ಜಲಸಂರಕ್ಷಣೆಯ ಮಾದರಿ | ತೋಡಿಗೆ ಕಟ್ಟವ ಕಟ್ಟಿ | ಜೀವಜಲವ ಉಳಿಸಿ ನೀರುಣಿಸಿ, ಜಲಮೂಲ ಉಳಿಸಿ |

January 3, 2024
12:25 PM
ಜಲಸಂರಕ್ಷಣೆ ಅತೀ ಅಗತ್ಯವಾಗಿ ಆಗಬೇಕಾದ ಕಾರ್ಯ. ಕೃಷಿಕ ಎ ಪಿ ಸದಾಶಿವ ಅವರು ಸದ್ದಿಲ್ಲದೆ ನಡೆಸುವ ಅಭಿಯಾನ ಅನೇಕರಿಗೆ ಪ್ರೇರೇಪಣೆ ನೀಡಿದೆ. ಈಗ ಕಟ್ಟ ಕಟ್ಟುವ ಒಂದು ಮಾದರಿಯನ್ನು ಎ ಪಿ ಸದಾಶಿವ ಹೇಳಿದ್ದಾರೆ ಇಲ್ಲಿ...

ಪುತ್ತೂರಿನ ಎ. ಪಿ. ಸದಾಶಿವ ಮರಿಕೆ ಅವರು ಸಾವಯವ ಕೃಷಿಕರು(Agriculturist). ಇವರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ, ಹಾಗೇ ಮಾಡುತ್ತಲೂ ಇದ್ದಾರೆ. ಈಗ ಕೃಷಿ ಮಾಡುವವರಿಗೆ, ಮುಂದೆ ಮಾಡಲಿರುವವರಿಗೆ ಇವರ ಮಾಹಿತಿ, ಅನುಭವ ಸಾಕಷ್ಟು ಅನುಕೂಲ. ತಮ್ಮ ಕೃಷಿಯ ಅನುಭವಗಳನ್ನು ಬರಹಗಳ ಮೂಲಕ ಅಲ್ಲದೆ ಅನೇಕರಿಗೆ ಸಲಹೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿ ತಾವು ಕಂಡಿರುವ ತೋಡಿಗೆ ಕಟ್ಟ ಕಟ್ಟಿದ ಬಗ್ಗೆ ಹೇಳಿದ್ದನ್ನು ಕೇಳಿಕೊಂಡು ಪ್ರಭಾವಿತರಾದವರು ಕಟ್ಟ ಕಟ್ಟಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.ಅದರ ವಿವರವನ್ನು ಅವರೇ ಬರೆದಿದ್ದಾರೆ.. ಇಲ್ಲಿದೆ ವಿವರ...

Advertisement

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಬಯಲು ಎಂಬಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡಿರುವವರು  ವಿಜಯಕೃಷ್ಣ ದರ್ಭೆ . ಅವರ ತೋಟದ ಬದಿಯಲ್ಲಿ ಸಣ್ಣದೊಂದು ತೋಡು. ಆ ತೋಡಿನಲ್ಲಿ ಜನವರಿ ಕೊನೆಯವರೆಗೆ ಸಣ್ಣದಾದ ಹರಿವು ಇರುತ್ತದೆಯಂತೆ. ನನ್ನ ತಗಡಿನ ಕಟ್ಟದಿಂದ ಪ್ರೇರಿತರಾಗಿ ಅದಕ್ಕೊಂದು ಕಟ್ಟ ಕಟ್ಟುವ ಯೋಚನೆ ಬಂತಂತೆ. ಕಳೆದ ವರ್ಷ ಆ ಬಗ್ಗೆ ವಿಚಾರ ವಿನಿಮಯ ನಡೆದಿತ್ತು. ಒಂದೇ ಬಾರಿಗೆ ಧುಮುಕಿದರೆ ಹಣ ಪೋಲು ಎಂದಾಗಬಹುದೇ? ಎಂಬ ಭಯದಲ್ಲಿ ಈ ವರ್ಷ ಸರಳ ಕಟ್ಟಕ್ಕೆ ಧುಮುಕಿಯೇ ಬಿಟ್ಟರು.

ಅಲ್ಲೇ ಬದಿಯಲ್ಲಿ ಧಾರಾಳವಾಗಿದ್ದ ಓಟೆ ಬಿದಿರು, ಆಧಾರ ಸ್ತಂಭವಾಗಿ ಮರದ ಗೂಟ, ಗೂಟದ ಭದ್ರತೆಗಾಗಿ ಆಧಾರ ಮೂಂಡು ಇಷ್ಟು ಸಿದ್ಧತೆ ನಡೆಸಿ 17 ಅಡಿ ಅಗಲ, ಮೂರು ಅಡಿ ಎತ್ತರಕ್ಕೆ ಬಿದಿರಿನ ಕಟ್ಟದ ತಯಾರಿಯಾಯಿತು. ನೀರು ನಿಲ್ಲುವುದಕ್ಕಾಗಿ ಎದುರುಬದಿಯಿಂದ ಸಿಲ್ಪಾಲಿನ್ ಶೀಟನ್ನು ಹೊದಿಸಿ ಬಿಟ್ಟರು. ಏರಿ ಬಂದ ನೀರನ್ನು ನೋಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷದ ಭದ್ರಕಟ್ಟಕ್ಕಾಗಿ ಮನಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರಂತೆ. ವಿಜಯ ಕೃಷ್ಣರ ಸ್ಪೂರ್ತಿ ಬೇರೆಯವರಿಗೂ ಕಟ್ಟಕ್ಕೆ ಸ್ಪೂರ್ತಿ ತುಂಬಲಿ.

ಎ. ಪಿ. ಸದಾಶಿವ ಮರಿಕೆ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group