ಕಳೆದ ಮೂರು ವರ್ಷಗಳಿಂದ ಕೊರೋನಾ ಸೇರಿದಂತೆ ಹಲವಾರು ರೋಗಗಳಿಂದ ಜನತೆ ಕಂಗಲಾಗಿದ್ದಾರೆ.ಈಗ ಚಿಂತೆ ಮಾಡಿರುವುದು ಸ್ಕ್ರಬ್ ಟೈಫಸ್ ಎಂದು ಕರೆಯಲ್ಪಡುವ ಜ್ವರ. ಮನುಷ್ಯ, ಮತ್ತು ದನಕರುಗಳಲ್ಲಿ ಕೂಡ ವಿಚಿತ್ರ ರೋಗಗಳು ಕಂಡು ಬಂದಿದ್ದು, ಎಲ್ಲರನ್ನೂ ಕಾಡುತ್ತಿವೆ.ತಿರುಚನಾಪಳ್ಳಿಯಲ್ಲಿ ಈ ಜ್ವರ ಈ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಲೆಬಿಸಿ ಮಾಡಿದೆ. ಸದ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಆದರೂ ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.
ಈ ಜ್ವರ ದೀರ್ಘಕಾಲದವರೆಗೆ ಮುಂದುವರಿದರೆ. ಇದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಜ್ವರದಿಂದ ಬಳಲುತ್ತಿರುವ ಜನರನ್ನು ದೆಹಲಿಯಲ್ಲಿ ಗುರುತಿಸಲಾಗಿದೆ. ಕೀಟಾಣು ಕಡಿತದಿಂದ ಗೋಚರಿಸುವ ಚಿಹ್ನೆ ಅಥವಾ ಕಲೆಗಳನ್ನು ಎಚ್ಚರಿಕೆಯ ಸಂಕೇತ ಎಂದು ಹೇಳಲಾಗುತ್ತದೆ. ಸ್ಕ್ರಬ್ ಟೈಪಸ್ ಒಂದು ವಿಶಿಷ್ಟ ಕಾಯಿಲೆಯಾಗಿದೆ. ಸ್ಕ್ರಬ್ ಟೈಫಸ್ ನ ರೋಗಲಕ್ಷಣಗಳು ಡೆಂಗ್ಯೂವಿನಂತಿದ್ದು, ಇದರಿಂದ ಬಳಲುತ್ತಿರುವ ರೋಗಿಯ ದೇಹದ ಮೇಲೆ ಕಲೆಗಳನ್ನು ಕಾಣಬಹುದಾಗಿದೆ. ಈ ಜ್ವರ ಬಾಧೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗುತ್ತವೆ. ಜ್ವರವು ಸಾಮಾನ್ಯವಾಗಿ ಏಳು ದಿನಗಳವರೆಗೆ ಇರುತ್ತದೆ. ಕೆಲವು ರೋಗಿಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ಬಹು-ಅಂಗಾಂಗ ವೈಫಲ್ಯ ಸಂಭವಿಸುವ ಸಾಧ್ಯತೆಯಿದೆ ಎನ್ನುವುದು ವೈದ್ಯರ ಎಚ್ಚರಿಕೆಗಳು.
ಸ್ಕ್ರಬ್ ಟೈಫಸ್ ಅನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ, ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಸ್ಕ್ರಬ್ ಟೈಫಸ್ ಸೋಂಕಿತ ಲಾರ್ವಾ ಹುಳಗಳು ಕಡಿತದ ಮೂಲಕ ಜನರಿಗೆ ಹರಡುತ್ತದೆ. ಸ್ಕ್ರಬ್ ಟೈಫಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ದೇಹದ ನೋವು.
ಜನವರಿಯಿಂದ ಸುಮಾರು 10 ಸ್ಕ್ರಬ್ ಟೈಫಸ್ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ತಿರುಚನಾಪಳ್ಳಿಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವು ತಿಂಗಳ ಹಿಂದೆ ಜ್ವರ ರೋಗಿಗಳ ವಿಶೇಷ ತಪಾಸಣೆಯ ಸಂದರ್ಭದಲ್ಲಿ ಐದು ಪ್ರಕರಣಗಳು ಪತ್ತೆಯಾದ ನಂತರ ಈ ರೋಗವು ಗಮನ ಸೆಳೆಯಿತು. ಹಿರಿಯ ಅಧಿಕಾರಿಗಳ ಪ್ರಕಾರ, ಜನವರಿಯಿಂದ ಸುಮಾರು 10 ಸ್ಕ್ರಬ್ ಟೈಫಸ್ ಪ್ರಕರಣಗಳು ವರದಿಯಾಗಿದ್ದು, ರೋಗದ ಲಕ್ಷಣಗಳನ್ನು ಹೊಂದಿರುವ ಆರು ರೋಗಿಗಳು ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.