ರೈತನಿಗೆ ಸರ್ಕಾರದಿಂದ ಹಲವಾರು ಬಗ್ಗೆಯ ಯೋಜನೆಗಳು ಜಾರಿಯಲ್ಲಿದೆ. ಆ ಯೋಜನೆಗೆ ಯಾವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು..?
• ಕಿಸಾನ್ ಕ್ರೆಡಿಟ್ ಕಾರ್ಡ್: ಈ ಯೋಜನೆ ಅಡಿಯಲ್ಲಿ ಬಡ್ಡಿ ದರ ಕಡಿಮೆ ಇರುವುದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬೀತ್ತನೆ ಬೀಜ, ರಸಗೊಬ್ಬರ ಮತ್ತು ಇತರ ವೆಚ್ಚಗಳಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
• ಮಣ್ಣಿನ ಆರೋಗ್ಯ ಕಾರ್ಡ್: ಈ ಯೋಜನೆಯು 2015ರಲ್ಲಿ ಜಾರಿಗೊಳಿಸಲಾಯಿತು. ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಹೇಗೆಂದರೆ ಮಣ್ಣಿನ ಫಲತ್ತತೆಯನ್ನು ಆಧಾರಿಸಿ ಸೂಕ್ತ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
• ರಾಷ್ಟ್ರೀಯ ಕೃಷಿ ಮಾರುಕಟ್ಟೆ: ಇದೊಂದು ಡಿಜಿಟಲ್ ವೇದಿಕೆಯಾಗಿದ್ದು, ಇದರಿಂದ ದೇಶದಾದ್ಯಂತ ಇರುವ ಕೃಷಿ ಮಾರುಕಟ್ಟೆಗಳನ್ನು ಒಂದೇ ಜಾಲದಲ್ಲಿ ಸಂಪರ್ಕಿಸುತ್ತದೆ. ಇದು ರೈತರನ್ನು ಸಗಟು ಖರೀದಿದಾರರೊಂದಿಗೆ ಸಂಪರ್ಕಿಸುವುದಲ್ಲದೇ ಅವರ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲು ಅನುವು ಮಾಡಕೊಡುತ್ತದೆ. ಬೃಹತ್ ಮಾರುಕಟ್ಟೆಗೆ ಪ್ರವೇಶವನ್ನು ಒದಗಿಸುವುದು, ರೈತ ಮತ್ತು ಖರೀದಿದಾರರ ನಡುವೆ ನೇರ ಮಾತುಕತೆಯನ್ನು ಉತ್ತೇಜಿಸುವುದು. ಮಾರುಕಟ್ಟೆ ವಿಸ್ತರಣೆಯಾಗಿದೆ.
• ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ರೈತರಿಗೆ ಆರ್ಥಿಕ ನೆರವು ನೀಡಿ ಅವರ ಜೀವನಮಟ್ಟವನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
• ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ: ಅನಿರೀಕ್ಷಿತ ಘಟನೆಗಳಿಂದ ಉಂಟಾದ ಬೆಳೆ ನಷ್ಟಕ ಆರ್ಥಿಕ ಪರಿಹಾರ ನೀಡಲು ಭಾರತ ಸರ್ಕಾರ ಆರಂಭಿಸಿರುವ ಕೃಷಿ ವಿಮಾ ಯೋಜನೆ ಇದಾಗಿದೆ. ನೈಸರ್ಗಿಕ ವಿಕೋಪಗಳು, ರೋಗಬಾಧೆ, ಅತಿವೃಷ್ಟಿ, ಬರ, ನೆರೆ ಮುಂತಾದ ಕಾರಣಗಳಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಋಕ್ಷಣೆ ನೀಡುವುದು ಇದರ ಉದ್ದೇಶ.
• ಪರಂಪರಾಗತ ಕೃಷಿ ವಿಕಾಸ ಯೋಜನೆ: ಸಾವಯವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಭಾರತ ಸರ್ಕಾರ ಒಂದು ಉಪಕ್ರಮ. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯಕವಾಗಿದೆ.
• ಪ್ರಧಾನ ಮಂತ್ರಿ ಕೃಷಿ ಸಂಚಯಿ ಯೋಜನೆ: ದೇಶದಲ್ಲಿ ಹೆಚ್ಚಿನ ಕೃಷಿ ಮಳೆ ನೀರನ್ನೇ ಅವಲಂಬಿಸಿದೆ. ಇದರಿಂದಾಗಿ ಬಹುತೇಕ ರೈತರು ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತಿದೆ. ಮಳೆನೀರು ಕೊಯ್ಲಿನ ಸಹಾಯದಿಂದ ರಕ್ಷಣಾತ್ಮಕ ನೀರಾವರಿಯನ್ನು ಉತ್ತೇಜಿಸುವುದು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ಗುರಿಯಾಗಿದೆ.
• ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ರೈತರ ಆದಾಯವನ್ನು ಹೆಚ್ಚಿಸುವುದು, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯ ಮೂಲಕ ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ, ಉದ್ಯಮಶೀಲತೆ ಮತ್ತು ನವೋಧ್ಯಮಗಳಿಗೆ ಆರ್ಥಿಕ ನೆರವು ನೀಡುತ್ತದೆ.
• ಪಿಎಂ ಕಿಸಾನ್ ಪಿಂಚಣಿ ಯೋಜನೆ: ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯು ಸಾಮಾಜಿಕ ಭದ್ರತಾ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ ಅರ್ಹ ಸಣ್ಣ ಮ್ತು ಅತೀ ಸಣ್ಣ ರೈತರಿಗೆ ಪಿಂಚಣಿ ನೀಡಲಾಗುತ್ತದೆ.
• ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ದೇಶದ ಮೀನುಗಾರಿಕಾ ಕ್ಷೇತ್ರ ಪ್ರಗತಿಗಾಗಿ ರೂಪಿಸಿರುವ ಯೋಜನೆ ಇದಾಗಿದೆ.

