ಸೌಜನ್ಯ ಪ್ರಕರಣ | ಬೆಳ್ತಂಗಡಿಯಲ್ಲಿ ಬೃಹತ್‌ ಸಭೆ | ಸತ್ಯ, ಧರ್ಮ, ನ್ಯಾಯಯುತ ಹೋರಾಟದ ಜೊತೆ ಯಾವತ್ತೂ ಆದಿಚುಂಚನಗಿರಿ ಮಠ ಇದೆ | ಧರ್ಮಪಾಲನಾಥ ಶ್ರೀ |

September 3, 2023
12:04 PM
ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ  ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಸಭೆ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಭಾನುವಾರ ನಡೆಯಿತು.

ಬೆಳ್ತಂಗಡಿಯ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ  ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಸಭೆ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಭಾನುವಾರ ನಡೆಯಿತು.

Advertisement

ಪ್ರತಿಭಟನಾ ಸಭೆಯಲ್ಲಿ ಆಶಿರ್ವಚನ ನೀಡಿದ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ  ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಸೌಜನ್ಯ ಪ್ರಕರಣದಲ್ಲಿ ಎಲ್ಲಾ ತನಿಖೆಗಳು ವಿಫಲವಾದ್ದು ಈ  ದೇಶದ ದುರಂತ ಎಂದರು. ಈಚೆಗೆ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಅವರ ಕುಟುಂಬದವರು ಮಠಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದರು. ಸತ್ಯ, ನೀತಿ, ನ್ಯಾಯ, ಧರ್ಮಕ್ಕೆ ಎಲ್ಲರೂ ಒಂದಾಗಿರಬೇಕಾಗಿದೆ. ಸಮಾಜದ ಯಾವುದೇ ಜನರಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ನಿಲುವುವಾಗಿದೆ. ಸತ್ಯ, ನ್ಯಾಯಯುತ ಹೋರಾಟಕ್ಕೆ ಯಾವತ್ತೂ ಆದಿಚುಂಚನಗಿರಿ ಮಠ ಜೊತೆಗಿರುತ್ತದೆ.

ಈ ಪ್ರಕರಣದಲ್ಲಿ ಸಂತೋಷ ರಾವ್‌ ಅಪರಾಧಿ ಅಲ್ಲ ಎಂದ ಮೇಲೆ ಇನ್ನೊಮ್ಮೆ ಅಪರಾಧಿ ಇರಬೇಕಲ್ಲ, ಅವನು ಯಾರು ? ಅದು ಬೇಕಾಗಿದೆ. ಸಂತೋಷ ರಾವ್‌ ಅವರ ಬದುಕು ಮತ್ತೆ ಕಟ್ಟಲು ಸಾಧ್ಯವಿಲ್ಲ, ಅವರಿಗೂ ನ್ಯಾಯ ಬೇಕು, ಕುಸುಮಾವತಿ ಹಾಗೂ ಅವರ ಕುಟುಂಬಕ್ಕೂ  ರಕ್ಷಣೆ ಬೇಕಿದೆ. ಇದಕ್ಕಾಗಿ ಈ ಪ್ರಕರಣದಲ್ಲಿ ನ್ಯಾಯಸಿಗಲು, ಅಂದು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ, ವೈದ್ಯರನ್ನು ಮೊದಲು ತನಿಖೆ ಮಾಡಿಸಬೇಕು, ಮಂಪರು ಪರೀಕ್ಷೆ ಮಾಡದೇ ಇದ್ದರೆ ಸತ್ಯ ಹೊರಬಾರದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಸತ್ಯ, ನ್ಯಾಯ ಧರ್ಮ ನಿಷ್ಟೆಯಲ್ಲಿ ಯಾರು ಹೋಗುತ್ತಾರೋ ಅವರಿಗೆ ಯಾವತ್ತೂ ಜಯ, ಅವರ ಹಿಂದೆ ಯಾವತ್ತೂ ಮಠ ಇರುತ್ತದೆ. ಮಠ ಒಂದು ಸಮುದಾಯವಾಗಿದ್ದರೂ ಎಲ್ಲರನ್ನೂ ಒಪ್ಪಿಕೊಂಡ ಮಠ, ಯಾರಿಗೇ ಅನ್ಯಾಯ ಆದರೂ ಅವರ ಹೊತೆಗೆ ಮಠ ಇರುತ್ತದೆ ಎಂದರು.

11 ವರ್ಷಗಳಿಂದಲೂ ಸತ್ಯ ಹುಡುಕುತ್ತೇವೆ ಎಂದು ನಿಂತಿರುವ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಜೊತೆ ಸಮಾಜ ಹಾಗೂ ಮಠ ಇದೆ. ಸೌಜನ್ಯ ಮಹಾನ್‌ ಶಕ್ತಿ, ಅದು ಸ್ತ್ರೀಶಕ್ತಿ, ಅದು ಕಾಳಿ ಸ್ವರೂಪ ಪಡೆದು ಇಡೀ ರಾಜಾದ್ಯಂತ ಆವಿರ್ಭಾವ ಮಾಡುತ್ತದೆ, ಅದಕ್ಕೆ ಮೊದಲು ಸರ್ಕಾರ ಗಮನಿಸಿ ನ್ಯಾಯ ಸಿಗುವಂತೆ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸಭೆ ಆಯೋಜನೆಗೊಂಡಿತ್ತು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group