ಇಂದು ಸೆಮಿ ಫೈನಲ್‌ ಕದನ | ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ |

November 15, 2023
12:06 PM

ಇಂದು ಎಲ್ಲರ ಚಿತ್ತ ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿರುವ ವಿಶ್ವಕಪ್‌ನ (World Cup) ಸೆಮಿಫೈನಲ್(Semi Final) ಪಂದ್ಯದ‌ ಮೇಲೆ. ಈ ಬಾರಿಯ ವಿಶ್ವಕಪ್‌ನ ಹಾಟ್ ಫೇವರೇಟ್ ಬಲಿಷ್ಠ ಭಾರತವನ್ನು ಎದುರಿಸಲು ನ್ಯೂಜಿಲೆಂಡ್ (New Zealand) ಉತ್ತಮ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಬಾರಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ಭಾರತ ತಂಡ, ಈ ಬಾರಿ ಅದೇ ತಂಡದ ವಿರುದ್ದ ಸೆಮಿಫೈನಲ್ ಆಡುತ್ತಿದ್ದು, ಈ ಬಾರಿ ಗೆಲುವಿನ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

Advertisement
Advertisement
Advertisement

ಏಕದಿನ ವಿಶ್ವಕಪ್ ಮಹಾ ಸಂಗ್ರಾಮ ಉಪಾಂತ್ಯಕ್ಕೆ ಬಂದಾಗಿದೆ. ಬಲಿಷ್ಠ ನಾಲ್ಕು ತಂಡಗಳ ಕಾದಾಟಕ್ಕೆ ರಣಾಂಗಣ ಕೂಡ ಸಜ್ಜಾಗಿದೆ. ಆದರೆ, ಈ ಬಾರಿಯ ಸೆಮಿಫೈನಲ್‌ನ ಮೊದಲ ಪಂದ್ಯ ಕೇವಲ ಪಂದ್ಯವಾಗಿ ಉಳಿದಿಲ್ಲ. ಬದಲಾಗಿ ಕಿವೀಸ್ ಪಡೆಯ ವಿರುದ್ಧ ಭಾರತ ತಂಡದ ಸೇಡಿನ ಸಮರವಾಗಿದೆ. ಐಸಿಸಿ (ICC) ಟೂರ್ನಿಯಲ್ಲಿ ಭಾರತ ತಂಡಕ್ಕೆ ಕಿವೀಸ್ ನೀಡಿದ ಆ ಎರಡು ಬ್ಯಾಕ್ ಟು ಬ್ಯಾಕ್ ಶಾಕ್ ಇನ್ನೂ ಕೂಡ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಾಗಿ ಉಳಿದಿದ್ದು, ಈ ಬಾರಿಯ ವಿಶ್ವಕಪ್ ಸೆಮಿಸ್‌ನಲ್ಲಿ ಮುಯ್ಯಿ ತೀರಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ಕೂಡ ಹಳೇ ನೋವು ಮರೆಸುವ ನಿಟ್ಟಿನಲ್ಲಿ ಸಜ್ಜಾಗಿದೆ.

Advertisement

2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತೀಯರು ಇಂದಿಗೂ ಆ ಸೋಲಿನ ನೋವು ಮರೆತಿಲ್ಲ. 2019ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ್ದ ನ್ಯೂಜಿಲೆಂಡ್, ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರು ಮಾಡಿತ್ತು. ಇದಕ್ಕೆಲ್ಲಾ ಕಾರಣ ಧೋನಿಯ (MS Dhoni) ಆ ಒಂದೇ ಒಂದು ರನೌಟ್. ಆ ಪಂದ್ಯದಲ್ಲಿ ಕೊನೆಯ ಓವರ್‌ಗಳಲ್ಲಿ ಎಡವಿದ್ದ ಭಾರತ ತಂಡ ಸೆಮಿಸ್‌ನಲ್ಲಿ ಸೋಲುವ ಮೂಲಕ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕನಸಾಗೇ ಉಳಿದಿತ್ತು. ಕ್ರಿಕೆಟ್ ಪ್ರೇಮಿಗಳಿಗೆ ಈ ನೋವು ಮಾಸುವ ಮುನ್ನವೇ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲೂ ಕೂಡ ಭಾರತಕ್ಕೆ ನ್ಯೂಜಿಲೆಂಡ್ ಶಾಕ್ ನೀಡಿ ಚಾಂಪಿಯನ್ ಆಗಿ ಗೆದ್ದು ಬೀಗಿತ್ತು. ಆ ಎರಡು ಸೋಲುಗಳಿಗೆ ಇಂದು ಮುಯ್ಯಿ ತೀರಿಸಿಕೊಳ್ಳುವ ಸಮಯ ಬಂದಿದ್ದು, ಟೀ ಇಂಡಿಯಾ ಕೂಡ ಭರ್ಜರಿ ತಯಾರಿ ನಡೆಸಿದೆ.

ಇನ್ನೂ ಐಸಿಸಿ ವಿಶ್ವಕಪ್ 2023ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿದರೆ ಭಾರತ ಬಲಿಷ್ಠ ತಂಡವೇ ಆಗಿದೆ. ಆದರೆ ಉಭಯ ತಂಡಗಳ ವಿಶ್ವಕಪ್ ಮುಖಾಮುಖಿಯಲ್ಲಿ ಕಿವೀಸ್ ಬಲಿಷ್ಠವಾಗಿದೆ. 2003ರ ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಕೊನೆಯ ಬಾರಿಗೆ ಜಯ ಸಾಧಿಸಿತ್ತು. ಆ ಬಳಿಕ 2007, 2011 ಮತ್ತು 2015ರ ವಿಶ್ವಕಪ್ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಆಡಿರಲಿಲ್ಲ. ಒಟ್ಟು 10 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಐದು ಪಂದ್ಯಗಳನ್ನು ಗೆದ್ದರೆ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ ಈ ಅಂಕಿ ಅಂಶ ಈ ಬಾರಿ ದೊಡ್ಡ ಮಟ್ಟಿಗೆ ವರ್ಕೌಟ್ ಆಗಿಲ್ಲ ಅನ್ನೋದು ಅವರ ಲೆಕ್ಕಾಚಾರ.

Advertisement

ಇನ್ನೂ ಈಗಾಗಲೇ ಅಜೇಯವಾಗಿ ಉಪಾಂತ್ಯಕ್ಕೆ ತಲುಪಿರೋ ಟೀ ಇಂಡಿಯಾ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲೂ ಬಲಿಷ್ಠವಾಗಿಯೇ ಇದೆ. ಜೊತೆಗೆ ಈಗಾಗಲೇ ಕಳೆದ ಪಂದ್ಯಗಳಲ್ಲಿ ಆಡಿದ್ದ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಇವತ್ತಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಬಹುತೇಕ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಇತ್ತ ನ್ಯೂಜಿಲೆಂಡ್ ಕೂಡ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಕೊಂಚ ಎಡವಿತ್ತು. ಆದರೆ ಸೆಮಿಸ್‌ಗೆ ಬರುವಲ್ಲಿ ಯಶಸ್ವಿಯಾಗಿತ್ತು.

– ಅಂತರ್ಜಾಲ ಮಾಹಿತಿ

Advertisement

Team India, the hot favorite of this World Cup, will face New Zealand in the first semi-final of the World Cup today. The Indian team, which was disappointed by losing to New Zealand in the last World Cup semi-final, is playing the semi-final against the same team this time and is looking to take revenge by winning this time.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror