Advertisement
ಸುದ್ದಿಗಳು

ಗುತ್ತಿಗಾರಿನಲ್ಲಿ ಸೌಜನ್ಯ ಪರವಾಗಿ ಬೃಹತ್‌ ಪ್ರತಿಭಟನಾ ಸಭೆ | ಅಧರ್ಮ ನಾಶವಾಗಲಿ, ಧರ್ಮ ಸ್ಥಾಪನೆಯಾಗಲಿ, ವಿಶ್ವಗುರು ಭಾರತವಾಗಲಿ – ಮಹೇಶ್‌ ಶೆಟ್ಟಿ ತಿಮರೋಡಿ |

Share

ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ಇದರ ವತಿಯಿಂದ  ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ನಾಡಿನಲ್ಲಿ ಅಧರ್ಮ ನಾಶವಾಗಲಿ, ಧರ್ಮ ಸ್ಥಾಪನೆಯಾಗಲಿ, ಭಾರತ ವಿಶ್ವಗುರುವಾಗಲಿ. ಇದಕ್ಕಾಗಿಯೇ ಹೋರಾಟ ನಡೆಯುತ್ತಿದೆ. ಮುಂದೆ ಭಾರತದ ಯಾವುದೇ ಹೆಣ್ಣು ಮಗುವಿಗೂ ತೊಂದರೆ ಆಗದೇ ಇರಲಿ. ಇದಕ್ಕಾಗಿಯೇ ಈಗ ಶಾಂತಿಯುತ ಹೋರಾಟ, ಯಾರನ್ನೂ ತೇಜೋವಧೆ ಮಾಡಲು ಬಂದಿಲ್ಲ.ಸತ್ಯ , ನ್ಯಾಯ ಕೇಳ್ತಿದ್ದೆವೆ. ನಮ್ಮನ್ನು ಕೆಣಕದಿರಿ.ದೇಶದಲ್ಲಿ  ಕೋಟ್ಯಾಂತರ ಜನ ಇಂದು ನ್ಯಾಯಕ್ಕಾಗಿ ಎದ್ದುನಿಂತಿದ್ದಾರೆ. ಎಲ್ಲರೂ ತಯಾರಾಗಿರಿ, ಸೂಚನೆ ಬಂದಾಗ ಬೆಳ್ತಂಗಡಿಗೆ ಬರಲು ತಯಾರಿರಿ, ಹೆಚ್ಚು ದಿನ ಬೇಡ, ಸತ್ಯದ ಅನಾವರಣ ಆಗಲಿದೆ ಎಂದರು.

Advertisement
Advertisement
Advertisement
Advertisement
Advertisement

ಸಭೆಯಲ್ಲಿ ಮಾತನಾಡಿದ ಮಹೇಶ್‌ ಶೆಟ್ಟಿ ತಿಮರೋಡಿ, ರಾಜಕೀಯ ವ್ಯಕ್ತಿಗಳು ಷಂಡರು. ಇವರ ಮನೆಯವರು ಕಾಮಾಂಧರ ಕೈಗೆ ಸಿಲುಕಿದ್ದರೆ ಏನು ಮಾಡುತಿದ್ದರು  ಎಂದು  ಪ್ರಶ್ನಿಸಿದರು. ಸಾವಿರಾರು ಹೆಣ್ಣು ಮಕ್ಕಳ ಶಾಪ ಸೌಜನ್ಯ ರೂಪದಲ್ಲಿ ತಟ್ಟುತ್ತಿದೆ. ಸಾಮಾಜಿಕ ನ್ಯಾಯ ಖಂಡಿತಾ ಕೊಡಿಸ್ತೇವೆ. ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ  ನಡೆಯುತ್ತಿದೆ, ನಮ್ಮ ಹಕ್ಕನ್ನು ತಡೆಹಿಡಿಯಬೇಡಿ. ರಾಜಕಾರಣಿಗಳೇ ಸತ್ಯದ ಅವಲೋಕನ‌ ಮಾಡಿ..ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ತೊಂದರೆಯಾದಾಗ ರಕ್ಷಕರು ನಾವೇ ಎಂದರು. ಈಗಿನ ಸ್ಥಿತಿ ನೋಡಿದರೆ, ಕ್ರಾಂತಿಕಾರಿ ಹೋರಾಟವೇ ಬೇಕೆ ಎಂದು ಅನಿಸುತ್ತದೆ ಎಂದು ವಿಷಾದಿಸಿದರು.

Advertisement

ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್ ಮಾತನಾಡಿ, ಸೌಜನ್ಯಳನ್ನು ವಿವಸ್ತ್ರಗೊಳಿಸಿ ಕೊಂದು ನಗ್ನವಾಗಿ ಎಸೆದವರನ್ನು ಆಕೆಯ ಆತ್ಮವೂ ಕಳೆದ 12 ವರ್ಷಗಳಿಂದ ವಿವಸ್ತ್ರಗೊಳಿಸುತ್ತಿದೆ. ಮುಂಬರುವ ವಾರದೊಳಗೆ ಅತ್ಯಾಚಾರಿಗಳನ್ನು ವಿಡಿಯೋ ಸಮೇತ ಹೊರಹಾಕ್ತೇವೆ.ಬೆಟ್ಟದಷ್ಟು ಸಾಕ್ಷಿ ಕಲೆಹಾಕಿದ್ದೇವೆ. ಸಾಕ್ಷಿಗಳನ್ನು ಕ್ಯಾಮೆರಾ ಮುಂದೆ ಹಾಜರುಪಡಿಸ್ತೇವೆ. ಪಿಕ್ಚರ್ ಅಭಿ ಬಾಕಿ ಹೈ..ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಹಿಂದು‌ನಾಯಕ ಮಹೇಶ್‌ ಶೆಟ್ಟಿ ತಿಮರೋಡಿ ಅವರು. ಹಿಂದುತ್ವ ಹೆಸರಿನಲ್ಲಿ ಜನಪ್ರತಿನಿಧಿಗಳಾದವರು  ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ  ಗಿರೀಶ್‌ ಅವರು,  ಹಿಂದುತ್ವ ಹೆಸರಿನಲ್ಲಿ ಇದ್ದವರನ್ನೆಲ್ಲಾ ಈಗ  ಸೌಜನ್ಯಳ ಆತ್ಮವೂ ಕಳೆದ 12 ವರ್ಷಗಳಿಂದ ವಿವಸ್ತ್ರಗೊಳಿಸುತಿದ್ದಾಳೆ  ಎಂದು ಗಿರೀಶ್‌ ಮಟ್ಟೆಣ್ಣನವರ್‌ ಹೇಳಿದರು.

Advertisement

ಸಭೆಯಲ್ಲಿ ಮಾತನಾಡಿದ ಹೋರಾಟಗಾರ್ತಿ ಪ್ರಸನ್ನ ರವಿ, ಹೋರಾಟಗಾರರ ಕಿಚ್ಚು ಹೆಚ್ಚುತ್ತಿದೆ.ಕದ್ರಿ ಮೂಲ ಮಂಜುನಾಥ, ಹಾಗಾಗಿ ಅಲ್ಲಿ ಆರಂಭಗೊಂಡ ಹೊರಾಟಕ್ಕೆ ದೇವರ ಕೃಪೆ ಇದೆ. ಧರ್ಮ ಅದರ್ಮದ ಹೋರಾಟದಲ್ಲಿ ಧರ್ಮಕ್ಕೇ ಗೆಲುವು, ಧನ ಬಲಕ್ಕೆ ಯಶಸ್ಸಿಲ್ಲ ಎಂದರು.

Advertisement

ನ್ಯಾಯವಾದಿ ಮೋಹಿತ್ ಮಾತನಾಡಿ, ಪ್ರಕರಣದ ತನಿಖೆಯ ವೈಫಲ್ಯಗಳನ್ನು ವಿವರಿಸಿದರು. ವೈಫಲ್ಯಗಳ ಸಮರ್ಥನೆ ಮಾಡಲು ಸ್ಕಾಟ್ ಲಾಂಡ್ ಪೊಲಿಸರನ್ನು ಮೀರಿಸುವಂತೆ ತನಿಖಾಧಿಕಾರಿಗಳ ಪಾತ್ರವಿದೆ ಎಂದು ವ್ಯಂಗ್ಯವಾಡಿದರು.

Advertisement

ತುಳು ದೈವರಾಧಾನೆಯ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ ಮಾತನಾಡಿ, ಗುತ್ತಿಗಾರು ಅಂದರೆ ಗಟ್ಟಿಗರು.ಹಾಗಾಗಿ ಗುತ್ತಿಗಾರು ಬಂದಿದೆ.ಇಲ್ಲಿ ನಾಯಕತ್ವ ಇರುವವರು, ಪರಿವರ್ತನೆಯ ಊರು, ಧೈರ್ಯ ಸಾಹಸಿಗರ ಊರಿನವರು.ಇಂತಹ ಜಾಗದಲ್ಲಿ ಈ ಹೋರಾಟ ಶ್ಲಾಘನೀಯ.ಸೌಜನ್ಯ ಹೋರಾಟ ಇತಿಹಾಸದಲ್ಲಿ ನೆನಪುಳಿಯುವಂತದ್ದು, ದೇಶದಲ್ಲಿ ಮೊದಲ ಬಾರಿ ಇಂತಹ ಹೋರಾಟ ನಡೆದಿದೆ. ರಾಷ್ಟ್ರೀಯ ಪಕ್ಷದ ನಾಯಕರು ಅವರವರ ಸ್ಥಾನಮಾನ, ಅವರ ಸಂಸಾರ ಕಾಪಾಡುವಷ್ಟಕ್ಕೆ ಸೀಮಿತವಾಗಿದ್ದಾರೆ. ದುರುಳರ ರಕ್ಷಣೆ ಗೆ , ದ್ವಾರಪಾಲಕರಾಗಲು ರಾಜಕೀಯ ಸೀಮಿತವಾದುದು ಬಹಳ ಬೇಸರ ಸಂಗತಿ ಎಂದರು. ರಾಜಕಾರಣ ವಿಕೃತ ಸ್ವಾರ್ಥದ್ದು ಎಂದರು. ಚಾಮುಂಡಿಯ ಚಾಕ್ರಿ ಮಾಡಿದ ಅರ್ಜುನ ಆನೆ ಸಾವಾಗಲು ಒಂದೇ ಒಂದು ರಾಜಕಾರಣಿ ಸ್ಪಂದಿಸಿಲ್ಲ, ಮನ ಮಿಡಿದಿಲ್ಲ, ಏಕೆಂದರೆ ಅದಕ್ಕೆ ಓಟಿಲ್ಲ, ಕೊಳೆತ ಹೆಣದ ಮುಂದೆ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ದುರಂತದ ದಿನಗಳು ಬರಲಿವೆ ಎಂದರು.

Advertisement

ಸಭೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ಯುವ ನಾಯಕ ಕಿರಣ್‌ ಬುಡ್ಲೆಗುತ್ತು ಸ್ವಾಗತಿಸಿದರು. ಚಂದ್ರಶೇಖರ ಬಾಳುಗೋಡು ಪ್ರಸ್ತಾವನೆಗೈದರು.ಪ್ರವೀಣ ಮುಂಡೋಡಿ ವಂದಿಸಿದರು. ಸುಬ್ರಹ್ಮಣ್ಯ ಐವರ್ನಾಡು ನಿರೂಪಿಸಿದರು. ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

Advertisement

Protest meeting was held on Saturday at Guthigar in Sulya taluk by Saujanya nyaya samiti Guthigar.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ

ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…

1 day ago

ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ  ವರದಿಯ ಅನ್ವಯ, ಉತ್ತರ ಕನ್ನಡ…

2 days ago

ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…

2 days ago

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

3 days ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

3 days ago