ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ ಪ್ರಕೃತಿಯ ಉಳಿವಿನ ಚಿತ್ರ ಬಿಡಿಸುತ್ತಿರುವ ಚಿಣ್ಣರ ಕಲವರಕ್ಕೆ ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ -CPRI ಸಾಕ್ಷಿಯಾಯಿತು. ಕೇಂದ್ರ ಇಂಧನ ಸಚಿವಾಲಯದ ವತಿಯಿಂದ ನಡೆದ ಇಂಧನ ಉಳಿತಾಯ ವಿಷಯದ ಕುರಿತ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.
ಶಾಲಾ ಮಕ್ಕಳಿಗಾಗಿ ದೇಶಾದ್ಯಂತ ಇಂಧನ ಉಳಿತಾಯ, ಪರಿಸರ ಸಂರಕ್ಷಣೆಯ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಶಾಲಾ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಅತ್ಯುತ್ತಮವಾಗಿ ಇಂಧನ ಉಳಿತಾಯದ ಕುರಿತ ಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳನ್ನು ಆಯ್ಕೆ ರಾಜ್ಯ ಮಟ್ಟದ ಸ್ಪರ್ಧೆ ನಡೆಸಲಾಗುತ್ತಿದೆ, ಇಂಧನ ಉಳಿವಿನ ಅಗತ್ಯತೆಯ ಇಂದಿನ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎನ್ನುತ್ತಾರೆ ಕಾರ್‍ಯಕ್ರಮದ ಸಮನ್ವಯಾಧಿಕಾರಿ ಸೂರ್ಯ ನಾರಾಯಣ.
ಸ್ಪರ್ಧೆಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ವಿದ್ಯುತ್ ವ್ಯರ್ಥ ಮಾಡಬಾರದು, ಸೌರಶಕ್ತಿಯ ಬಳಕೆಯೂ ಸೇರಿದಂತೆ ಪರಿಸರದ ಕುರಿತ ಹಲವು ಸಂಗತಿಗಳನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಯಿತು ಎನ್ನುತ್ತಾರೆ ವಿದ್ಯಾರ್ಥಿನಿ ಅಕ್ಷರಾ.
ಜೈವಿಕ ಇಂಧನ, ಸೌರ ಶಕ್ತಿ, ಗಾಳಿ ಶಕ್ತಿಯ ಬಳಕೆ ಕುರಿತಂತೆ ಹಲವು ವಿಚಾರಗಳು ಈ ಸ್ಪರ್ಧೆಯಿಂದ ಅರಿಯಲು ನೆರವಾಯಿತು ಎಂದು ಪೋಷಕರಾದ ಸುಮಾ ಹೇಳುತ್ತಾರೆ.
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…