ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

November 23, 2024
6:21 AM

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ ಪ್ರಕೃತಿಯ ಉಳಿವಿನ ಚಿತ್ರ ಬಿಡಿಸುತ್ತಿರುವ ಚಿಣ್ಣರ ಕಲವರಕ್ಕೆ  ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ -CPRI ಸಾಕ್ಷಿಯಾಯಿತು. ಕೇಂದ್ರ ಇಂಧನ ಸಚಿವಾಲಯದ ವತಿಯಿಂದ ನಡೆದ ಇಂಧನ ಉಳಿತಾಯ ವಿಷಯದ ಕುರಿತ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. 

Advertisement
Advertisement
Advertisement
Advertisement

ಶಾಲಾ ಮಕ್ಕಳಿಗಾಗಿ ದೇಶಾದ್ಯಂತ ಇಂಧನ ಉಳಿತಾಯ, ಪರಿಸರ ಸಂರಕ್ಷಣೆಯ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಶಾಲಾ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಅತ್ಯುತ್ತಮವಾಗಿ ಇಂಧನ ಉಳಿತಾಯದ ಕುರಿತ ಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳನ್ನು ಆಯ್ಕೆ ರಾಜ್ಯ ಮಟ್ಟದ ಸ್ಪರ್ಧೆ ನಡೆಸಲಾಗುತ್ತಿದೆ, ಇಂಧನ ಉಳಿವಿನ ಅಗತ್ಯತೆಯ ಇಂದಿನ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎನ್ನುತ್ತಾರೆ ಕಾರ್‍ಯಕ್ರಮದ ಸಮನ್ವಯಾಧಿಕಾರಿ ಸೂರ್ಯ ನಾರಾಯಣ.

Advertisement

ಸ್ಪರ್ಧೆಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ವಿದ್ಯುತ್ ವ್ಯರ್ಥ ಮಾಡಬಾರದು, ಸೌರಶಕ್ತಿಯ ಬಳಕೆಯೂ ಸೇರಿದಂತೆ ಪರಿಸರದ ಕುರಿತ ಹಲವು ಸಂಗತಿಗಳನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಯಿತು ಎನ್ನುತ್ತಾರೆ ವಿದ್ಯಾರ್ಥಿನಿ ಅಕ್ಷರಾ.

ಜೈವಿಕ ಇಂಧನ, ಸೌರ ಶಕ್ತಿ, ಗಾಳಿ ಶಕ್ತಿಯ ಬಳಕೆ ಕುರಿತಂತೆ ಹಲವು ವಿಚಾರಗಳು ಈ ಸ್ಪರ್ಧೆಯಿಂದ ಅರಿಯಲು ನೆರವಾಯಿತು ಎಂದು ಪೋಷಕರಾದ ಸುಮಾ ಹೇಳುತ್ತಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |
March 3, 2025
7:28 AM
by: The Rural Mirror ಸುದ್ದಿಜಾಲ
ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!
March 3, 2025
7:06 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror