಾಯಣ ಅವರನ್ನು ದೂರವಾಣಿ ಸಂಖ್ಯೆ 0824-2425866/2888220/2888218 ಹಾಗೂ ಇಮೇಲ್ ಐಡಿ [email protected] ಮೂಲಕ ಸಂಪರ್ಕಿಸಲು ತನ್ನ ಸದಸ್ಯರನ್ನು ಕೊಡ್ಗಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror