ಯುರೋಪ್ ರಾಷ್ಟ್ರಗಳ ಆರ್ಥಿಕ ಹಿಂಜರಿತ | ಕಚ್ಚಾ ತೈಲ ಉತ್ಪಾದನೆ ಕಡಿತ | ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

June 10, 2023
1:09 PM

ದಿನದಿಂದ ದಿನಕ್ಕೆ ಜಗತ್ತಿನ ಆನೇಕ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ಜರ್ಜರಿತವಾಗುತ್ತಿವೆ.  ಇದೀಗ ಯುರೋಪ್ ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ತುತ್ತಾಗಬಹುದು ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆ ಸೌದಿ ಅರೇಬಿಯಾ  ಕಚ್ಚಾ ತೈಲ  ಉತ್ಪಾದನೆಯನ್ನು ಕಡಿತಗೊಳಿಸಲು ಮುಂದಾಗಿದೆ.

Advertisement
Advertisement
ಜುಲೈನಿಂದ ಪ್ರತಿದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಈ ಹಿಂದೆ ಒಪೆಕ್ (OPEC) ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತ ಮಾಡಿ ಬೆಲೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದವು. ಆದರೆ ಬೆಲೆ ಹೆಚ್ಚಳ ಸಾಧ್ಯವಾಗದಿರುವ ಕಾರಣ ಉತ್ಪಾದನೆಯನ್ನು ಮತ್ತಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ.

 

Advertisement

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಒಪೆಕ್ ವಿಯೆನ್ನಾದಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ 7 ಗಂಟೆಗಳ ಕಾಲ ಸಭೆ ನಡೆಸಿ ತೈಲ ಬೆಲೆ ಹೆಚ್ಚಿಸುವ ಸಲುವಾಗಿ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದರ ಪ್ರಕಾರ ದಿನಕ್ಕೆ 14 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಯೋಜಿಸಿದೆ.

ತೈಲ ಉತ್ಪಾದನೆ ಕಡಿತವನ್ನು ಜುಲೈ ನಂತರ ಪ್ರಾರಂಭಿಸಬಹುದು ಎಂದು ಸೌದಿ ತಿಳಿಸಿದೆ. ಆದರೆ ಇದು ರಷ್ಯಾ, ನೈಜೀರಿಯಾ ಹಾಗೂ ಅಂಗೋಲಾದ ಪ್ರಸ್ತುತ ಉತ್ಪಾದನಾ ಮಟ್ಟಕ್ಕೆ ಅನುಗುಣವಾಗಿ ತರಲು ಸಾಧ್ಯವಿಲ್ಲ. ಒಪೆಕ್ ಪ್ರಪಂಚದಲ್ಲಿ 40% ರಷ್ಟು ಕಚ್ಚಾತೈಲ ಉತ್ಪಾದನೆಯ ಪಾಲನ್ನು ಹೊಂದಿದೆ. ಆದರೆ ಅದು ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಜಾಗತಿಕವಾಗಿ ತೈಲ ಬೆಲೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ.ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಮತ್ತಷ್ಟು ದುಬಾರಿಯಾಗುವ ಎಲ್ಲಾ ಲಕ್ಷಣಗಳು ಕಂಡಬರುತ್ತಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |
September 19, 2024
10:42 PM
by: ದ ರೂರಲ್ ಮಿರರ್.ಕಾಂ
ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |
September 19, 2024
9:17 PM
by: ದ ರೂರಲ್ ಮಿರರ್.ಕಾಂ
ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ
September 19, 2024
9:00 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |
September 19, 2024
8:53 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror