ವಿವೇಕಾನಂದ ಕಾಲೇಜಿನಲ್ಲಿ ಸಾವರ್ಕರ್‌ ಜಯಂತಿ ಆಚರಣೆ | ಸಾವರ್ಕರ್ ಹಿಂದೂರಾಷ್ಟ್ರದ ಕನಸು ಹೊತ್ತವರು | ಮಹೇಶ್‌ ವಿಕ್ರಂ ಹೆಗ್ಡೆ ಅಭಿಮತ |

May 28, 2022
9:57 PM

ಸಾವರ್ಕರ್ ಅವರಂತಹ ದೇಶಭಕ್ತನನ್ನು ಪ್ರಸ್ತುತ ದಿನಗಳಲ್ಲಿ ಹೇಡಿ ಎಂದು ಬಿಂಬಿಸುತ್ತಿರುವುದು ಅಪರಾಧ. ಸಾವರ್ಕರ್  ಜೀವಮಾನದಲ್ಲಿ ಅನುಭವಿಸಿದ ನೋವಿನ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವ್ಯಕ್ತಿಗಳ ನಡೆ ನಿಜಕ್ಕೂ ವಿಷಾದನೀಯ.ಸಾವರ್ಕರ್ ಹಿಂದೂರಾಷ್ಟ್ರದ ಕನಸು ಹೊತ್ತವರು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪೋಸ್ಟ್ ಕಾರ್ಡ್ ಮತ್ತು ಟಿವಿ ವಿಕ್ರಮವಾಹಿನಿಯ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ‌ ಹೇಳಿದರು.

Advertisement

ಅವರು ವಿವೇಕಾನಂದ ಮಹಾವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಐಕ್ಯುಎಸಿ ಘಟಕ,ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಕಾಲೇಜು ಎಬಿವಿಪಿ ಘಟಕಗಳ ಸಂಯುಕ್ತಆಶ್ರಯದಲ್ಲಿ ಸಾವರ್ಕರ್ ಜಯಂತಿಯ ಅಂಗವಾಗಿಏರ್ಪಡಿಸಲಾಗಿದ್ದ‘ಕ್ಷಾತ್ರಚೇತನಸಾವರ್ಕರ್ ಎಂಬ  ವಿಚಾರಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಶ್ರೀಟಾಕ್ಸ್ ವಾಹಿನಿಯ ಸಂಪಾದಕಿ, ಪತ್ರಕರ್ತೆ ಶ್ರೀಲಕ್ಷ್ಮೀ ರಾಜ್‍ಕುಮಾರ್  ಮಾತನಾಡಿ ವೀರ ಸಾವರ್ಕರ್‌ ಅವರಂತಹ ಮಹಾನ್‍ಚೇತನರ ತ್ಯಾಗಕ್ಕೆ ಭಾರತೀಯರು ಸದಾ ಋಣಿಯಾಗಿರಬೇಕು. ಭಾರತೀಯರಿಗೆ ಸ್ವಾತಂತ್ರ ಹೋರಾಟದ ಮೂಲಕ ಪುನರ್ಜನ್ಮ ನೀಡಿದ ಸಾವರ್ಕರ್ ಅವರ ಕೊಡುಗೆ ಅವಿಸ್ಮರಣೀಯ.ಇಂತಹ ಮಹಾನ್‍ ಚೇತನರನ್ನು ದೇಶ ವಿರೋಧಿಯಾಗಿ ಬಿಂಬಿಸುತ್ತಿರುವುದು ವಿಷಾದನೀಯ ಎಂದು  ಹೇಳಿದರು.

ವಿದ್ಯಾರ್ಥಿ ವಿಚಾರ ಮಂಡನೆಯಲ್ಲಿ ಮಂಗಳೂರು ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿ ಪೃಥ್ವೀಶ್ ಧರ್ಮಸ್ಥಳ ‘ಸಮಾಜ ಸುಧಾರಕ ಸಾವರ್ಕರ್’ ಎಂಬ ವಿಷಯದ ಕುರಿತು ಮಾತನಾಡಿದರು.ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೌಶಿಕ್ ಜಿ ಎನ್‘ಸಾವರ್ಕರ್ ಸಾಹಿತ್ಯ ಮತ್ತು ಸ್ವಾತಂತ್ರ್ಯ ಸಂಗ್ರಾಮ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಎಬಿವಿಪಿ ಮಂಗಳೂರು ವಿಭಾಗದ ಸಂಚಾಲಕ ಹರ್ಷಿತ್ ಕೊೈಲ ಮಾತನಾಡಿದರು.ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ ಎಸ್‍ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣುಗಣಪತಿ ಭಟ್ ಮಾತನಾಡಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಟಿವಿ ವಿಕ್ರಮ ವಾಹಿನಿಯ ನಿರೂಪಕಿ ಮುಮ್ತಾಜ್ ನೆಲ್ಲಿಯಡ್ಕ ಮತ್ತುಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಶಿಶ್ ಎನ್ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಶ್ವಿನಿ ವೈಯಕ್ತಿಕ ಗೀತೆ ಹಾಡಿದರು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಮಂಜುನಾಥ್‍ ಜೋಡುಕಲ್ಲು ಸ್ವಾಗತಿಸಿ, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರಕರುಣ್ ವಂದಿಸಿದರು. ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ
April 12, 2025
1:50 PM
by: ಸಾಯಿಶೇಖರ್ ಕರಿಕಳ
ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ
April 12, 2025
12:31 PM
by: ದ ರೂರಲ್ ಮಿರರ್.ಕಾಂ
ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ
April 12, 2025
11:50 AM
by: The Rural Mirror ಸುದ್ದಿಜಾಲ
ಮುಳಿಯ – ಹೊಸ ಲೋಗೋ- ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್
April 12, 2025
11:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group