ಬೇಕಾಗುವ ಸಾಮಾಗ್ರಿ: ಬೆಂಡೆ ಕಾಯಿ 8, ಮೆಣಸಿನ ಪುಡಿ 1/2 ಚಮಚ, ಅರಸಿನ ಪುಡಿ,1/4 ಚಮಚ, ಬೆಲ್ಲ ಚಿಕ್ಕ ತುಂಡು, ಕೊತ್ತಂಬರಿ ಸೊಪ್ಪು 1/4 ಕಪ್, ಹುಣಸೆ ರಸ 3 ಚಮಚ, ಕಾಯಿತುರಿ 4 ಚಮಚ, ಹಸಿಮೆಣಸಿನ ಕಾಯಿ 2. ನೀರು ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ: ಸಾಸಿವೆ1/4 ಚಮಚ, ಎಣ್ಣೆ 2 ಚಮಚ, ಜೀರಿಗೆ 1/2 ಚಮಚ, ಉದ್ದಿನ ಬೇಳೆ 1/4 ಚಮಚ, ಕೆಂಪು ಮೆಣಸು 1, ಕರಿಬೇವಿನ ಸೊಪ್ಪು.
ಮಾಡುವ ವಿಧಾನ: ಬೆಂಡೆಕಾಯಿ ತೊಳೆದು ಒರೆಸಿ ರೌಂಡ್ ಆಗಿ ಕಟ್ ಮಾಡಿ. ಒಂದು ಬಾಣಲೆಗೆ ಸಾಸಿವೆ, ಜೀರಿಗೆ, ಎಣ್ಣೆ, ಉದ್ದಿನಬೇಳೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ. ಕಟ್ ಮಾಡಿದ ಬೆಂಡೆ ಕಾಯಿ, ಹಸಿಮೆಣಸು ಹಾಕಿ ಫ್ರೈ ಮಾಡಿ, ಉಪ್ಪು, ಬೆಲ್ಲ, ಅರಸಿನ ಪುಡಿ, ಮೆಣಸಿನ ಪುಡಿ, ಹುಣಸೆ ರಸ ಸ್ವಲ್ಪ ನೀರು ಹಾಕಿ ಬೇಯಿಸಿ.. ಬೆಂದ ನಂತರ ಕೊತ್ತಂಬರಿ ಸೊಪ್ಪು ಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಕರವಾದ ಬೆಂಡೆಕಾಯಿ ಪಲ್ಯ ರೆಡಿ
-ದಿವ್ಯ ಮಹೇಶ್.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…