The Rural Mirror ವಾರದ ವಿಶೇಷ

ಮಲೆನಾಡು ಗಿಡ್ಡ ಗೋತಳಿ | ವೈಜ್ಞಾನಿಕ ಅಧ್ಯಯನ ಕೇಳಿದರೆ ಅಚ್ಚರಿಯಾಗುತ್ತದೆ…! | ಮಲೆನಾಡು ಗಿಡ್ಡ ತಳಿಯ ಹಾಲು ಬರೀ ಹಾಲಲ್ಲ… ಅದು ಅಮೃತ…! |

Share

ಈಗ ಎಲ್ಲೆಡೆಯೂ ದೇಸೀ ಗೋತಳಿ ಸಂರಕ್ಷಣೆ, ಅಭಿವೃದ್ಧಿಯ ಮಾತುಗಳು. ಅದರ ವೈಜ್ಞಾನಿಕ ಅಧ್ಯಯನಗಳನ್ನು ತಿಳಿದುಕೊಂಡರೆ ಈ ಗೋವನ್ನು ಸಾಕದೇ ಇರಲಾರರು. ಪ್ರತೀ ಮನೆಗೊಂದು ಗೋವು ಸಾಕುವುದು ಕಷ್ಟವೂ ಆಗದು. ಮಲೆನಾಡು ಗಿಡ್ಡ ತಳಿಯ ಗೋವಿನ ಹಾಲಿನ ಮಹತ್ವದ ಬಗ್ಗೆ, ಅದರ ವೈಜ್ಞಾನಿಕ ಅಧ್ಯಯನದ ಬಗ್ಗೆ ರಾಷ್ಟ್ರೀಯ ಹೈನುಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಕೆ.ಪಿ ರಮೇಶ್‌ ಅವರು ಮಾಹಿತಿ ನೀಡಿದ್ದಾರೆ.ಅವರು ಹೇಳಿರುವ ಮಾಹಿತಿ ಇಲ್ಲಿದೆ…

Advertisement

ಮಲೆನಾಡು ಗಿಡ್ಡ ತಳಿಯು ಒಂದು ವಿಶಿಷ್ಟವಾದ ತಳಿಯಾಗಿದೆ. ಇದು ಗಾತ್ರದಲ್ಲಿ ಸಣ್ಣದು, ಎತ್ತರವೂ ಅಷ್ಟೇನಿಲ್ಲ.ತೂಕವೂ ಇಲ್ಲ. ಇಲ್ಲಿನ  ಭೌಗೋಳಿಕ ವಾತಾವರಣಕ್ಕೆ ಈ ಹಸು ಹೊಂದಿಕೊಂಡು ಇದೆ. ಹೀಗಾಗಿ ಈ ದನದ ಹಾಲು ಸರ್ವಶ್ರೇಷ್ಟವಾಗಿದೆ. ಅತೀ ಮುಖ್ಯವಾಗಿ ಈ ಗೋವಿನ ಹಾಲಿನಲ್ಲಿ ಇರುವ ಲ್ಯಾಕ್ಟೋ ಫೆರಿನ್‌ ಎಂಬ ಅಂಶ ಇದೆ,  ಇದು ಮೆದುಳು ಬೆಳವಣಿಗೆಗೆ ಪ್ರಮುಖವಾದ ಕಾರಣವಾಗುತ್ತದೆ.

ಒಂದು ಎಂಎಲ್‌ ಹಾಲಿನಲ್ಲಿ ಇರುವ ಲ್ಯಾಕ್ಟೋಫೆರಿನ್‌ ಅತ್ಯಂತ ಅಧಿಕ ಇರುವುದು ಕಂಡುಬಂದಿದೆ. ಇದು ವಿದೇಶಿ ತಳಿಯ ಹಸುವಿನ ಹಾಲಿನಲ್ಲೂ ಇರುತ್ತದೆ. ಆದರೆ ಮಲೆನಾಡು ತಳಿಯಲ್ಲಿ ಇದ್ದಷ್ಟು ಇರುವುದಿಲ್ಲ.

ಯಾವತ್ತೂ  ತಾಯಿ ಹಾಲು ಸರ್ವಶ್ರೇಷ್ಟ. ಅದರಲ್ಲಿ ಇರುವ ಲ್ಯಾಕ್ಟೋಫೆರಿನ್‌ ಮಕ್ಕಳ ಮೆದುಳಿನ ಬೆಳವಣಿಗೆಗೆ ಕಾರಣವಾಗುತ್ತದೆ. ಅದು ಬಿಟ್ಟರೆ ಮಲೆನಾಡು ತಳಿಯ ಹಸುವಿನ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಈ ಹಾಲು ಸರ್ವಶ್ರೇಷ್ಟವಾಗಿದೆ.

ಯಾವಾಗಲೂ ದೇಸೀ ತಳಿಯ ದನದ ಹಾಲು ಸ್ವಲ್ಪ ಹಳದಿ ಬಣ್ಣದಿಂದ ಇರುತ್ತದೆ. ಇದು ಕೂಡಾ ಮಹತ್ವ ಇದೆ. ಈ ಗುಣವು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಡಿ3 ವಿಟಮಿನ್ ಸೇರಿದಂತೆ ಸುಮಾರು 12 ಬಗೆಯ ವಿಟಮಿನ್‌ಗಳು ಇರುತ್ತದೆ. 4 ಅಂಶಗಳು ಕೊಬ್ಬಿನಲ್ಲಿ ಕರಗುವ ವಿಟಮಿನ್‌ ಕೂಡಾ ಇದೆ. ಇದೆಲ್ಲಾ ದೇಹಕ್ಕೆ ಅಗತ್ಯವಾಗಿದೆ.

ವಿಶೇಷವಾಗಿ ಮಲಗುವ ಮುನ್ನ ಅನೇಕರು ಹಾಲು ಕುಡಿಯುತ್ತಾರೆ. ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಶಾಂತವಾಗಿ ನಿದ್ರೆ ಬರುತ್ತದೆ. ಇದಕ್ಕೆ ಕಾರಣ ಕ್ರಿಪ್ಟೋಫಯನಾನ್‌ ಎನ್ನುವ ಅಂಶ ಇರುವುದರಿಂದ ದೇಹಕ್ಕೆ ಆರಾಮ ಆಗುತ್ತದೆ, ಅಂದರೆ ಅದರಿಂದ ದೇಹದಲ್ಲಿ ಸ್ಯಾಟಿಟಿ ಎನ್ನುವ ಹಾರ್ಮೋನ್‌ ಬಿಡುಗಡೆಯಾಗಿ  ಶಾಂತವಾಗಿ ನಿದ್ರೆ ಬರಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲ, ದೇಹದ ನಿಯಂತ್ರಣಕ್ಕೂ ಈ ಹಾಲು ಉತ್ತಮವಾಗಿದೆ.ದೇಸೀ ತಳಿಯ ಹಾಲಿನ  ಬಳಕೆಯಿಂದ ಆರೋಗ್ಯ ಸ್ಥಿರತೆ ಸಾಧ್ಯವಾಗುತ್ತದೆ. ಹಾಲು, ಮೊಸರು, ತುಪ್ಪ ಎಲ್ಲವನ್ನೂ ಮಿತಿಯಲ್ಲಿ ಉಪಯೋಗ ಮಾಡುವುದರಿಂದ  ಆರೋಗ್ಯ ಸುಧಾರಣೆಯಾಗುತ್ತದೆ. ಹೃದಯದ ಆರೋಗ್ಯವೂ ಸುಧಾರಣೆಯಾಗುತ್ತದೆ.  ಹೀಗೆ ಬಳಕೆ ಮಾಡಿದರೆ ಕ್ಯಾಲ್ಸಿಯಂ, ಪೋಷಕಾಂಶಗಳು ಸರಿಯಾಗಿ ದೇಹಕ್ಕೂ ಸಿಗುತ್ತದೆ.ಮಲೆ ನಾಡು ಗಿಡ್ಡ ತಳಿಯ ಹಾಲು  ವಿಶೇಷವಾಗಿ ಮಕ್ಕಳ ಮೆದುಳು ಬೆಳವಣಿಗೆಗೆ , ವಯೋವೃದ್ಧರಿಗೂ ಮೂಳೆ ಗಟ್ಟಿನತಕ್ಕೂ ಇದು ಉತ್ತಮ.

ದೇಸೀ ದನದ ಹಾಲಿನ ಹೊರತಾದ ಇತರ ಹಸುವಿನ ಹಾಲಿನಲ್ಲೂ ಈ ಎಲ್ಲಾ ಅಂಶಗಳೂ ಇದೆ. ಆದರೆ  ಮಲೆನಾಡು ಗಿಡ್ಡ ತಳಿಯ ಹಸುವಿನಲ್ಲಿ ಮಾತ್ರಾ ಹೆಚ್ಚಿದೆ. ಏಕೆಂದರೆ ಈ ಹಸುಗಳು ಕಾಡಿಗೆ ಹೋಗಿ ಮೇಯ್ದು ಬರುವುದರಿಂದ ಮಲೆನಾಡು ಗಿಡ್ಡ ಹಸು ಉತ್ತಮವಾಗಿದೆ. ವಿವಿಧ ಗಿಡಗಳ ಔಷಧಿಯೂ ಸಿಗುತ್ತದೆ. ಹಾಗಾಗಿ ದೇಸೀ ದನವನು ಕಟ್ಟು ಸಾಕುವುದರಿಂದ ಹಾಲಿನ ಕ್ವಾಲಿಟಿ ಕಡಿಮೆಯಾಗುತ್ತದೆ.

ಭಾರತೀಯ ಇತರ ತಳಿಗಳನ್ನು ನಾವು ಸಾಕಬೇಕಾಗಿಲ್ಲ. ದೇಸೀ ತಳಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ದೇಹದ ವ್ಯವಸ್ಥೆ ಬದಲಾಯಿಸಿವೆ. ಆಯಾ ವಾತಾವರಣ, ಭೌಗೋಳಿಕ ವ್ಯವಸ್ಥೆಗೆ ಹಸುಗಳು ಬೆಳೆದಿದೆ. ಮಲೆನಾಡು ಭಾಗಕ್ಕೆ ಮಲೆನಾಡು ಗಿಡ್ಡ ತಳಿಯೇ ಸೂಕ್ತ. ಆಯಾಯ ವಾತಾವರಣಕ್ಕೆ ಆಯಾಯ ತಳಿ ಇದೆ. ಅದೇ ಸೂಕ್ತವಾಗಿದೆ.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

6 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

7 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

17 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

17 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

17 hours ago