ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಕುಮಾರಧಾರಾದಿಂದಲೇ ಕಾಂಕ್ರೀಟ್ ರಸ್ತೆ ಆರಂಭವಾಗಿದೆ ಮಾಸ್ಟರ್ ಪ್ಲಾನ್ ಸಮಿತಿಯ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇದು ಅಗತ್ಯ ಹಾಗೂ ಅನಿವಾರ್ಯ ಕೂಡಾ. ಕುಕ್ಕೆ ಸುಬ್ರಹ್ಮಣ್ಯ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿರುವ ಪುಣ್ಯ ಸ್ಥಳ, ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ, ಹೀಗಾಗಿ ಮೂಲಭೂತವಾದ ಭೌತಿಕ ಅಭಿವೃದ್ಧಿ ಮಾಡಿಸಲೇ ಬೇಕಾದ ಅನಿವಾರ್ಯತೆ ಇದೆ. ಶುಚಿತ್ವ, ಪಾರ್ಕಿಂಗ್ ವ್ಯವಸ್ಥೆ ಇದೆಲ್ಲಾ ಆಗಬೇಕಾದ್ದೇ. ಹೀಗೆ ಅಭಿವೃದ್ಧಿಯ ವೇಳೆಗೆ ಈಗ ಸಂಕಷ್ಟದಲ್ಲಿ ಇರುವುದು ಇಲ್ಲಿನ ಸರಕಾರಿ ಶಾಲೆ. ಈ ಚಿತ್ರ ನೋಡಿ.. ಎರಡೂ ಕಡೆ ಕಾಂಕ್ರೀಟ್ ಬಂದು ನಿಂತಿದೆ.. ಇನ್ಯಾವಾಗ ಶಾಲೆ ಒಡೆಯುವುದು …? ಈ ಚಿತ್ರ ಮನಸಿಗೆ ನಾಟುತ್ತಿದೆ.
ಹಾಗೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವಿದ್ಯಾದಾನವೂ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾನವೂ ನಡೆಯುತ್ತದೆ, ಗುಣಮಟ್ಟದ ಕಡೆಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಈಗ ಎರಡೂ ಕಡೆ ಕಾಂಕ್ರೀಟ್ ಆಗಿ ನಿಂತಿರುವ ಶಾಲೆ ಸರಕಾರಿ ಶಾಲೆ. ಸರಕಾರದಿಂದಲೇ ನಡೆಸಲ್ಪಡುವ ಶಾಲೆ ಒಂದು ಕಡೆ ಸರಕಾರದಿಂದಲೇ ಆಡಳಿತಕ್ಕೊಳಪಡುವ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಒಂದು ಕಡೆ. ಎರಡೂ ಸರಕಾರವೇ. ಈಗ ಸದ್ಯದ ಮಟ್ಟಿಗೆ ಈ ಶಾಲೆಯ ಮಕ್ಕಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಕಾಲೇಜಿನ ಒಂದು ಕೊಠಡಿಯನ್ನು ವಿಭಾಗ ಮಾಡಿ ಅಲ್ಲಿಗೆ ಮಕ್ಕಳನ್ನು, ಶಾಲೆಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ. ಅದೂ ಸುಮಾರು 1.5 ಕಿಮೀ ಈ ಪುಟ್ಟ ಮಕ್ಕಳು ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ನಡೆದುಕೊಂಡ ಸಾಗಬೇಕು. ಅಚ್ಚರಿ ಎಂದರೆ ಯಾವುದೇ ವ್ಯಕ್ತಿಗಳೂ ಈ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಇಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳು ಬಡವರು. ಹೀಗಾಗಿ ಆ ಮಾತುಗಳಿಗೆ “ವಾಯ್ಸ್” ಇಲ್ಲವಾಗಿದೆ. ಹಾಗಂತ ಭವಿಷ್ಯದಲ್ಲಿ ಮಕ್ಕಳ ಸಮಸ್ಯೆ ಬಗ್ಗೆ ಮಾತನಾಡಿದರೆ ಹೌದು ಎನ್ನುತ್ತಾರೆ, ಶಾಲೆ ಮಚ್ಚಬಹುದು ಎನ್ನುತ್ತಾರೆ. ಪ್ರತ್ಯೇಕ ಕೊಠಡಿ ಆಗುತ್ತದೆ ಎನ್ನುತ್ತಾರೆ. ಎಲ್ಲವೂ ಹೌದು. ಆದರೆ ಖಚಿತವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ ಎನ್ನುವುದು ವಿಷಾದವಷ್ಟೇ.
ಅನಾದಿಕಾಲದಿಂದಲೂ ದೇವಸ್ಥಾನಗಳು ಪ್ರತೀ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿತ್ತು, ಈಗಲೂ ಬರೆಯುತ್ತಿದೆ. ವಿದ್ಯಾರಂಭವೂ ದೇವಸ್ಥಾನ, ದೇವರ ಮುಂದೆಯೇ ನಡೆಯುತ್ತದೆ. ಮೊದಲ ತುತ್ತು ಕೂಡಾ ಮಕ್ಕಳಿಗೆ ದೇವರ ಮುಂದೆಯೇ ನೀಡಲಾಗುತ್ತದೆ. ಆ ಬಳಿಕ ಪ್ರತೀ ಹೆಜ್ಜೆಯೂ ವ್ಯಕ್ತಿಯ ಬೌದ್ಧಿಕ ಅಭಿವೃದ್ಧಿಗೆ ದೇವಸ್ಥಾನಗಳು ಕಾರಣವಾಗುತ್ತಿತ್ತು. ಇಲ್ಲೂ ಕೂಡಾ ದೇವಸ್ಥಾನದ ವತಿಯಿಂದಲೇ ಕಾಲೇಜು ನಡೆಸಲಾಗುತ್ತಿದೆ, ಅದರ ಜೊತೆಯೇ ಈ ಸರಕಾರಿ ಶಾಲೆಯೂ ಸುಸಜ್ಜಿತವಾಗಿ ನಡೆಯಲಿ, ಇನ್ನಷ್ಟು ಕಲಿಕಾ ವ್ಯವಸ್ಥೆಗಳು ಲಭ್ಯವಾಗಲಿ ಎಂಬುದಷ್ಟೇ ಆಶಯ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…