ನೀರಿಗಾಗಿ ಹಾಹಾಕಾರ | ಕಾಡು ಪ್ರಾಣಿ ಪಕ್ಷಿಗಳಿಗೂ ಒಂಚೂರು ನೀರುಣಿಸಿ….

April 15, 2024
2:50 PM
ಬೇಸಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಇರಿಸುವ ಮೂಲಕ ಪಕ್ಷಿಗಳ ರಕ್ಷಣೆ ಮಾಡಬೇಕು.

ನೀರು ನಮ್ಮೆಲ್ಲರ ಜೀವನ ಪ್ರತಿಯೊಂದು ಹನಿ ಹನಿ ನೀರು ತುಂಬಾ ಮುಖ್ಯ. ಗಿಡ ಮರ ಪ್ರಾಣಿ ಪಕ್ಷಿ ಹಾಗೂ ಮಾನವರಿಗೆ ನೀರು ಬೇಕೇ ಬೇಕು. ದಿನೇ ದಿನೇ  ಹೆಚ್ಚುತ್ತಿರುವ ತಾಪಮಾನ ಹಕ್ಕಿಗಳಿಗೆ ಬಿಸಿಲಿನ ಶಾಖದ ಹೊಡೆತದಿಂದ ರಕ್ಷಿಸಲು ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕ.

ಹಿಂದೆ ಕೆರೆ ಕಟ್ಟೆಗಳಲ್ಲಿ ಸಾಕಷ್ಟು ನೀರಿದ್ದು ಇದೀಗ ಅವೆಲ್ಲ ಮಾಯವಾಗಿದೆ. ಬೋರ್ವೆಲ್ ಗಳ ಹನಿ ಹನಿ ಸಿಂಚನ ಬಿಸಿಲಿನ ತೀವ್ರತೆಗೆ ಜನಸಾಮಾನ್ಯರಿಗೆ ಮಾತ್ರವಲ್ಲದೆ ಹಕ್ಕಿಗಳಿಗೆ ಕೂಡ ನೀರಿನ ಅಭಾವ ತೊಂದರೆಗಳಾಗುವ ಸಾಧ್ಯತೆ ಇದೆ. ದಿನೇ ದಿನೇ ಎಲ್ಲೆಡೆ ನೀರಿಗಾಗಿ ಹಾಹಾಕಾರ ಮನುಷ್ಯ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸೊರಗುತ್ತಿವೆ. ಎಲ್ಲೆಡೆ ಬತ್ತಿದ ನದಿ ತೊರೆಗಳು ಕೆರೆಕಟ್ಟೆಗಳು. ಕಾದ ಇಳೆಗೆ ತಂಪೆರೆಯಲು ವರುಣನೇ ಬರಬೇಕು ಆದರೂ ಟಬ್ ಪಾತ್ರ ಮತ್ತು ಮಡಕೆಗಳಲ್ಲಿ ನೀರು ತುಂಬಿಸಿ ಇಡುವ ಮೂಲಕ ಪಕ್ಷಿಗಳು ಪ್ರಾಣಿಗಳಿಗೆ ನೀರುಣಿಸಿ ನಮ್ಮಿಂದ ಸಾಧ್ಯವಾದ ಮಟ್ಟಿಗೆ . ನಮ್ಮಲ್ಲಿ ವೇಸ್ಟ್ ಎಂಬುದೇ ಇಲ್ಲ ಗೆರಟೆ ಬಾಟಲ್ ಇವುಗಳನ್ನು ಸದ್ಬಳಕೆ ಮಾಡಿ ತಮ್ಮಿಂದಾಗುವ ಸಹಾಯ ಮಾಡಿ ನೀರುಣಿಸಿ ಕೆಲವು ಸಮಯ ಅಸ್ತು ಎನ್ನುವಾಗ ನೀವು ಭಾಗಿಯಾಗುತ್ತೀರಾ ಧನ್ಯತಾ ಭಾವ ನಿಮ್ಮಲ್ಲಿ ಮೂಡಲಿ.  ಹೀಗೆ ಪ್ರಾಣಿ ಪಕ್ಷಿಗಳಿಗೆ ದಣಿವಾರಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ತಮ್ಮ ಬಿಡುವಿನ ವೇಳೆಯಲ್ಲಿ ನಾವು ಮಾಡುವ ಕೆಲಸವನ್ನು ನೋಡಿ ನಮ್ಮ ಮಕ್ಕಳು ಮಾಡುವಂತೆ ಪ್ರೇರೇಪಿಸುತ್ತದೆ.

ಬರಹ :
 ಕುಮಾರ ಪೆರ್ನಾಜೆ ಪುತ್ತೂರು
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಅತ್ಯಾಧುನಿಕ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ | ಉಪಗ್ರಹ, ಡ್ರೋನ್‌, AI ತಂತ್ರಜ್ಞಾನ ಬಳಕೆಗೆ ಸರ್ಕಾರದ ಚಾಲನೆ
August 6, 2026
9:10 PM
by: ದ ರೂರಲ್ ಮಿರರ್.ಕಾಂ
ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ
August 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror