ದೇಶದ ಮುಕುಟಮಣಿಯಂತಿರುವ ಲಡಾಖ್(save Ladakh) ರಕ್ಷಣೆಗೆ ಖ್ಯಾತ ಪರಿಸರವಾದಿ(social reformist) ಸೋನಮ್ ವಾಂಗ್ಚುಕ್(Sonam Wangchuk) ನೇತೃತ್ವದಲ್ಲಿ ನಡೆಯುತ್ತಿರುವ ಕಠಿಣ ಉಪವಾಸ ಸತ್ಯಾಗ್ರಹಕ್ಕೆ(climate fast) ಬೆಂಬಲ ಸೂಚಿಸೋಣ. ಮಾರ್ಚ್ 24 ರ ಭಾನುವಾರ ಶಿವಮೊಗ್ಗದಲ್ಲಿ ನಡೆಯುವ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಪರಿಸರಪ್ರೇಮಿಗಳು ಪಾಲ್ಗೊಳ್ಳುವುದರ ಮೂಲಕ…..
ಖ್ಯಾತ ಪರಿಸರವಾದಿ ಸೋನಂ ವಾಂಗ್ಚುಕ್ ಅವರು ಲೇಹ್ ನಗರದಲ್ಲಿ ವಿಪರೀತ ಥರಗುಟ್ಟುವ ಚಳಿ ನಡುವೆ ಕಳೆದ ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೇಂದ್ರಾಡಳಿತ ಲಡಾಕ್ ಪ್ರದೇಶವನ್ನು ಕೈಗಾರಿಕಾ ಹಾಗೂ ಗಣಿ ಲಾಬಿಗಳಿಂದ ರಕ್ಷಿಸಲು ಸಾಂವಿಧಾನಿಕ ರೀತಿಯ ಖಾತ್ರಿ ಬಯಸಿ ಅವರು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ನೂರಾರು ಜನರು ಬೆಂಬಲ ನೀಡುತ್ತಿದ್ದಾರೆ.
ಲಡಾಕ್ ಪರಿಸರ ಹಾಗೂ ಅದರ ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸುವುದಾಗಿ ಕೇಂದ್ರ ಸರ್ಕಾರ ವಾಗ್ದಾನ ಮಾಡಿತ್ತು. ಈ ವಾಗ್ದಾನ ನೆನಪಿಸುವುದಕ್ಕೋಸ್ಕರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮೈನಸ್ 12 ಡಿಗ್ರಿಗಿಂತಲೂ ಕಡಿಮೆ ತಾಪಮಾನದಲ್ಲಿ ಸುಮಾರು 250 ಜನರೊಂದಿಗೆ ರಾತ್ರಿ ಕಳೆಯುತ್ತಿರುವ ವಾಂಗ್ಚುಕ್, ಸರ್ಕಾರ ನೀಡಿರುವ ವಾಗ್ದಾನವನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಾರ್ಚ್ ಆರರಂದು ವಾಂಗ್ಚುಕ್ ಅವರು ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಈ ಪ್ರತಿಭಟನೆ ಆರಂಭಿಸಿದ್ದರು. ಅಂದು ಅವರು ನೂರಾರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಇನ್ನು ಪ್ರತಿ 21 ದಿನಗಳಂತೆ ಹಂತ ಹಂತವಾಗಿ ಈ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ.
ಹಿಮಾಲಯ ತಪ್ಪಲಿನ ಅತಿ ಸೂಕ್ಷ್ಮವಾದ ಈ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೇ ಕಾರ್ಯ ಚಟುವಟಿಕೆಗಳು ಇಡೀ ದೇಶದ ವಾತಾವರಣದ ಮೇಲೆ ಪರಿಣಾಮ ಬೀರುವುದರಿಂದ ನಾವೆಲ್ಲರೂ ಈ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳೋಣ. ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶಿವಮೊಗ್ಗದಲ್ಲಿ.
A large number of people including women, men, children, youth, students, and prominent people of Ladakh gathered at HIAL Leh in support of Sonam Wangchuk, who has been on Climate Fast for last five days.