ವಾರ್ಷಿಕ ಶೈಕ್ಷಣಿಕ ವರದಿ ಸ್ಥಿತಿಗತಿ(ಎಎಸ್‌ಇಆರ್) ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗಳ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ ಅಂದರೆ ಅತೀ ಕಡಿಮೆ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಪಶ್ಚಿಮ ಬಂಗಾಳದ ಪ್ರಮಾಣ ಈ ವರ್ಷ ಶೇಕಡಾ 1.5ರಷ್ಟಿದ್ದು, 2018ರಲ್ಲಿ ಅದು ಶೇಕಡಾ 3.3ರಷ್ಟಿತ್ತು ಎಂದು ವರದಿ ಹೇಳಿದೆ. ರಾಷ್ಟ್ರಮಟ್ಟದಲ್ಲಿ ಇದು ಈ ವರ್ಷ ಶೇಕಡಾ 5.5ರಿಂದ ಶೇಕಡಾ 4ಕ್ಕೆ ಹೋಗಿದೆ. ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆಯಲ್ಲಿ ಕೂಡ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ದೇಶದ 16 ಸಾವಿರದ 974 ಗ್ರಾಮಗಳಲ್ಲಿರುವ 52,227 ಕುಟುಂಬಗಳಲ್ಲಿ ನಡೆಸಿರುವ ಸಮೀಕ್ಷೆಯಿಂದ ಇದು ತಿಳಿದುಬಂದಿದೆ. ಈ ಎಎಸ್‌ಇಆರ್ ವರದಿಯನ್ನು ಪ್ರಥಮ್ ಎಜುಕೇಶನ್ ಫೌಂಡೇಶನ್ ತಯಾರಿಸಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ರಾಜಸ್ತಾನ ಮುಂಚೂಣಿಯಲ್ಲಿದೆ. ಪಠ್ಯಪುಸ್ತಕ ಪೂರೈಕೆಯಲ್ಲಿ ಸಹ ಪಶ್ಚಿಮ ಬಂಗಾಳ ಆಂಧ್ರ ಪ್ರದೇಶ, ರಾಜಸ್ತಾನ ಮತ್ತು ತೆಲಂಗಾಣಗಳಿಗಿಂತ ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.