ಪುತ್ತೂರಿನ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯ ತೂಕ, ಅಳತೆ ಮತ್ತು ತೂಕದ ಸಾಧನಗಳ 2022ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯದ ಗಾಂಧಿನಗರದ ಸರ್ಕಾರಿ ಪ್ರೌಢಶಾಲೆ ಮೈದಾನದ ಎದರುಗಡೆ ಇರುವ ಎಸ್.ಜಿ ಸ್ಟೋರ್ ಬಿಲ್ಡಿಂಗ್‍ನ ಮೊದಲನೇ ಮಹಡಿಯಲ್ಲಿ ಪ್ರತೀ ಗುರುವಾರ ಹಮ್ಮಿಕೊಳ್ಳಲಾಗಿದೆ.
Advertisement
ಸುಳ್ಯ ಶಿಬಿರ ವ್ಯಾಪ್ತಿಯಲ್ಲಿನ ಜಾಲ್ಸೂರು, ಸುಳ್ಯ, ಅಜ್ಜಾವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮರ್ಕಂಜ, ತೋಡಿಕಾನ, ಅರಂತೋಡು, ಕೋಡಿಯಾಳ, ಆಲೆಟ್ಟಿ ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ, ಅಳತೆ ಮತ್ತು ತೂಕದ ಸಾಧನಗಳನ್ನು ಪ್ರತಿ ಗುರುವಾರ ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಬೇಕು ಹಾಗೂ ಶಿಬಿರವು 2022 ರ ನವೆಂಬರ್ 08 ರಂದು ಮುಕ್ತಾಯಗೊಳ್ಳಲಿದೆ ಎಂದು ಪುತ್ತೂರು ಉಪ ವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement