ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ ಆಯ್ಕೆ | ಕಾಫಿ ಉದ್ದಿಮೆಗೆ, ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ |

October 28, 2023
5:31 PM

ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ(President of Coffee Board)ಕೃಷಿಕ ಪತ್ರಿಕೆ ಪ್ರಕಾಶಕ, ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ(M.J.Dinesh Devarunda)ಇವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಲವು ಸಮಯದಿಂದ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ತೆರವಾಗಿತ್ತು, ಇದೀಗ ಕೇಂದ್ರ ಸರ್ಕಾರದ(Central govt) ಅಧೀನದಲ್ಲಿ ಇರುವ ಪ್ರತಿಷ್ಠಿತ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಾಫಿ ಬೆಳೆಗಾರರೊಬ್ಬರನ್ನು ನೇಮಕ ಮಾಡಲಾಗಿದೆ.

Advertisement
Advertisement
Advertisement

ಈ ಹಿಂದೆಯೆಲ್ಲ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ಐ.ಎ.ಎಸ್. ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿತ್ತು. ಎನ್.ಡಿ.ಎ.ಅಧಿಕಾರಕ್ಕೆ ಬಂದ ಮೇಲೆ ಕಾಫಿ ಬೆಳೆಗಾರರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಪರಿಪಾಟ ಆರಂಭಿಸಲಾಗಿತ್ತು. ಹೊಸ ನಿಯಮ ಜಾರಿಗೆ ಬಂದ ನಂತರ ಒಂದು ಅವಧಿಗೆ ಚಿಕ್ಕಮಗಳೂರು ಜಿಲ್ಲೆಯ ಎಂ.ಎಸ್.ಬೋಜೇಗೌಡರು ಕಾಫಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಕಳೆದ ವರ್ಷ ಹೆಜ್ಜೇನು ದಾಳಿಯಿಂದ ದುರ್ಮರಣ ಹೊಂದಿದ್ದರು. ಕಾಫಿ ಮಂಡಳಿ ನೂತನ ಸಾರಥಿಯಾಗಿರುವ ದಿನೇಶ್ ಅವರು ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದವರು. ಮೂಲತಃ ಇವರದ್ದು ಮೇಕನಗದ್ದೆ ಗ್ರಾಮ.

Advertisement

ದಿನೇಶ್ ಮೇಕನಗದ್ದೆ ಗ್ರಾಮದ ಜಗನ್ನಾಥ ಗೌಡ, ಕಮಲಮ್ಮ ದಂಪತಿಗಳ ಪುತ್ರ, ಪತ್ನಿ ಚೈತ್ರಾ ಸಾಪ್ಟ್ ವೇರ್ ಇಂಜಿನಿಯರ್, ಮಗಳು ಓದು ಮುಗಿಸಿ ಉದ್ಯೋಗದಲ್ಲಿದ್ದು, ಮಗ ಡೆಹ್ರಾಡೂನ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ದಿನೇಶ್ ಅವರು ಕಳೆದ 18 ವರ್ಷಗಳಿಂದ ಕೃಷಿಕ ಎಂಬ ಪತ್ರಿಕೆ ನಡೆಸುತ್ತಿದ್ದಾರೆ. ಜೊತೆಗೆ ಕಾಫಿ ಉದ್ದಿಮೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾಳು ಮೆಣಸಿಗೆ ಸಂಬಂಧಿಸಿದಂತೆ ಬ್ಲಾಕ್ ಗೋಲ್ಡ್ ಲೀಗ್ ಸಂಸ್ಥೆಯ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕಮಗಳೂರಿಗೆ ಸ್ಪೈಸ್ ಪಾರ್ಕ್ ತರುವುದರಲ್ಲಿ ಇವರ ಪ್ರಯತ್ನ ಪ್ರಮುಖವಾಗಿದೆ. ಕೃಷಿಕ ಆಪ್ ಮೂಲಕ ಕೃಷಿ ಮಾಹಿತಿಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದು ಮೂಡಿಗೆರೆ ಟಿಎಪಿಸಿಎಂಎಸ್, ಹಂತೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ವಿಧಾನಗಳ ಬಗ್ಗೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಬಗ್ಗೆ ಆನೇಕ ಕಾರ್ಯಾಗಾರಗಳನ್ನು, ತರಬೇತಿ ಶಿಬಿರಗಳನ್ನು, ಹಳ್ಳಿ ಹಬ್ಬದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ತಮ್ಮದೇ ಆದ ಪ್ರಕಾಶನ ಸಂಸ್ಥೆಯಿಂದ ಕೃಷಿ ಸಂಬಂಧಿತ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜಕೀಯವಾಗಿ ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬಿ.ಜೆ.ಪಿ. ರೈತ ಮೋರ್ಚ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಉತ್ತಮ ವಾಗ್ಮಿ ಮತ್ತು ಕೃಷಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ.

Advertisement

ದಿನೇಶ್ ಅವರು ಇದೀಗ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಫಿ ಉದ್ದಿಮೆಯ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿರುವ ಮತ್ತು ತಮ್ಮದೇ ಆದ ಕನಸು, ದೃಷ್ಟಿಕೋನ ಹೊಂದಿರುವ ದಿನೇಶ್ ಅವರಿಂದ ಕಾಫಿ ಉದ್ದಿಮೆಗೆ ಮತ್ತು ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ ಮತ್ತು ಹಾರೈಕೆ ಎಲ್ಲರದಾಗಿದೆ.

The central government has appointed M.J. Dinesh Devarunda, a coffee grower and publisher of agricultural magazine, as the new President of Coffee Board. The post of chairman of the coffee board was vacant for a long time, now a coffee grower has been appointed to the post of chairman of the prestigious coffee board under the central government.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror