ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ ಚಿಂತೆಗೆ ಒಳಗಾಗಿರುವವರಿಗೆ ಇದೀಗ ಕರ್ನಾಟಕ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಅದೇನೆಂದರೆ ʼಸ್ವಾವಲಂಬಿ ಸಾರಥಿʼ ಯೋಜನೆ. ಈ ಯೋಜನೆಯ ಮೂಲಕ ನಿಮ್ಮ ಕನಸನ್ನು ನನಸಾಗಿಸಬಹುದು.
ಈ ಯೋಜನೆಯು ಮುಖ್ಯವಾಗಿ ಪರಿಶಿಷ್ಠ ಪಂಗಡದ (ST) ಯುವಜನತೆಯನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ರೂಪಿಸಲಾಗಿದೆ ಈ ಯೋಜನೆಯ ಅಡಿಯಲ್ಲಿ ನೀವು ಟ್ಯಾಕ್ಟರ್ ಅಥವಾ ಸಾರಿಗೆ ವಾಹನ ಖರೀದಿಸಿದರೆ, ಸರ್ಕಾರವೇ ನಿಮಗೆ ರೂ 4 ಲಕ್ಷದವರೆಗೆ ಸಹಾಯಧನ ನೀಡಲಿದೆ.
ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಬಿಪಿಎಲ್ ರೇಷನ್ ಕಾರ್ಡ್
• ಚಾಲ್ತಿಯಲ್ಲಿರುವ ಡ್ರೈವಿಂಗ್ ಲೈಸೆನ್ಸ್
• ಜಾತಿ ಮತ್ತು ಆದಾಯ ದೃಡೀಕರಣ ಪತ್ರ
• ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಭಾವಚಿತ್ರ
ಅರ್ಜಿ ಸಲ್ಲಿಸುವ ಸ್ಥಳ: ಕರ್ನಾಟಕದ ಸುವಿಧಾ ಪೋರ್ಟಲ್ ಅಥವಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

