ಸುಳ್ಯದಲ್ಲಿ ಸೌಜನ್ಯ ಪರವಾಗಿ ನ್ಯಾಯ ಕೇಳಿ ಅಳವಡಿಕೆ ಮಾಡಿದ್ದ ಬ್ಯಾನರ್ ಮಂಗಳವಾರ ಬೆಳಗ್ಗೆ ನಗರಪಂಚಾಯತ್ ಸಿಬಂದಿಗಳು ತೆರವು ಮಾಡಿದ್ದಾರೆ.ಇದೀಗ ಬ್ಯಾನರ್ ತೆರವು ವಿಷಯ ಚರ್ಚೆಗೆ ಕಾರಣವಾಗಿದೆ.
ಸುಳ್ಯ ನ.ಪಂ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ನಗರದ ಅಲ್ಲಲ್ಲಿ ಅಳವಡಿಸಲಾಗಿದ್ದ ಸೌಜನ್ಯಳ ಪರ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ ನ.ಪಂ ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣ ನೀಡಲಾಗಿದೆ. ಬ್ಯಾನರ್ ತೆರವು ವಿಚಾರವನ್ನು ನಗರ ಪಂಚಾಯತ್ ಖಚಿತಪಡಿಸಿದೆ. ಅನುಮತಿ ಪಡೆದ ಬ್ಯಾನರ್ ಕೂಡಾ ತೆರವು ಮಾಡಲಾಗಿದೆ ಎಂದು ಬ್ಯಾನರ್ ಅಳವಡಿಕೆ ಮಾಡಿದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬ್ಯಾನರ್ ತೆರವು ಪ್ರಕರಣ ಖಚಿತಪಡಿಸಿದ ನಗರ ಪಂಚಾಯತ್ ಅಧಿಕಾರಿಗಳು, ಬುಧವಾರ ಸುಳ್ಯದಲ್ಲಿ ಕಾರ್ಯಕ್ರಮ ನಡೆಯಲಿರುವುದರಿಂದ ಇಲಾಖೆಗಳ ಸೂಚನೆ ಮೇರೆಗೆ ತೆರವು ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel