ಅಡಿಕೆ ಹಾಗೂ ರಬ್ಬರ್ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತಿದೆ. ಇದರ ಜೊತೆಗೇ ಎರಡೂ ಬೆಳೆಯಲ್ಲಿ ಕೊಳೆರೋಗವೂ ಸಾಮಾನ್ಯ ಅಂಶವಾಗಿದೆ. ಹೀಗಾಗಿ ಎರಡೂ ಬೆಳೆಯಲ್ಲಿ ಕಂಡುಬರುವ ವೈರಸ್ ಗಳು ಸಾಮಾನ್ಯ ಪ್ರಬೇಧವೇ ಎಂಬುದರ ಬಗ್ಗೆ ವೈಜ್ಞಾನಿಕವಾದ ಸಂಶೋಧನೆ ನಡೆಸಲು ಭಾರತೀಯ ರಬ್ಬರ್ ಬೋರ್ಡ್ ಆಸಕ್ತಿ ವಹಿಸಿದೆ.
ದಕ್ಷಿಣ ಕನ್ನಡ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಹಾಗೂ ರಬ್ಬರ್ ಸಾಮಾನ್ಯ ಬೆಳೆಯಾಗಿದೆ. ಎರಡೂ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತದೆ. ರಬ್ಬರ್ ಕೃಷಿ ಇರುವ ಕಡೆ ಅಡಿಕೆಯ ಎಲೆಚುಕ್ಕಿ ರೋಗ ಬೇಗನೆ ಹರಡಿದೆ ಎಂದು ರೈತರು ಗಮನಿಸಿದ್ದರು. ಈ ಬಗ್ಗೆ ಭಾರತೀಯ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಅವರ ಜೊತೆ ಚರ್ಚಿಸಿದ್ದರು. ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ಸೂಕ್ತ ಎಂದು ರೈತರು ಮಾಹಿತಿ ನೀಡಿದ್ದರು. ಇದಕ್ಕಾಗಿ ಭಾರತೀಯ ರಬ್ಬರ್ ಮಂಡಳಿ ಸಭೆಯಲ್ಲಿ ಮುಳಿಯ ಕೇಶವ ಭಟ್ ಅವರು ರಬ್ಬರ್ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಎಲೆಚುಕ್ಕಿ ರೋಗ ಹಾಗೂ ಕೊಳೆರೋಗದ ವೈರಸ್ ರಬ್ಬರ್ ಹಾಗೂ ಅಡಿಕೆಯಲ್ಲಿ ಸಾಮ್ಯತೆ ಇದೆಯೇ ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಲು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರಬ್ಬರ್ ಬೋರ್ಡ್ ಆಡಳಿತ ನಿರ್ದೇಶಕ ವಸಂತಗೇಸನ್ ಹಾಗೂ ಚಯರ್‌ಮೆನ್ ಡಾ.ಸಾವರ್ ದನಾನಿಯಾ ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಅಧ್ಯಯನಕ್ಕೆ ಉತ್ಸಾಹ ತೋರಿದ್ದಾರೆ.
ಉತ್ತರ ಕೇರಳ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಪ್ರದೇಶದ ಕೃಷಿಕರು ಮುಖ್ಯವಾಗಿ ಅಡಿಕೆ ಮತ್ತು ರಬ್ಬರ್ ಬೆಳೆಯುತ್ತಾರೆ. ಅಡಿಕೆಯಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಕೊಳೆರೋಗ ಒಂದು. ಇದನ್ನು ನಿಯಂತ್ರಿಸಲು ಬೋರ್ಡೋ ಸ್ಪ್ರೇ ಅನ್ನು ಶಿಫಾರಸು ಮಾಡಲಾಗಿದೆ.
ಆದರೆ ಕೆಲವು ವರ್ಷಗಳಿಂದ, ಅಡಿಕೆಯಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಈ ರೋಗದಿಂದ ತಕ್ಷಣವೇ ಅಡಿಕೆ ಮರಗಳೂ ಸಾಯುತ್ತಿರುವುದು ಕಂಡುಬಂದಿದೆ. ಇದರ ಜೊತೆಗೆ ಹಳದಿ ಎಲೆರೋಗ ಕೂಡಾ ಇನ್ನೊಂದು ಸಮಸ್ಯೆಯಾಗಿದೆ. ಇದಕ್ಕೆ ಯಾವುದೇ ಪರಿಹಾರವಿಲ್ಲ.
ಎಲೆಚುಕ್ಕಿ ರೋಗ ಮತ್ತು ಕೊಳೆರೋಗ ಎರಡೂ ಕೂಡಾ ರಬ್ಬರ್ ಹಾಗೂ ಅಡಿಕೆ ತೋಟದಲ್ಲಿ ಸಾಮಾನ್ಯವಾಗಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಹೀಗಾಗಿ ಈಗ ಈ ವೈರಸ್‌ಗಳು ಪರಸ್ಪರ ಸಂಪರ್ಕ ಹೊಂದಿವೆಯೇ?, ಇವುಗಳನ್ನು ಸೃಷ್ಟಿಸುವ ಶಿಲೀಂಧ್ರ/ಬ್ಯಾಕ್ಟೀರಿಯಾ/ವೈರಸ್ ಒಂದೇ ರೀತಿಯ ಅಥವಾ ಸಾಮಾನ್ಯವೇ?, ಸಮಸ್ಯೆಗಳು ರಬ್ಬರ್ ಮತ್ತು ಅಡಿಕೆ ಎರಡರಲ್ಲೂ ಕಂಡುಬರುವುದರಿಂದ, ಇದು ರಬ್ಬರ್ ತೋಟದಿಂದ ಅಡಿಕೆಗೆ ಹರಡುತ್ತದೆಯೇ ? ಎಂಬ ಪ್ರಶ್ನೆಗಳು ಇವೆ. ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಯ ಅಗತ್ಯ ಇದೆ ಎಂದು ಮುಳಿಯ ಕೇಶವ ಭಟ್ ಅವರು ಹೇಳಿದ್ದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…