ಕೇರಳದ ತಿರುವನಂತಪುರಂನ ಪೆರುಮಥುರಾದಲ್ಲಿ ಹೊಸ ಜಾತಿಯ ಸಮುದ್ರ ಹಾವು ಹೈಡೋಪಿಸ್ ಗ್ರ‍್ಯಾಸಿಲಿಸ್ ಪತ್ತೆಯಾಗಿದೆ. ತಿರುವನಂತಪುರಂ ಮೂಲದ ಎನ್‌ಜಿಒ ವಾರ್ಬ್ಲರ್ಸ್ ಮತ್ತು ವೇಡರ್ಸ್ ನಡೆಸಿದ ವಾರ್ಷಿಕ ವಾಟರ್ ಬರ್ಡ್ ಗಣತಿಯಲ್ಲಿ ಸಮುದ್ರ ಹಾವು ಕಾಣಿಸಿಕೊಂಡಿದೆ. ಹರ್ಪಿಟಾಲಜಿಸ್ಟ್ ಗಳಾದ ಸಂದೀಪ್ ದಾಸ್, ಜಾಫರ್ ಪಲೋಟ್ ಮತ್ತು ವಿವೇಕ್ ಶರ್ಮಾ ಅವರು ಹಾವಿನ ಗುರುತನ್ನು ಖಚಿತಪಡಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ಜಾತಿಯ ಸಮುದ್ರ ಹಾವು ಕಾಣಿಸಿಕೊಂಡಿದೆ. ಭಾರತದ ಕರಾವಳಿಯಲ್ಲಿ ಕಂಡುಬರುವ 26 ಜಾತಿಯ ಸಮುದ್ರ ಹಾವುಗಳಲ್ಲಿ ಇದು ಒಂದಾಗಿದ್ದರೂ, ಇದು ಅಪರೂಪವಾಗಿದೆ. ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಈ ಹಾವನ್ನು ನೋಡಿದ ಯಾವುದೇ ದಾಖಲೆಗಳಿಲ್ಲ ಎಂದು ಜಲಪಕ್ಷಿ ಗಣತಿಯ ಸಂಯೋಜಕ ಸಿ ಸುಶಾಂತ್ ಹೇಳಿದ್ದಾರೆ.
ಸಾಮಾನ್ಯವಾಗಿ ಗ್ರೇಸ್‌ಪುಲ್ ಸ್ಮಾಲ್-ಹೆಡೆಡ್ ಸೀ ಸ್ನೇಕ್ ಅಥವಾ ಸ್ಲೆಂಡರ್ ಸೀ ಸ್ನೇಕ್ ಎಂದು ಕರೆಯಲ್ಪಡುವ ಈ ಹಾಗೂ ಅಪಾಯಕಾರಿಯಾಗಿದೆ. ಹೆಚ್ಚು ವಿಷಕಾರಿಯಾಗಿದೆ. ಈ ಹೈಡ್ರೋಪಿಸ್ ಗ್ರ‍್ಯಾಸಿಲಿಸ್ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ, ಪರ್ಷಿಯನ್ ಕೊಲ್ಲಿ ಮತ್ತು ದಕ್ಷಿಣ ಚೀನಾ ಸಮುದ್ರದ ಕರಾವಳಿ ನೀರಿನಲ್ಲಿ ಕಂಡುಬರುತ್ತದೆ. ಹಾವಿನ ವಿಶಿಷ್ಟ ಲಕ್ಷಣವೆಂದರೆ ಚಿಕ್ಕ, ಆದರೆ ದೊಡ್ಡ ಹೊಟ್ಟೆ ಇರುತ್ತದೆ ಎಂದು ಹರ್ಪಿಟಾಲಜಿಸ್ಟ್ ಸಂದೀಪ್ ದಾಸ್ ಹೇಳಿದ್ದಾರೆ.