#Rubber | ಅಡಿಕೆ ಹಾಗೂ ರಬ್ಬರ್‌ ಎಲೆಚುಕ್ಕಿ ವೈರಸ್‌ಗಳು ಪರಸ್ಪರ ಸಂಬಂಧ ಹೊಂದಿದೆಯೇ ? | ರಬ್ಬರ್‌ ಮಂಡಳಿಯಿಂದ ಅಧ್ಯಯನಕ್ಕೆ ಸಿದ್ಧತೆ |

July 13, 2023
8:00 AM
ಎಲೆಚುಕ್ಕಿ ರೋಗ ಮತ್ತು ಕೊಳೆರೋಗ ಎರಡೂ ಕೂಡಾ ರಬ್ಬರ್‌ ಹಾಗೂ ಅಡಿಕೆ ತೋಟದಲ್ಲಿ ಸಾಮಾನ್ಯವಾಗಿದೆ.ಹೀಗಾಗಿ ಈ ವೈರಸ್‌ಗಳು ಪರಸ್ಪರ ಸಂಪರ್ಕ ಹೊಂದಿವೆಯೇ? ಎಂಬ ಪ್ರಶ್ನೆಗಳು ಇವೆ.  ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಯ ಅಗತ್ಯ ಇದೆ ಎಂದು ರಬ್ಬರ್‌ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್‌ ಅವರು ಹೇಳಿದ್ದಾರೆ.

ಅಡಿಕೆ ಹಾಗೂ ರಬ್ಬರ್‌ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತಿದೆ. ಇದರ ಜೊತೆಗೇ ಎರಡೂ ಬೆಳೆಯಲ್ಲಿ ಕೊಳೆರೋಗವೂ ಸಾಮಾನ್ಯ ಅಂಶವಾಗಿದೆ. ಹೀಗಾಗಿ ಎರಡೂ ಬೆಳೆಯಲ್ಲಿ ಕಂಡುಬರುವ ವೈರಸ್‌ ಗಳು ಸಾಮಾನ್ಯ ಪ್ರಬೇಧವೇ ಎಂಬುದರ ಬಗ್ಗೆ ವೈಜ್ಞಾನಿಕವಾದ ಸಂಶೋಧನೆ ನಡೆಸಲು ಭಾರತೀಯ ರಬ್ಬರ್‌ ಬೋರ್ಡ್ ಆಸಕ್ತಿ ವಹಿಸಿದೆ.

ದಕ್ಷಿಣ ಕನ್ನಡ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಹಾಗೂ ರಬ್ಬರ್‌ ಸಾಮಾನ್ಯ ಬೆಳೆಯಾಗಿದೆ. ಎರಡೂ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತದೆ. ರಬ್ಬರ್‌ ಕೃಷಿ ಇರುವ ಕಡೆ ಅಡಿಕೆಯ ಎಲೆಚುಕ್ಕಿ ರೋಗ ಬೇಗನೆ ಹರಡಿದೆ ಎಂದು ರೈತರು ಗಮನಿಸಿದ್ದರು. ಈ ಬಗ್ಗೆ ಭಾರತೀಯ ರಬ್ಬರ್‌ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್‌ ಅವರ ಜೊತೆ ಚರ್ಚಿಸಿದ್ದರು. ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ಸೂಕ್ತ ಎಂದು ರೈತರು ಮಾಹಿತಿ ನೀಡಿದ್ದರು. ಇದಕ್ಕಾಗಿ ಭಾರತೀಯ ರಬ್ಬರ್‌ ಮಂಡಳಿ ಸಭೆಯಲ್ಲಿ ಮುಳಿಯ ಕೇಶವ ಭಟ್‌ ಅವರು ರಬ್ಬರ್‌ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಎಲೆಚುಕ್ಕಿ ರೋಗ ಹಾಗೂ ಕೊಳೆರೋಗದ ವೈರಸ್‌ ರಬ್ಬರ್‌ ಹಾಗೂ ಅಡಿಕೆಯಲ್ಲಿ  ಸಾಮ್ಯತೆ ಇದೆಯೇ ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಲು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರಬ್ಬರ್‌ ಬೋರ್ಡ್‌ ಆಡಳಿತ ನಿರ್ದೇಶಕ ವಸಂತಗೇಸನ್ ಹಾಗೂ ಚಯರ್‌ಮೆನ್‌ ಡಾ.ಸಾವರ್‌ ದನಾನಿಯಾ ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಅಧ್ಯಯನಕ್ಕೆ ಉತ್ಸಾಹ ತೋರಿದ್ದಾರೆ.

ಮುಳಿಯ ಕೇಶವ ಭಟ್

ಉತ್ತರ ಕೇರಳ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಪ್ರದೇಶದ ಕೃಷಿಕರು ಮುಖ್ಯವಾಗಿ ಅಡಿಕೆ ಮತ್ತು ರಬ್ಬರ್  ಬೆಳೆಯುತ್ತಾರೆ. ಅಡಿಕೆಯಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಕೊಳೆರೋಗ ಒಂದು. ಇದನ್ನು  ನಿಯಂತ್ರಿಸಲು ಬೋರ್ಡೋ ಸ್ಪ್ರೇ ಅನ್ನು ಶಿಫಾರಸು ಮಾಡಲಾಗಿದೆ.

ಆದರೆ ಕೆಲವು ವರ್ಷಗಳಿಂದ, ಅಡಿಕೆಯಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಈ ರೋಗದಿಂದ  ತಕ್ಷಣವೇ ಅಡಿಕೆ ಮರಗಳೂ ಸಾಯುತ್ತಿರುವುದು  ಕಂಡುಬಂದಿದೆ. ಇದರ ಜೊತೆಗೆ ಹಳದಿ ಎಲೆರೋಗ ಕೂಡಾ ಇನ್ನೊಂದು ಸಮಸ್ಯೆಯಾಗಿದೆ. ಇದಕ್ಕೆ ಯಾವುದೇ ಪರಿಹಾರವಿಲ್ಲ.

ಎಲೆಚುಕ್ಕಿ ರೋಗ ಮತ್ತು ಕೊಳೆರೋಗ ಎರಡೂ ಕೂಡಾ ರಬ್ಬರ್‌ ಹಾಗೂ ಅಡಿಕೆ ತೋಟದಲ್ಲಿ ಸಾಮಾನ್ಯವಾಗಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಹೀಗಾಗಿ ಈಗ  ಈ ವೈರಸ್‌ಗಳು ಪರಸ್ಪರ ಸಂಪರ್ಕ ಹೊಂದಿವೆಯೇ?,  ಇವುಗಳನ್ನು ಸೃಷ್ಟಿಸುವ ಶಿಲೀಂಧ್ರ/ಬ್ಯಾಕ್ಟೀರಿಯಾ/ವೈರಸ್ ಒಂದೇ ರೀತಿಯ ಅಥವಾ ಸಾಮಾನ್ಯವೇ?,  ಸಮಸ್ಯೆಗಳು ರಬ್ಬರ್ ಮತ್ತು ಅಡಿಕೆ ಎರಡರಲ್ಲೂ ಕಂಡುಬರುವುದರಿಂದ, ಇದು ರಬ್ಬರ್ ತೋಟದಿಂದ ಅಡಿಕೆಗೆ ಹರಡುತ್ತದೆಯೇ ? ಎಂಬ ಪ್ರಶ್ನೆಗಳು ಇವೆ.  ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಯ ಅಗತ್ಯ ಇದೆ ಎಂದು ಮುಳಿಯ ಕೇಶವ ಭಟ್‌ ಅವರು ಹೇಳಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ
March 7, 2026
11:36 AM
by: ಮಿರರ್‌ ಡೆಸ್ಕ್
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್
ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ
March 7, 2026
7:23 AM
by: ಮಿರರ್‌ ಡೆಸ್ಕ್
ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror