Advertisement
MIRROR FOCUS

ಅಡಿಕೆ ಬೆಳೆಗಾರರಿಗೆ ಆಶಾದಾಯಕ ಸುದ್ದಿ | ಅಡಿಕೆಯ ಔಷಧೀಯ ಮೌಲ್ಯಗಳ ಕುರಿತು ಅಧ್ಯಯನದ ಬಗ್ಗೆ ಕ್ರಮ | ಕಾಸರಗೋಡು ಸಂಸದರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ |

Share

ಅಡಿಕೆ ಕ್ಯಾನ್ಸರ್‌ಕಾರಕ ಎಂಬ WHO ವರದಿಯ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಕಾಸರಗೋಡು ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ಲೋಕಸಭೆಯಲ್ಲಿ ಕೇಳಿದ ಲಿಖಿತ ಪ್ರಶ್ನೆಗೆ ಕೃಷಿ ಸಚಿವಾಲಯ ಉತ್ತರ ನೀಡಿದ್ದು, ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ಮಾಡುವುದಾಗಿ ಸಚಿವಾಲಯವು ಲಿಖಿತವಾಗಿ ತಿಳಿಸಿದೆ.

Advertisement
Advertisement
ರಾಜಮೋಹನ್‌ ಉಣ್ಣಿತ್ತಾನ್

ಅಡಿಕೆಯ ಆರೋಗ್ಯದ ಪರಿಣಾಮಗಳ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಭಗೀರಥ ಚೌಧರಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಆಸಕ್ತಿ  ಆಸಕ್ತಿ ಹೊಂದಿದೆ. “ಅಡಿಕೆಯ ಕುರಿತು ವೈಜ್ಞಾನಿಕ ಸಂಶೋಧನೆ ಮತ್ತು ಮಾನವ ಆರೋಗ್ಯ” ಎಂಬ ಶೀರ್ಷಿಕೆಯಲ್ಲಿ ಅಧ್ಯಯನವನ್ನು ಕೈಗೊಳ್ಳಲು ಯೋಜಿಸಲಾಗಿದೆ. ಈ ಅಧ್ಯಯನವು ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS) ಸೇರಿದಂತೆ ವೈದ್ಯಕೀಯ ಸಂಶೋಧನೆಯೊಂದಿಗೆ ಇತರ ಸಂಸ್ಥೆಗಳು ಅಡಿಕೆಯ ಪರಿಣಾಮದ ಕುರಿತು ವಿವರವಾದ ಸಂಶೋಧನೆ ನಡೆಸಲಿದ್ದಾರೆ ಎಂದು ಲಿಖಿತ ಉತ್ತರ ನೀಡಲಾಗಿದೆ.

Advertisement

ಅಡಿಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಹೇಳಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಅಡಿಕೆಯ ಆರೋಗ್ಯದ ಪರಿಣಾಮಗಳ ಕುರಿತು ಕೆಲವು ಸಂಶೋಧನಾ ಪ್ರಬಂಧಗಳಲ್ಲಿ ಕೆಲವು ಮಿತಿಗಳನ್ನು ಹೊಂದಿದೆ. ಹೀಗಾಗಿ ಆಗಾಗ ಕೆಲವು ವಿರೋಧವಾದ ವರದಿಗಳಿಗೆ ಕಾರಣವಾಗಿದೆ. ಈ ಕಾರಣದಿಂದ ಇನ್ನೊಮ್ಮೆ ಪ್ರತ್ಯೇಕವಾದ ಅಧ್ಯಯನ ನಡೆಯಲಿದೆ.  ಹೆಚ್ಚಿನ ಅಧ್ಯಯನಗಳು ಹುಡಿ ಅಡಿಕೆ(ಕ್ವಿಡ್) ಮತ್ತ ಗುಟ್ಕಾದಂತಹ ಮಿಶ್ರಣಗಳ ಆರೋಗ್ಯದ ಪರಿಣಾಮಗಳ ಮೇಲೆ ಕೇಂದ್ರೀಕರಿಸಿದೆ, ಇಲ್ಲಿ‌ ಇತರ ಪದಾರ್ಥಗಳೊಂದಿಗೆ ಅಡಿಕೆ ಒಳಗೊಂಡಿರುತ್ತದೆ. ಈ ಅಧ್ಯಯನಗಳು, ಮಾನವನ ಆರೋಗ್ಯದ ಮೇಲೆ ಅಡಿಕೆಯ ಪ್ರತ್ಯೇಕ  ಸೇವನೆಯ  ಪರಿಣಾಮಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತದೆ.

2023 ರ ನವೆಂಬರ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) – ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPCRI), ಕಾಸರಗೋಡು, ಕೈಗೊಂಡಿರುವ ಅಧ್ಯಯನದ ಪ್ರಕಾರ  ಅಡಿಕೆಯಲ್ಲಿ ಅರೆಕೊಲೈನ್ ಇರುವ ಬಗ್ಗೆ ವರದಿಗಳು ಬಹಿರಂಗಪಡಿಸಿದೆ. ಈ ಪ್ರಯೋಗಗಳಲ್ಲಿ ಬಳಸಲಾದ ಅರೆಕೋಲಿನ್ ಡೋಸೇಜ್ ಸಾಮಾನ್ಯ ಚೂಯಿಂಗ್ ಸಮಯದಲ್ಲಿ ಬಿಡುಗಡೆಯಾದ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ ಎಂದು ಅಧ್ಯಯನ ಹೇಳಿತ್ತು. ಆದರೆ ಅರೆಕೋಲಿನ್ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿದರೆ ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಸಂಶೋಧನಾ ವರದಿ ಇದೆ ಎಂದು ಸಿಪಿಸಿಆರ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು  ಅವರು ಉತ್ತರದಲ್ಲಿ ಹೇಳಿದರು.

Advertisement

ಭಾರತದಲ್ಲಿನ ಎಲ್ಲಾ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಡಿಕೆಯು ಪ್ರಮುಖ ಸ್ಥಾನವನ್ನು ಪಡೆದಿದೆ, ಆಯುರ್ವೇದಗಳಲ್ಲೂ ಅಡಿಕೆಯ ಔಷಧಿ ಬಳಕೆಯಾಗುತ್ತದೆ ಎಂದು ಸಚಿವಾಲಯವು ಹೇಳಿದೆ. ಅದರ ಜೊತೆಗೆ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ  ಬಳಸಲಾಗುತ್ತದೆ,  ಸಾಂಪ್ರದಾಯಿಕವಾಗಿ ಇದನ್ನು ಆಹಾರದ ನಂತರ “ತಾಂಬೂಲ” ಎಂದು ಬಳಸಲಾಗುತ್ತದೆ ಎಂದು ಸಚಿವಾಲಯವು ಉತ್ತರದಲ್ಲಿ ಉಲ್ಲೇಖಿಸಿದೆ.

ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಹಣೆಪಟ್ಟಿಯಿಂದ ಹೊರತರಲು ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಕಳೆದ ಕೆಲವು ಸಮಯಗಳಿಂದ ಪ್ರಯತ್ನದಲ್ಲಿದೆ. ಈ ಬಗ್ಗೆ ಈಗಾಗಲೇ ಸಂಬಂಧಿತ ಸಚಿವರುಗಳಿಗೆ, ಸರ್ಕಾರವನ್ನು ಒತ್ತಾಯಿಸಿದೆ. ಪತ್ರದ ಮೂಲಕ WHO ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

Advertisement

A systematic review of the available literature was conducted by multiinstitutional stakeholders at Indian Council of Agricultural Research (ICAR)-Central Plantation Crops Research Institute, Kasaragod in November 2023. This review revealed that the arecoline (alkaloid in arecanut) dosage used in these experiments was of a higher concentration compared to that released during normal chewing. Some studies have also revealed that arecoline, in lesser doses, has been found to inhibit tumour growth.

To address the knowledge gap and provide conclusive evidence on the health effects of arecanut, the Ministry of Agriculture and Farmers Welfare has planned to undertake a study titled “Evidence-Based Research on Arecanut and Human Health.” This study brings together around 16 national and state-level agencies dealing with medical research, including All India Institute of Medical Science (AIIMS), Council for Scientific and Industrial Research (CSIR)-Centre for cellular and Molecular Biology (CCMB), Indian Institute of Science (IISc), and others, to conduct
detailed research on the effect of arecanut on human health.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 04.12.2024 | ಕರಾವಳಿ ಜಿಲ್ಲೆಗಳಲ್ಲಿ ಡಿ.9ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ|

05.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 hours ago

ಕೃಷಿ ಕ್ಷೇತ್ರದತ್ತ ಯುವಕರ ಆಕರ್ಷಣೆಗೆ ತಂತ್ರಜ್ಞಾನದ ಬಳಕೆ ಅಗತ್ಯ

ಕೃಷಿಯಲ್ಲಿ  ತಂತ್ರಜ್ಞಾನವನ್ನು ಅಗತ್ಯಕ್ಕೆ  ತಕ್ಕಂತೆ  ಬಳಸಿಕೊಳ್ಳುವ ಮೂಲಕ ಅದರ ಪ್ರಯೋಜನ  ರೈತರಿಗೆ  ಸಿಗುವಂತೆ…

8 hours ago

ದಾವಣಗೆರೆಯಲ್ಲಿ ಮರಳು ನೀತಿ ಅನುಷ್ಟಾನಗೊಳಿಸುವಂತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್  ಸೂಚನೆ

ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ…

8 hours ago

ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ

ಲಿವ್-ಇನ್-ರಿಲೇಶನ್‍ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು…

17 hours ago

ಹವಾಮಾನ ವರದಿ | 03-12-2024 | ಕರಾವಳಿ ಜಿಲ್ಲೆಗಳಲ್ಲಿ ಡಿ. 8 ರ ತನಕ ಅಲ್ಲಲ್ಲಿ ಮಳೆ | ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣ |

ಫೆಂಗಲ್ ಚಂಡಮಾರುತವು ಈಗಾಗಲೇ ದುರ್ಬಲಗೊಂಡು ಅರಬ್ಬಿ ಸಮುದ್ರ ಪ್ರವೇಶಿಸಿದೆ ಮತ್ತು ಮುಂದೆ ಪಶ್ಚಿಮಾಭಿಮುಖವಾಗಿ…

1 day ago

ಕರಾವಳಿ ವ್ಯಾಪಾರ ಉತ್ತೇಜಿಸಲು ಪ್ರಯತ್ನಿಸುವ ಮಸೂದೆಗಳು ಲೋಕಸಭೆಯಲ್ಲಿ ಮಂಡನೆ |

ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ  ಸೋನೋವಾಲ್  ಕರಾವಳಿ ನೌಕಾಯಾನ…

1 day ago