ಒಂದು ಸಣ್ಣ ಕತೆ | ಶಾಲೆ ಎಂಬ ದೇಗುಲ – ಅಭಿವೃದ್ದಿಯ ಅನಿವಾರ್ಯತೆ | ಇದು ಸುಬ್ರಹ್ಮಣ್ಯದ ಸರಕಾರಿ ಶಾಲೆಯ ಕತೆ |

June 27, 2021
9:52 AM

Advertisement
Advertisement
Advertisement
Advertisement
ಅಭಿವೃದ್ದಿ ಎನ್ನುವ ಅರ್ಥ ವಿಶಾಲವಾದ್ದು. ಅದರಲ್ಲಿ ಮುಖ್ಯವಾಗಿ ಕಾಣುವಂತದ್ದು, ಭೌತಿಕ ಅಭಿವೃದ್ದಿ ಹಾಗೂ ಇನ್ನೊಂದು ಬೌದ್ಧಿಕವಾದ ಅಭಿವೃದ್ಧಿ. ಇದೆರಡೂ ಇಂದು ಅಗತ್ಯವಾಗಿದೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಅಂತಹದ್ದೊಂದು ಸಂದಿಗ್ಧತೆ ಇದೆ. ಈಗ ಭೌತಿಕ ಅಭಿವೃದ್ಧಿಗೆ ಆದ್ಯತೆಯೋ, ಬೌದ್ಧಿಕ ಅಭಿವೃದ್ಧಿಗೆ ಆದ್ಯತೆಯೋ ಎಂಬುದು  ಪ್ರಶ್ನೆ. ಇಲ್ಲಿ ಎರಡೂ ಮುಖ್ಯವೇ ಆಗಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಕುಮಾರಧಾರಾದಿಂದಲೇ ಕಾಂಕ್ರೀಟ್‌ ರಸ್ತೆ ಆರಂಭವಾಗಿದೆ ಮಾಸ್ಟರ್‌ ಪ್ಲಾನ್‌ ಸಮಿತಿಯ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇದು  ಅಗತ್ಯ ಹಾಗೂ ಅನಿವಾರ್ಯ ಕೂಡಾ. ಕುಕ್ಕೆ ಸುಬ್ರಹ್ಮಣ್ಯ ರಾಷ್ಟ್ರೀಯ ಮಟ್ಟದಲ್ಲಿ  ಸ್ಥಾನ ಪಡೆದಿರುವ ಪುಣ್ಯ ಸ್ಥಳ, ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ, ಹೀಗಾಗಿ ಮೂಲಭೂತವಾದ ಭೌತಿಕ ಅಭಿವೃದ್ಧಿ ಮಾಡಿಸಲೇ ಬೇಕಾದ ಅನಿವಾರ್ಯತೆ ಇದೆ. ಶುಚಿತ್ವ, ಪಾರ್ಕಿಂಗ್‌ ವ್ಯವಸ್ಥೆ ಇದೆಲ್ಲಾ ಆಗಬೇಕಾದ್ದೇ. ಹೀಗೆ ಅಭಿವೃದ್ಧಿಯ ವೇಳೆಗೆ ಈಗ ಸಂಕಷ್ಟದಲ್ಲಿ ಇರುವುದು  ಇಲ್ಲಿನ  ಸರಕಾರಿ ಶಾಲೆ. ಈ ಚಿತ್ರ ನೋಡಿ.. ಎರಡೂ ಕಡೆ ಕಾಂಕ್ರೀಟ್‌ ಬಂದು ನಿಂತಿದೆ.. ಇನ್ಯಾವಾಗ ಶಾಲೆ ಒಡೆಯುವುದು …? ಈ ಚಿತ್ರ ಮನಸಿಗೆ ನಾಟುತ್ತಿದೆ.

 

Advertisement

ಹಾಗೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವಿದ್ಯಾದಾನವೂ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾನವೂ ನಡೆಯುತ್ತದೆ, ಗುಣಮಟ್ಟದ ಕಡೆಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಈಗ ಎರಡೂ ಕಡೆ ಕಾಂಕ್ರೀಟ್‌ ಆಗಿ ನಿಂತಿರುವ ಶಾಲೆ ಸರಕಾರಿ ಶಾಲೆ. ಸರಕಾರದಿಂದಲೇ ನಡೆಸಲ್ಪಡುವ ಶಾಲೆ ಒಂದು ಕಡೆ ಸರಕಾರದಿಂದಲೇ ಆಡಳಿತಕ್ಕೊಳಪಡುವ ದೇವಸ್ಥಾನದ ಮಾಸ್ಟರ್‌ ಪ್ಲಾನ್‌ ಸಮಿತಿ ಒಂದು ಕಡೆ. ಎರಡೂ ಸರಕಾರವೇ. ಈಗ ಸದ್ಯದ ಮಟ್ಟಿಗೆ ಈ ಶಾಲೆಯ ಮಕ್ಕಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಕಾಲೇಜಿನ ಒಂದು ಕೊಠಡಿಯನ್ನು ವಿಭಾಗ ಮಾಡಿ ಅಲ್ಲಿಗೆ ಮಕ್ಕಳನ್ನು, ಶಾಲೆಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ. ಅದೂ ಸುಮಾರು 1.5 ಕಿಮೀ ಈ ಪುಟ್ಟ ಮಕ್ಕಳು ಕಾಂಕ್ರೀಟ್‌ ರಸ್ತೆಯ ಬದಿಯಲ್ಲಿ  ನಡೆದುಕೊಂಡ ಸಾಗಬೇಕು. ಅಚ್ಚರಿ ಎಂದರೆ ಯಾವುದೇ ವ್ಯಕ್ತಿಗಳೂ ಈ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಇಲ್ಲಿ ಕಲಿಯುವ  ಬಹುತೇಕ ವಿದ್ಯಾರ್ಥಿಗಳು ಬಡವರು. ಹೀಗಾಗಿ ಆ ಮಾತುಗಳಿಗೆ “ವಾಯ್ಸ್”‌ ಇಲ್ಲವಾಗಿದೆ. ಹಾಗಂತ ಭವಿಷ್ಯದಲ್ಲಿ ಮಕ್ಕಳ ಸಮಸ್ಯೆ ಬಗ್ಗೆ ಮಾತನಾಡಿದರೆ ಹೌದು ಎನ್ನುತ್ತಾರೆ, ಶಾಲೆ ಮಚ್ಚಬಹುದು  ಎನ್ನುತ್ತಾರೆ. ಪ್ರತ್ಯೇಕ ಕೊಠಡಿ ಆಗುತ್ತದೆ ಎನ್ನುತ್ತಾರೆ. ಎಲ್ಲವೂ ಹೌದು. ಆದರೆ ಖಚಿತವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ ಎನ್ನುವುದು  ವಿಷಾದವಷ್ಟೇ.

Advertisement

 

Advertisement

ಅನಾದಿಕಾಲದಿಂದಲೂ ದೇವಸ್ಥಾನಗಳು ಪ್ರತೀ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿತ್ತು, ಈಗಲೂ ಬರೆಯುತ್ತಿದೆ. ವಿದ್ಯಾರಂಭವೂ ದೇವಸ್ಥಾನ, ದೇವರ ಮುಂದೆಯೇ ನಡೆಯುತ್ತದೆ. ಮೊದಲ ತುತ್ತು ಕೂಡಾ ಮಕ್ಕಳಿಗೆ ದೇವರ ಮುಂದೆಯೇ ನೀಡಲಾಗುತ್ತದೆ. ಆ ಬಳಿಕ ಪ್ರತೀ ಹೆಜ್ಜೆಯೂ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ದೇವಸ್ಥಾನಗಳು ಕಾರಣವಾಗುತ್ತಿತ್ತು. ಇಲ್ಲೂ ಕೂಡಾ ದೇವಸ್ಥಾನದ ವತಿಯಿಂದಲೇ ಕಾಲೇಜು ನಡೆಸಲಾಗುತ್ತಿದೆ, ಅದರ ಜೊತೆಯೇ ಈ ಸರಕಾರಿ ಶಾಲೆಯೂ ಸುಸಜ್ಜಿತವಾಗಿ ನಡೆಯಲಿ, ಇನ್ನಷ್ಟು ಕಲಿಕಾ ವ್ಯವಸ್ಥೆಗಳು ಲಭ್ಯವಾಗಲಿ ಎಂಬುದಷ್ಟೇ ಆಶಯ.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |
February 25, 2025
10:11 PM
by: The Rural Mirror ಸುದ್ದಿಜಾಲ
ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |
February 25, 2025
9:41 PM
by: The Rural Mirror ಸುದ್ದಿಜಾಲ
ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ
February 25, 2025
8:57 PM
by: The Rural Mirror ಸುದ್ದಿಜಾಲ
ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |
February 25, 2025
8:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror