ಕುಮಾರಿ ಸೌಜನ್ಯಾಳ ಅತ್ಯಾಚಾರ ಪ್ರಕರಣ | ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು | ಧರ್ಮಸ್ಥಳದ ತೇಜೋವಧೆ ಖಂಡನೀಯ | ಹಿಂದೂ ಜನಜಾಗೃತಿ ಸಮಿತಿ

September 4, 2023
10:50 AM
ಸೌಜನ್ಯಾ ಪ್ರಕರಣವು ಮರು ತನಿಖೆಯಾಗಲೇಬೇಕು ಮತ್ತು ನಿಜವಾದ ಅಪರಾಧಿಗಳ ಬಂಧನವಾಗಿ, ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು, ಇದರಲ್ಲಿ ಮರುಪ್ರಶ್ನೆಯೇ ಇಲ್ಲ. ಆದರೆ ಪ್ರಕರಣದ ತನಿಖೆ ಪ್ರಾರಂಭವಾಗುವ ಮೊದಲೇ ಧರ್ಮಸ್ಥಳದ ತೇಜೋವಧೆಯನ್ನು ಮಾಡುವುದು ಸರಿಯಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.

ಧರ್ಮಸ್ಥಳದ  ಕು. ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ಇವರನ್ನು ನಿರ್ದೋಷಿ ಎಂದು ಘೋಷಿಸಿದೆ. ಈ ಪ್ರಕರಣಕ್ಕೆ 11 ವರ್ಷ ಕಳೆದರೂ ಸಹ ನಿಜವಾದ ಆರೋಪಿಗಳ ಬಂಧನ ಆಗದಿರುವುದು ದುರದೃಷ್ಟಕರ. ಇದು ಕಾನೂನು ಸುವ್ಯವಸ್ಥೆಯು ವಿಫಲವಾಗಿರುವುದರ ಲಕ್ಷಣವಾಗಿದೆ. ಈಗ ರಾಜ್ಯದಲ್ಲಿ ಮೃತ ಕು. ಸೌಜನ್ಯಾಳ ಪ್ರಕರಣವು ಮರುತನಿಖೆಯಾಗಬೇಕೆಂಬ ಆಗ್ರಹವು ಸಮಾಜದಲ್ಲಿ ಪುನಃ ಕೇಳಿ ಬರುತ್ತಿದೆ. ಆದರೆ ಈ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಅನೇಕ ಎಡಪಂಥೀಯರು ಮತ್ತು ಅನ್ಯ ಸಮುದಾಯದ ಸಂಘಟನೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.

Advertisement
Advertisement
Advertisement

ಕನ್ನಡ ನಟ ದುನಿಯಾ ವಿಜಯ ಇವರು ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಾಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ‘ಸೌಜನ್ಯಾ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಹೇಳಿದರು.  ನಟ ಪ್ರಕಾಶ ರಾಜ್ ಇವರು ಸೌಜನ್ಯ ಪ್ರಕರಣದಲ್ಲಿ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಮಂಪರು ಪರೀಕ್ಷೆ ಮಾಡಬೇಕೆಂದು ಹೇಳಿದರು. ನಟ ವಿನೋದ್ ಟೈಗರ್ ಪ್ರಭಾಕರ ಇವರು ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ ಹೇಳಿದರು. ನಟ ಚೇತನ ಅಹಿಂಸಾ ಇವರು ಈ ಪ್ರಕರಣದಲ್ಲಿ ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ ? ಅವರು ಅಪರಾಧದಲ್ಲಿ ತಮ್ಮದೆ ಆದ ಪಾಲ್ಗೊಳ್ಳುವಿಕೆಯನ್ನು ಮರೆಮಾಡುತ್ತಾರೆಯೇ ? ಎಂದರು. ಒಡನಾಡಿ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ಸ್ಟ್ಯಾನ್ಲಿ ಇವರು ಧರ್ಮಸ್ಥಳವನ್ನು ಹಂದಿಯ ಹಾಗೆ ಹೊಡೆಯಬೇಕು ಎಂಬ ಹೇಳಿಕೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹರಿದಾಡುತ್ತಿದೆ.
ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಯಾರು ಸಹ ಚರ್ಚ್ ಗುರಿ ಮಾಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಮಾತ್ರ ಹಿಂದೂಗಳಲ್ಲದವರು ಸಹ ಹಿಂದೂಗಳ ಪವಿತ್ರ ಕ್ಷೇತ್ರವನ್ನು ಗುರಿ ಮಾಡುತ್ತಿದ್ದಾರೆ.

Advertisement

ಕೇವಲ ಕರ್ನಾಟಕ ರಾಜ್ಯದಲ್ಲಿಯೇ ಇಸವಿ 2019 ರಿಂದ 2021 ರ 3 ವರ್ಷಗಳ ಕಾಲಾವಧಿಯಲ್ಲಿ 40,000 ಬಾಲಕಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ.  ಪ್ರಕರಣಗಳ ಮೇಲೆ ತನಿಖೆಯನ್ನು ಏಕೆ ಮಾಡಲಿಲ್ಲ, ಧರ್ಮಸ್ಥಳದ ಬಗ್ಗೆ ಮಾತನಾಡುವ ಹಿಂದುಯೇತರರು ಈ ಎಲ್ಲ ಪ್ರಕರಣಗಳ ಬಗ್ಗೆ ಏಕೆ ಮೌನ ? ಧರ್ಮಸ್ಥಳವನ್ನೇ ಗುರಿ ಮಾಡುವುದು ಏಕೆ ?

ಒಟ್ಟಾರೆ ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ಕು. ಸೌಜನ್ಯಾ ಪ್ರಕರಣವನ್ನು ನೆಪಮಾಡಿಕೊಂಡು ಹಿಂದೂ ವಿರೋಧಿಗಳು ಧರ್ಮಸ್ಥಳವನ್ನು ಗುರಿ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಖಂಡಿಸುತ್ತದೆ. ಮೃತ ಕು. ಸೌಜನ್ಯಾ ಪ್ರಕರಣವು ಮರುತನಿಖೆಯಾಗಲೇಬೇಕು ಮತ್ತು ನಿಜವಾದ ಅಪರಾಧಿಗಳ ಬಂಧನವಾಗಿ, ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು, ಇದರಲ್ಲಿ ಮರುಪ್ರಶ್ನೆಯೇ ಇಲ್ಲ. ಆದರೆ ಪ್ರಕರಣದ ತನಿಖೆ ಪ್ರಾರಂಭವಾಗುವ ಮೊದಲೇ ಧರ್ಮಸ್ಥಳದ ತೇಜೋವಧೆಯನ್ನು ಮಾಡುವುದು ಸರಿಯಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror