ಇನ್ನು ದೇಶದಲ್ಲಿ ಈರುಳ್ಳಿ ಕೊರತೆ ಇರಲ್ಲ| ಎರಡೂ ಹಂಗಾಮಿನಲ್ಲಿ ಬೆಳೆಯ 93 ಹೊಸ ತಳಿಯ ಬೀಜ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು |

April 16, 2024
1:13 PM

ಮಾರುಕಟ್ಟೆಯಲ್ಲಿ(Market) ಒಂದಲ್ಲ ಒಂದು ದಿನ ಬಳಕೆ ವಸ್ತು ಅಥವಾ ತರಕಾರಿಗಳ(Vegetable) ಬೆಲೆ ಏರುತ್ತಲೇ(Price hike) ಇರುತ್ತದೆ. ಯಾವಾಗ ಒಂದು ಬೆಳೆದ ಬೆಳೆ ಉತ್ಪಾದನೆ(Production) ಕಡಿಮೆಯಾಗಿ ಬೇಡಿಕೆ(demand) ಜಾಸ್ತಿಯಾಗುತ್ತದೋ ಆಗ ಬೆಲೆ ಏರಿಕೆ ಆರಂಭವಾಗುತ್ತದೆ. ಇದರ ಸಾಲಿನಲ್ಲಿ ಟೊಮೆಟೋ(Tomato), ಈರುಳ್ಳಿ(Onion), ಬೆಳ್ಳಿಳ್ಳಿ(Garlic) ಸರ್ವೆ ಸಾಮಾನ್ಯ. ಹಾಗೆ ಇವು  ದಿನಬಳಕೆಯ ಅಗತ್ಯ ವಸ್ತುಗಳು ಹೌದು. ಇದೀಗ ಈರುಳ್ಳಿ ಸಮಸ್ಯೆಯನ್ನು ನೀಗಿಸಲು ಉತ್ತರಪ್ರದೇಶದ(Uttar Pradesh) ಕಾನ್ಪುರ ವಿವಿಯ(Kanpur University) ವಿಜ್ಞಾನಿಗಳು(Scientist) ಹೊಸ ಉಪಾಯವನ್ನು ಕಂಡು ಹಿಡಿದಿದ್ದಾರೆ. ಇದರಿಂದ ಪ್ರತಿವರ್ಷ ತಲೆದೋರುವ ಈರುಳ್ಳಿ ಕೊರತೆಯನ್ನು ಇಲ್ಲವಾಗಿಸಲು ಮುಂದಾಗಿದ್ದಾರೆ. ಕಾನ್ಪುರದ ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 93 ಹೊಸ ತಳಿಯ(New Breed) ಈರುಳ್ಳಿ ಬೀಜಗಳನ್ನು(Onion seed) ಅಭಿವೃದ್ಧಿಪಡಿಸಿದ್ದಾರೆ.

Advertisement
Advertisement

ಇವುಗಳಲ್ಲಿ ವಿವಿಧ ಜಾತಿಯ ಕೆಂಪು ಮತ್ತು ಬಿಳಿ ಈರುಳ್ಳಿಯ ಬೀಜಗಳೂ ಇವೆ. ಇವುಗಳನ್ನು ಸರ್ವಕಾಲಕ್ಕೂ ಬೆಳೆಯಬಹುದಾಗಿದ್ದು, ದೇಶದಲ್ಲಿ ಪ್ರತಿ ವರ್ಷ ಎದುರಾಗುವ ಈರುಳ್ಳಿ ಕೊರತೆ ನೀಗಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬೀಜಗಳನ್ನು ದೇಶಾದ್ಯಂತ ಎಲ್ಲ ರೈತರಿಗೆ ಒದಗಿಸಲಾಗುವುದು, ಎರಡೂ ಹಂಗಾಮಿನಲ್ಲಿ (ರಬಿ ಮತ್ತು ಖಾರಿಫ್) ಇವನ್ನು ಬೆಳೆಯಬಹುದು ಎಂದು ಹೇಳಿದ್ದಾರೆ. ದೇಶದಲ್ಲಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವುದು ತೀರಾ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಈರುಳ್ಳಿ ತಳಿಗಳನ್ನು ಶೋಧಿಸಲಾಗಿದೆ. ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಖಾರಿಫ್ ಋತುವಿನಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಯುಪಿಯಲ್ಲಿ ಅದು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಪ್ರತಿ ವರ್ಷ ಇದೇ ಕಾರಣಕ್ಕಾಗಿ ಅಕ್ಟೋಬರ್- ನವೆಂಬರ್​ನಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ.ರಾಮ್ ಬಟುಕ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಭಿವೃದ್ಧಿಪಡಿಸಿದ್ದು ಹೀಗೆ:ಅಭಿವೃದ್ಧಿಪಡಿಸಲಾದ 93 ಬಗೆಯ ಈರುಳ್ಳಿ ಬೀಜಗಳನ್ನು ವಿಜ್ಞಾನಿಗಳು ರಬಿ ಋತುವಿನ ಫೆಬ್ರವರಿ – ಮಾರ್ಚ್‌ನಲ್ಲಿ ಬಿತ್ತನೆ ಮಾಡಿದರು. ಬೆಳೆ ಕೇವಲ 25 ದಿನಗಳಲ್ಲಿ ಕಟಾವಿಗೆ ಬಂದವು. ಅದರಂತೆ ಅಕ್ಟೋಬರ್- ನವೆಂಬರ್​ನಲ್ಲೂ ನೆಟ್ಟು ಪ್ರಯೋಗ ನಡೆಸಿದರು. ಉತ್ತಮ ಬೆಳೆ ಬಂದ ಹಿನ್ನೆಲೆಯಲ್ಲಿ ರೈತರು ಎರಡೂ ಹಂಗಾಮಿನಲ್ಲಿ ಬೆಳೆಯಬಹುದು ಎಂದು ವಿಜ್ಞಾನಿಗಳು ಕಂಡುಕೊಂಡರು. ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರಭೇದಗಳ ಬೀಜಗಳು ಪ್ರತಿ ಋತುವಿಗೂ ಸೂಕ್ತವಾಗಿವೆ. ಕೀಟಗಳು ಮತ್ತು ರೋಗ ನಿರೋಧಕ ಶಕ್ತಿಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಹೊಸ ತಳಿಯ 1 ಕಿಲೋ ಬೀಜದ ಬೆಲೆ ಎಷ್ಟು?: ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ ರೈತರು ಈ ಹೊಸ ಈರುಳ್ಳಿ ತಳಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಇವುಗಳನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಪಾವತಿ ಮಾಡಿದ ನಂತರ, ಬೀಜಗಳನ್ನು ಸಂಬಂಧಪಟ್ಟ ರೈತರ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹೊಸ ಈರುಳ್ಳಿ ತಳಿಯ ಬೀಜದ ಬೆಲೆ ಪ್ರಸ್ತುತ ಕೆಜಿಗೆ 2,500 ರಿಂದ 3,500 ರೂಪಾಯಿ ಇದೆ. ಇದೇ ವೇಳೆ, ಭಾರತದಲ್ಲಿ ಪ್ರತಿ ವರ್ಷ 26,738 ಮೆಟ್ರಿಕ್ ಟನ್ ಈರುಳ್ಳಿ ಉತ್ಪಾದನೆಯಾಗುತ್ತದೆ.

Advertisement

Source : Agriculture Post

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |
April 29, 2024
3:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror